ವಿದ್ಯಾರ್ಥಿಗಳ ಮೇಲಿನ ಎಫ್​ಐಆರ್ ಹಿಂಪಡೆಯುವ ಬೇಡಿಕೆ ಈಡೇರಿಸದಿದ್ರೆ, ಮತ್ತೆ ಹೋರಾಟ: ಕೇಂದ್ರಕ್ಕೆ ಸಿಜೆಪಿ ಎಚ್ಚರಿಕೆ | CJP warns Centre

ಕಪಿಲ್ ಸಿಬಲ್ ಜೊತೆ  ಗೌರವ್ ದಾಸ್, ಅಶುತೋಷ್ ಸುದ್ದಿಗೋಷ್ಠಿ
ಕಪಿಲ್ ಸಿಬಲ್ ಜೊತೆ ಗೌರವ್ ದಾಸ್, ಅಶುತೋಷ್ ಸುದ್ದಿಗೋಷ್ಠಿ
Published on
ನವದೆಹಲಿ: ದೆಹಲಿಯ ಜಂತರ್​ಮಂತರ್​ನಲ್ಲಿ ನಡೆದ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳು ಮತ್ತು ಸಂಘಟಕರ ವಿರುದ್ಧ ಹಾಕಿದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯದಿದ್ದರೆ, ಮತ್ತು ಅದರ ಬಗ್ಗೆ ಲಿಖಿತ ಭರವಸೆ ನೀಡದಿದ್ದರೇ ಮತ್ತೆ ಹೋರಾಟ ಆರಂಭಿಸುವುದಾಗಿ ಕೇಂದ್ರ ಸರ್ಕಾರಕ್ಕೆ(CJP warns Centre) ಸೋಮವಾರ(ಜು. 27) ಸಿಜೆಪಿ ಎಚ್ಚರಿಕೆ ನೀಡಿದೆ.
ನವದೆಹಲಿಯಲ್ಲಿ ಹಿರಿಯ ರಾಜ್ಯಸಭಾ ಸಂಸದ ಮತ್ತು ಖ್ಯಾತ ವಕೀಲ ಕಪಿಲ್ ಸಿಬಲ್ ಜೊತೆ ಸುದ್ದಿಗೋಷ್ಠಿ ನಡೆಸಿದ ಸಿಜೆಪಿ ವಕ್ತಾರರಾದ ಗೌರವ್ ದಾಸ್ ಮತ್ತು ಅಶುತೋಷ್ ರಂಕಾ, ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ಮಂಗಳವಾರದೊಳಗೆ ಭರವಸೆ ಸಿಗದಿದ್ದರೆ ತನ್ನ ಆಂದೋಲನವನ್ನು ಪುನರಾರಂಭಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶುತೋಷ್ ರಂಕಾ, ಜಂತರ್ ಮಂತರ್‌ನಲ್ಲಿ 36 ದಿನಗಳ ಕಾಲ ನಡೆದ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವ ಮೊದಲು ಸರ್ಕಾರದೊಂದಿಗೆ ನಡೆದ ಮೂರನೇ ಸುತ್ತಿನ ಮಾತುಕತೆಯಲ್ಲಿ ಈ ವಿಷಯವನ್ನು ಚರ್ಚಿಸಲಾಗಿದೆ ಎಂದು ಹೇಳಿದ್ದಾರೆ.
ದೇಶಾದ್ಯಂತ ಪ್ರತಿಭಟನಾಕಾರರು ಮತ್ತು ಸಂಘಟಕರ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ಹಿಂಪಡೆಯಲಾಗುವುದು. ಮತ್ತು ಭವಿಷ್ಯದಲ್ಲಿ ಯಾವುದೇ ಸಂಘಟಕರು ಮತ್ತು ಪ್ರತಿಭಟನಾಕಾರರ ವಿರುದ್ಧ ಹೊಸ ಎಫ್‌ಐಆರ್ ದಾಖಲಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ನಮಗೆ ಭರವಸೆ ನೀಡಿತ್ತು. ಕೇಂದ್ರ ಸಚಿವರಾದ ಜೆಪಿ ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರು ಕಾನೂನು ಸಮಾಲೋಚನೆಗಳ ನಂತರ ಮಂಗಳವಾರದೊಳಗೆ ಸರ್ಕಾರವು ಲಿಖಿತ ಒಪ್ಪಂದವನ್ನು ಹಂಚಿಕೊಳ್ಳುತ್ತದೆ ಎಂದಿದ್ದಾರೆ.
ಸರ್ಕಾರವು ಲಿಖಿತ ಭರಸವೆಯನ್ನು ನೀಡುವುದಕ್ಕಾಗಿ ನಾವು ಕಾಯುತ್ತಿದ್ದೇವೆ. ನಾಳೆಯೊಳಗೆ ಯಾವುದೇ ಭರವಸೆ ನೀಡದಿದ್ದರೇ, ಬಂಧಿಸಲಾದ ಪ್ರತಿಭಟನಾಕಾರರು ಮತ್ತು ಸಂಘಟಕರನ್ನು ಬಿಡುಗಡೆ ಮಾಡದಿದ್ದರೆ, ಸಂಘಟನೆಯು ಮತ್ತೆ ಪ್ರತಿಭಟನೆ ನಡೆಸುವ ಯೋಚಿಸುತ್ತದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net