CJP NEET Protest: ಅಭಿಜಿತ್​ನನ್ನು ಬಂಧಿಸಿದರೆ ನಾನು ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತೇನೆ; ಜಿರಳೆ ನಾಯಕನ ಪರ ನಿಂತ ಸೋನಮ್ ವಾಂಗ್ಚುಕ್! Sonam Wangchuk Backs Abhijit Dipke

ಅಭಿಜಿತ್ ದೀಪ್ಕೆಯನ್ನು ಬಂಧಿಸಿದರೆ 42 ದಿನಗಳ ಉಪವಾಸದ ಎಚ್ಚರಿಕೆ
ಅಭಿಜಿತ್ ದೀಪ್ಕೆಯನ್ನು ಬಂಧಿಸಿದರೆ 42 ದಿನಗಳ ಉಪವಾಸದ ಎಚ್ಚರಿಕೆ
Published on

ಪ್ರಮುಖ ಮುಖ್ಯಾಂಶಗಳು

  • ನೀಟ್, ಸಿಬಿಎಸ್ಇ ಪೇಪರ್ ಲೀಕ್ ಖಂಡಿಸಿ ದೆಹಲಿಯಲ್ಲಿ ಜಿಜೆಪಿ ಪ್ರತಿಭಟನೆ!
  • ಅಭಿಜಿತ್ ದೀಪ್ಕೆ ಬೆಂಬಲಕ್ಕೆ ನಿಂತ ಸೋನಮ್ ವಾಂಗ್ಚುಕ್
  • ಅಭಿಜಿತ್ ದೀಪ್ಕೆಯನ್ನು ಬಂಧಿಸಿದರೆ 42 ದಿನಗಳ ಉಪವಾಸದ ಎಚ್ಚರಿಕೆ
ನವದೆಹಲಿ: ನೀಟ್​ (NEET), ಸಿಬಿಎಸ್​ಇ (CBSE) ಹಾಗೂ ಸಿಟಿಯುಇ (CUET) ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಶ್ನಿಸಿ, ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್​ ಅವರ ರಾಜೀನಾಮೆ ಕೋರಿ ಕಾಕ್ರೋಜ್​ ಜನತಾ ಪಾರ್ಟಿ (CJP) ದೆಹಲಿಯ ಜಂತರ್​-ಮಂತರ್​ನಲ್ಲಿ ಪ್ರತಿಭಟನೆ ನಡೆಸುತ್ತಿದೆ.
ಈ ಪ್ರತಿಭಟನೆಗೆ ಕಾಕ್ರೋಚ್​ ಪಾರ್ಟಿ ಸ್ಥಾಪಕ ಅಭಿಜಿತ್​ ದೀಪ್ಕೆ ಸಹ ಆಗಮಿಸಿದ್ದು, ಖ್ಯಾತ ಹವಾಮಾನ ಸಂಬಂಧಿ ಹೋರಾಟಗಾರ ಸೋನಮ್ ವಾಂಗ್ಚುಕ್ (Sonam Wangchuk Backs Abhijit Dipke) ಸಹ ಈ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.

ಅಭಿಜಿತ್​ನನ್ನು ಬಂಧಿಸಿದರೆ ಉಪವಾಸ ಮಾಡುತ್ತಾನೆ

ಜಂತರ್​-ಮಂತರ್​ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಅಮೆರಿಕದಿಂದ ಅಭಿಜಿತ್​ ದೀಪ್ಕೆ ಆಗಮಿಸಿದ್ದಾನೆ. ಒಂದು ವೇಳೆ ಅವರನ್ನು ದೆಹಲಿ ಪೊಲೀಸರು ಬಂಧಿಸಿದರೆ, ನಾನು 42 ದಿನಗಳ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸೋನಮ್ ವಾಂಗ್ಚುಕ್ ಎಚ್ಚರಿಕೆ ನೀಡಿದ್ದಾರೆ.
ದೆಹಲಿಗೆ ಬಂದಿಳಿದ ದೀಪ್ಕೆ!
ಪ್ರತಿಭಟನೆಯನ್ನು ಕೇವಲ ಆನ್‌ಲೈನ್‌ಗೆ ಸೀಮಿತಗೊಳಿಸದ ಅಭಿಜಿತ್ ದೀಪ್ಕೆ, ಈಗ ನೇರವಾಗಿ ಕಣಕ್ಕಿಳಿಯಲು ಅಮೆರಿಕದಿಂದ ಭಾರತಕ್ಕೆ ವಿಮಾನ ಹತ್ತಿದ್ದಾನೆ. ಶುಕ್ರವಾರ (ಜೂ.5) ಬೆಳಗ್ಗೆ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಹಾಕಿರುವ ಆತ, ಭಾರತಕ್ಕೆ ಮರಳುತ್ತಿದ್ದೇನೆ, ನನ್ನ ಹಣೆಬರಹವನ್ನು ದೇಶದ ಸಂವಿಧಾನದ ಕೈಯಲ್ಲಿ ಇಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾನೆ.
ಶನಿವಾರ (ಜೂ.6) ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭದ್ರತೆಯೊಂದಿಗೆ ಆಚೆ ಕಾಲಿಡುತ್ತಲೇ ಅಭಿಜಿತ್​ ದೀಪ್ಕೆ, ಡಾ ಬಿಆರ್​ ಅಂಬೇಡ್ಕರ್​ ಅವರ ಮೈ ಆಟೋಗ್ರಾಫ್​ ಪುಸ್ತಕವನ್ನು ಹಿಡಿದು ಏರ್​ಪೋರ್ಟ್​ನಿಂದ ಆಚೆ ಬಂದಿದ್ದಾರೆ.

ನಮ್ಮ ಅನುಮತಿ ಪಡೆದಿಲ್ಲ!

ಕಾಕ್ರೋಚ್​ ಜನತಾ ಪಾರ್ಟಿ ಜಂತರ್​-ಮಂತರ್​ನಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಗೆ ದೆಹಲಿ ಪೊಲೀಸರಿಂದ ಯಾವುದೇ ಅನುಮತಿ ಪಡೆದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಪ್ರತಿಭಟನೆ ಚೌಕಟ್ಟನ್ನು ಮೀರಿ ನಡೆದರೆ ಏನು ಮಾಡಬೇಕೆಂದು ನಮಗೆ ತಿಳಿದಿದೆ, ಸಾವಿರಾರು ಜನ ಸೇರಲಿರುವ ಮಾಹಿತಿ ಇರುವ ಕಾರಣ 1,000 ಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ಹೇಳಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net