'ತುಂಬಾ ನೋವಿನಿಂದ ಕೂಡಿದೆ, ಇದರಿಂದ ಹೊರಬರುವುದು ನನಗೆ ಸುಲಭವಲ್ಲ' ಪಲಾಶ್ ಮುಚ್ಚಲ್ ಜೊತೆಗಿನ ವದಂತಿಗಳ ಬಗ್ಗೆ ಮೌನ ಮುರಿದ ನಂದಿಕಾ ದ್ವಿವೇದಿ ... Smriti Mandhana

 Smriti Mandhana
Smriti Mandhana
Published on
ಮುಂಬೈ: ನ.23ರಂದು ನಡೆಯಬೇಕಿದ್ದ ಟೀಮ್​ ಇಂಡಿಯಾದ ಆಟಗಾರ್ತಿ ಸ್ಮೃತಿ ಮಂಧಾನ ( Smriti Mandhana ) ಮತ್ತು ಸಂಗೀತ ನಿರ್ದೇಶಕ ಪಲಾಶ್​ ಮುಚ್ಚಲ್ ಮದುವೆ ನಿಂತಿದೆ ಎನ್ನುವ ಸುದ್ದಿ ಸೋಶಿಯಲ್​​ ಮೀಡಿಯಾದಲ್ಲಿ ಹಬ್ಬುತ್ತಿದ್ದಂತೆ ನೃತ್ಯ ನಿರ್ದೇಶಕರಾದ ನಂದಿಕಾ ದ್ವಿವೇದಿ ಮತ್ತು ಗುಲ್ನಾಜ್ ಎರಡೂ ಹೆಸರುಗಳು ದೇಶಾದ್ಯಂತ ಟ್ರೆಂಡಿಂಗ್ ಆಗಲು ಪ್ರಾರಂಭಿಸಿದವು, ಹೀಗಾಗಿ ನಿನ್ನೆ ಗುಲ್ನಾಜ್ ಸ್ಪಷ್ಟನೆ ನೀಡಿದ್ದರು. ಈ ಬೆನ್ನಲ್ಲೇ ಇದೀಗ ನಂದಿಕಾ ದ್ವಿವೇದಿ ಕೂಡಾ ಸ್ಪಷ್ಟನೆ ನೀಡಿದ್ದಾರೆ.
ಮಹಾರಾಷ್ಟ್ರ ಮೂಲದ ಸ್ಮೃತಿ ಮಂಧಾನ, ಇಂದೋರ್‌ ಮೂಲದ ಪಲಾಶ್ ಮುಚ್ಚಲ್ ಅವರೊಂದಿಗೆ 2019ರಿಂದಲೂ ಡೇಟಿಂಗ್ ಮಾಡುತ್ತಿದ್ದರು. ಕೆಲವು ವರ್ಷಗಳ ಹಿಂದೆ ಇಬ್ಬರೂ ತಮ್ಮ ಸಂಬಂಧವನ್ನು ಅಧಿಕೃತವಾಗಿ ಘೋಷಿಸಿದರು. ಸ್ಮೃತಿ ಅವರು ಟೀಮ್​ ಇಂಡಿಯಾದ ಆರಂಭಿಕ ಆಟಗಾರ್ತಿ ಮತ್ತು ಉಪನಾಯಕಿಯಾಗಿದ್ದರೆ, ಪಲಾಶ್ ಮುಚ್ಚಲ್​ ಬಾಲಿವುಡ್‌ನಲ್ಲಿ ಸಂಗೀತ ನಿರ್ದೇಶಕನಾಗಿದ್ದಾರೆ. ನವೆಂಬರ್ 23 ರಂದು ಮದುವೆ ನಡೆಯಬೇಕಿತ್ತು. ಆದರೆ, ಸಂಜೆಯೊತ್ತಿಗೆ ಇಡೀ ಚಿತ್ರಣವೇ ಬದಲಾಯಿತು. ಮದುವೆಯನ್ನು ಮುಂದೂಡಲಾಗಿದೆ ಎಂಬ ಸುದ್ದಿ ಹೊರಬಿತ್ತು.
