2025 ಡಿಸೆಂಬರ್ 27ರಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಪನ್ವೇಲ್ ಫಾರ್ಮ್‌ಹೌಸ್‌ನಲ್ಲಿ ನಡೆದ ಹುಟ್ಟುಹಬ್ಬದ ಪಾರ್ಟಿಗೆ ಧೋನಿ ತಮ್ಮ ಪತ್ನಿ ಸಾಕ್ಷಿ ಅವರೊಂದಿಗೆ ಆಗಮಿಸಿದ್ದರು. ಧೋನಿ ಕಾರಿನಿಂದ ಇಳಿಯುವ ಸಂದರ್ಭದಲ್ಲಿ ಪಾಪರಾಜಿಗಳು (ಛಾಯಾಗ್ರಾಹಕರು) ವಿಡಿಯೋ ಚಿತ್ರೀಕರಿಸಿದ್ದಾರೆ. ಈ ವೇಳೆ ಕ್ಯಾಮೆರಾ ಜೂಮ್ ಮಾಡಿದಾಗ, ಕಾರಿನ ಹಿಂಭಾಗದ ಸೀಟಿನ ಮೇಲೆ ಸಿಗರೇಟ್ ಪ್ಯಾಕೆಟ್ ಇರುವುದು ಕಂಡುಬಂದಿದೆ.