ನಮ್ಮ ಎನ್‌ಡಿಎ ಮೈತ್ರಿಕೂಟವು ನನ್ನ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದೆ, ಬಿಹಾರ ಚುನಾವಣೆಯಲ್ಲಿ ಸ್ಪರ್ಧಿಸಲು ಎಲ್ಜೆಪಿಗೆ 29 ಸ್ಥಾನಗಳಲ್ಲಿ ನೀಡಿದೆ, ನೂತನ ಸರ್ಕಾರದಲ್ಲಿ ಇಬ್ಬರು ಶಾಸಕರನ್ನು ಸಚಿವರನ್ನಾಗಿಸಿದೆ, ನಾನು ಎಲ್ಲಿಂದ ಬಂದಿದ್ದೇನೆ ಎನ್ನುವುದನ್ನು ನೀವೆಲ್ಲಾ ಯೋಚಿಸಬೇಕು, 2021 ರಲ್ಲಿ ನನ್ನ ಸುತ್ತ ಒಬ್ಬ ವ್ಯಕ್ತಿಯೂ ಇರಲಿಲ್ಲ, ನಮ್ಮ ಪಕ್ಷವು ವಿಭಜನೆಯಾಯಿತು. 2024 ರಲ್ಲಿ ಪ್ರಧಾನಿಯವರು ಪಕ್ಷದ ಮೇಲೆ ನಂಬಿಕೆ ಇಟ್ಟು ಐದು ