ಈ ಮೂಲಕ ತಮ್ಮ ಪುತ್ರ ಅನ್ಬುಮಣಿ ವಿರುದ್ಧ ಕಾನೂನು ಸಮರ ಸಾರಿದ್ದ ರಾಮದಾಸ್ಗೆ ಆಘಾತ ಎದುರಾಗಿದ್ದು, ಅನ್ಬುಮಣಿ ಬಣಕ್ಕೆ ದೊಡ್ಡ ಮಟ್ಟದ ರಾಜಕೀಯ ಬಲ ಸಿಕ್ಕಂತಾಗಿದೆ. 2025ರಲ್ಲಿ ಡಾ. ರಾಮದಾಸ್ ತಮ್ಮ ಪುತ್ರನನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಿ ತಾವೇ ಆ ಸ್ಥಾನವನ್ನು ಅಲಂಕರಿಸುವುದಾಗಿ ಘೋಷಿಸಿದ್ದರು. ಆದರೆ, ಈ ಕ್ರಮವನ್ನು ಕಾನೂನುಬಾಹಿರ ಎಂದು ಕರೆದಿದ್ದ ಅನ್ಬುಮಣಿ, ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯು ತಮ್ಮನ್ನು ನೇಮಿಸಿರುವುದರಿಂದ ತಾವೇ ಅಧಿಕೃತ ಮುಖ್ಯಸ್ಥ ಎಂದು ವಾದಿಸಿದ್ದರು.