ತಂದೆ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾದ ನಂತರ, ಸ್ಮೃತಿ ಅವರು ತನ್ನ ಮದುವೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ಕೇಳಿಕೊಂಡಿದ್ದಾರೆ. ಹೀಗಾಗಿ ಮದುವೆಯನ್ನು ಮುಂದೂಡಲಾಗಿದೆ ಎಂದು ಅವರ ಮ್ಯಾನೇಜರ್ ಬಹಿರಂಗಪಡಿಸಿದ್ದಾರೆ. ಅದಾದ ನಂತರ, ಪಲಾಶ್ ಕೂಡ ಅನಿರೀಕ್ಷಿತವಾಗಿ ಆಸ್ಪತ್ರೆಗೆ ದಾಖಲಾಗಿದರು. ಈ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಪಲಾಶ್ ಅವರು ಮೇರಿ ಡಿ'ಕೋಸ್ಟಾ ಎಂಬ ನೃತ್ಯ ನಿರ್ದೇಶಕಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಹರಿಬಿಡಲಾಯಿತು. ಅಲ್ಲದೆ, ಪಲಾಶ್​ ಮತ್ತು ಮುಚ್ಚಲ್​ ಚಾಟ್​ ಮಾಡಿದ್ದಾರೆ ಎನ್ನಲಾದ ಸ್ಕ್ರೀನ್‌ಶಾಟ್‌ಗಳನ್ನು ಸಹ ಹರಿಬಿಡಲಾಯಿತು. ಇದರಲ್ಲಿ ಪಲಾಶ್ ಅವರು ಸ್ಮೃತಿಯ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಆಕೆ ತನಗೆ ಸರಿಯಾಗಿ ಟೈಂ ಕೊಡುತ್ತಿಲ್ಲ ಎಂದು ಪಲಾಶ್​ ಹೇಳಿಕೊಂಡಿದ್ದಾರೆ. ಅಲ್ಲದೆ, ತನ್ನೊಂದಿಗೆ ಡೇಟ್​ ಮಾಡುವಂತೆ ಪಲಾಶ್​ ಕೇಳಿಕೊಂಡಿದ್ದಾರೆ. ಆದರೆ, ವೈರಲ್​ ಆಗಿರುವ ಸ್ಕ್ರೀನ್​ಶಾಟ್​ಗಳ ಬಗ್ಗೆ ಯಾವುದೇ ದೃಢೀಕರಣವಿಲ್ಲ. ಅದೊಂದು ವದಂತಿಯಾಗಿದೆ.
ಪಲಾಶ್​ ಬಗ್ಗೆ ತಿಳಿದ ಸ್ಮೃತಿಯ ತಂದೆ ಶ್ರೀನಿವಾಸ್​ ನವೆಂಬರ್​ 22ರ ರಾತ್ರಿಯೇ ಪಲಾಶ್ ಅವರನ್ನು ಎದುರಿಸಿ, ಪ್ರಶ್ನಿಸಿದ್ದಾರೆ ಎನ್ನಲಾಗುತ್ತಿದೆ. ಈ ವೇಳೆ ದೊಡ್ಡದಾಗಿ ಜಗಳ ಜಡೆದಿದೆ. ಎರಡೂ ಕುಟುಂಬಸ್ಥರ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ಶ್ರೀನಿವಾಸ್​ ಅವರಿಗೆ ಹೃದಯಾಘಾತವಾಗಿದೆ ಎಂದು ಗಾಸಿಪ್ ಹರಡುತ್ತಿದ್ದಾರೆ.
ಮದುವೆ ಮುಂದೂಡಿಕೆಯ ಸ್ವಲ್ಪ ಸಮಯದ ನಂತರ, ಸ್ಮೃತಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಿಂದ ಮದುವೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್‌ಗಳನ್ನು ಅಳಿಸಿಹಾಕಿರುವುದನ್ನು ಅಭಿಮಾನಿಗಳು ಗಮನಿಸಿದರು, ಅದರಲ್ಲಿ ಅವರ ನಿಶ್ಚಿತಾರ್ಥ ಮತ್ತು ಪ್ರಪೋಸಲ್ ಫೋಟೋಗಳು ಸೇರಿವೆ.
