ಅಂದಹಾಗೆ, ಸೈಬರ್ ಖದೀಮರ ಪ್ರಮುಖ ಟಾರ್ಗೆಟ್ ಹಬ್ಬಗಳು ಎಂದು ಸೈಬರ್ ತಜ್ಞರು ಹೇಳುತ್ತಾರೆ. ಏಕೆಂದರೆ, ಹಬ್ಬದ ಸಮಯದಲ್ಲಿ ಜನರ ಮೂಡ್ ಹೆಚ್ಚು ನಿರಾಳರಾಗಿರುತ್ತಾರೆ, ವಿಚಲಿತರಾಗುತ್ತಾರೆ ಮತ್ತು ಭಾವನಾತ್ಮಕವಾಗಿ ಇರುತ್ತಾರೆ. ಈ ಸಮಯದಲ್ಲಿ ಅನುಮಾನಾಸ್ಪದ ಸಂದೇಶಗಳ ಬಗ್ಗೆ ಹೆಚ್ಚು ತೆಲೆಕಡಿಸಿಕೊಳ್ಳುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಳ್ಳುವ ವಂಚಕರು ನಿಮ್ಮ ಆಫರ್ ಇಂದೇ ಮುಕ್ತಾಯಗೊಳ್ಳುತ್ತದೆ ಅಥವಾ ನಿಮ್ಮ ಕ್ರಿಸ್ಮಸ್ ಬಹುಮಾನವನ್ನು ಪಡೆಯಲು ತಕ್ಷಣವೇ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಎಂದು ವಾಟ್ಸ್ಆ್ಯಪ್ ಬಳಕೆದಾರರಿಗೆ ಸಂದೇಶವನ್ನು ಕಳುಹಿಸಿಕೊಡುತ್ತಾರೆ. ಈ ಬಗ್ಗೆ ಅರಿಯದೆ ಲಿಂಕ್ ಕ್ಲಿಕ್ ಮಾಡುವ ಮೂಲಕ ಎಷ್ಟೋ ಮಂದಿ ಹಣ ಕಳೆದುಕೊಂಡಿದ್ದಾರೆ. ನಿಮಗೆನಾದರೂ ವಂಚನೆಯ ಬಗ್ಗೆ ಅನುಮಾನ ಬಂದರೆ, ತಕ್ಷಣವೇ ನಿಮ್ಮ ಬ್ಯಾಂಕ್ಗೆ ವರದಿ ಮಾಡಿ ಮತ್ತು ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿ 1930 ಅನ್ನು ಡಯಲ್ ಮಾಡಿ.