ಸೋಶಿಯಲ್​​ ಮೀಡಿಯಾದಲ್ಲಿ ಚರ್ಚೆಗಳು ಬಿಸಿಯಾಗುತ್ತಿದ್ದಂತೆ, ಸ್ಮೃತಿ ಮತ್ತು ಪಲಾಶ್‌ಗೆ ಅವರ ಮದುವೆ ನೃತ್ಯಗಳನ್ನು ಕಲಿಸಲು ನೇಮಕಗೊಂಡಿದ್ದ ಬೋಸ್ಕೊ ಗುಂಪಿನ ಇಬ್ಬರು ನೃತ್ಯ ನಿರ್ದೇಶಕರಾದ ನಂದಿಕಾ ದ್ವಿವೇದಿ ಮತ್ತು ಗುಲ್ನಾಜ್ ಅವರು ಈ ವಿವಾದದಲ್ಲಿ ಭಾಗಿಯಾಗಿದ್ದಾರೆ ಎಂದು ಅನಾಮಧೇಯ ಪೋಸ್ಟ್​​ವೊಂದು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿತ್ತು. ಈ ಆರೋಪವು ಕಾಡ್ಗಿಚ್ಚಿನಂತೆ ಹರಡಿತು, ಇದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು. ಕೆಲವೇ ಗಂಟೆಗಳಲ್ಲಿ, ಎರಡೂ ಹೆಸರುಗಳು ದೇಶಾದ್ಯಂತ ಟ್ರೆಂಡಿಂಗ್ ಆಗಲು ಪ್ರಾರಂಭಿಸಿದವು.
ಗುಲ್ನಾಜ್ ಸ್ಪಷ್ಟನೆ:
ಗುಲ್ನಾಜ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, “ನನ್ನ ಮತ್ತು ನನ್ನ ಸ್ನೇಹಿತೆ ನಂದಿಕಾ ಬಗ್ಗೆ ಸಾಕಷ್ಟು ಊಹಾಪೋಹಗಳು ಮತ್ತು ಸುಳ್ಳು ಹೇಳಿಕೆಗಳು ಹರಡುತ್ತಿರುವುದನ್ನು ನಾನು ಗಮನಿಸುತ್ತಿದ್ದೇನೆ, ಆದ್ದರಿಂದ ನಾವು ಈ ಸಮಸ್ಯೆಯಲ್ಲಿ ಭಾಗಿಯಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಲು ನಾನು ಬಯಸುತ್ತೇನೆ. ನಾವು ಯಾರನ್ನಾದರೂ ಸಾಮಾಜಿಕವಾಗಿ ತಿಳಿದಿದ್ದೇವೆ ಅಥವಾ ಅವರೊಂದಿಗೆ ಫೋಟೋ ತೆಗೆದುಕೊಂಡಿದ್ದೇವೆ ಎಂದ ಮಾತ್ರಕ್ಕೆ ನಾವು ಅವರ ವೈಯಕ್ತಿಕ ವಿಷಯಗಳಿಗೆ ಸಂಬಂಧಿಸಿದ್ದೇವೆಂದು ಅರ್ಥವಲ್ಲ. ದಯವಿಟ್ಟು ವಿಷಯಗಳನ್ನು ಗೌರವದಿಂದ ಇಟ್ಟುಕೊಳ್ಳೋಣ ಮತ್ತು ಆತುರದ ತೀರ್ಮಾನಗಳಿಗೆ ಬರುವುದು ಬೇಡ. ನಿಮ್ಮ ತಿಳುವಳಿಕೆ ಮತ್ತು ಬೆಂಬಲವನ್ನು ನಾವು ಪ್ರಶಂಸಿಸುತ್ತೇವೆ ” ಎಂದು ಬರೆದುಕೊಂಡು ಸ್ಪಷ್ಟನೆ ನೀಡಿದ್ದಾರೆ.
ನಂದಿಕಾ ದ್ವಿವೇದಿ ಸ್ಪಷ್ಟನೆ:
"ಕಳೆದ ಕೆಲವು ದಿನಗಳಿಂದ, ಬೇರೆಯವರ ವೈಯಕ್ತಿಕ ವಿಚಾರದಲ್ಲಿ ನನ್ನ ಹೆಸರು ಸೇರಿಸಿ ಬರುತ್ತಿರುವ ಊಹಾಪೋಹಗಳನ್ನು ನಾನು ನೋಡಿದ್ದೇನೆ. ನನ್ನ ಬಗ್ಗೆ ಮಾಡಲಾಗುತ್ತಿರುವ ಊಹೆಗಳು, ವಿಶೇಷವಾಗಿ ಯಾರೊಬ್ಬರ ಸಂಬಂಧವನ್ನು ಅಡ್ಡಿಪಡಿಸುವಲ್ಲಿ ನಾನು ಪಾತ್ರ ವಹಿಸಿದ್ದೇನೆ ಎಂಬುದು ನಿಜವಲ್ಲ ಎಂದು ನಾನು ತಿಳಿಸಲು ಮತ್ತು ಸ್ಪಷ್ಟಪಡಿಸಲು ಬಯಸುತ್ತೇನೆ. ನಾನು ಭಾಗವಹಿಸದ ಯಾವುದೋ ಒಂದು ವಿಷಯದ ಸುತ್ತ ನನ್ನ ಹೆಸರು ಕೇಳಿ ಬರುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ವಾಸ್ತವದಲ್ಲಿ ಯಾವುದೇ ಆಧಾರವಿಲ್ಲದೆ ಈ ಕಥೆಗಳು ಎಷ್ಟು ಬೇಗನೆ ಬೆಳೆಯುತ್ತವೆ ಎಂಬುದನ್ನು ನೋಡುವುದು ಇನ್ನೂ ಕಷ್ಟ." ಎಂದು ಬರೆದುಕೊಂಡಿದ್ದಾರೆ.
ದಯವಿಟ್ಟು ಅರ್ಥಮಾಡಿಕೊಳ್ಳಿ, ಇದರಿಂದ ಹೊರಬರುವುದು ನನಗೆ ಸುಲಭವಲ್ಲ,ದಯವಿಟ್ಟು. ಸತ್ಯವಲ್ಲದ ಮಾಹಿತಿಯಿಂದ ನನ್ನವರು ಒತ್ತಡಕ್ಕೊಳಗಾಗುತ್ತಾರೆ ಮತ್ತು ನೊಂದುಕೊಳ್ಳುತ್ತಾರೆ. ಅದು ನನ್ನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ" ಎಂದು ಹೇಳಿದರು.
ಬೆದರಿಕೆಗಳು ಅದಕ್ಕಾಗಿಯೇ ನಾನು ನನ್ನ ಖಾತೆಯನ್ನು ಖಾಸಗಿಯನ್ನಾಗಿ ಮಾಡಿದ್ದೇನೆ. ದಯವಿಟ್ಟು, ನಿಮ್ಮೆಲ್ಲರನ್ನೂ ವದಂತಿಗಳನ್ನು ನಿಲ್ಲಿಸುವಂತೆ ನಾನು ವಿನಂತಿಸುತ್ತೇನೆ. ಮುಂಬೈಗೆ ಬರಲು, ಕೆಲಸ ಮಾಡಲು ಮತ್ತು ನನ್ನ ಗುರಿಗಳನ್ನು ಸಾಧಿಸಲು ನಾನು ಬಹಳಷ್ಟು ತ್ಯಾಗ ಮಾಡಿದ್ದೇನೆ. ದಯವಿಟ್ಟು ನನ್ನ ಹೆಸರನ್ನು ಇದಕ್ಕಿಂತ ಹೆಚ್ಚು ತೆಗೆದುಕೊಳ್ಳಬೇಡಿ. ನನಗೆ ಇದರಲ್ಲಿ ಯಾವುದೇ ಸಂಬಂಧವಿಲ್ಲ. ಅಂತಿಮವಾಗಿ, ಸತ್ಯವು ತನ್ನ ದಾರಿಯನ್ನು ಕಂಡುಕೊಳ್ಳುತ್ತದೆ" ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net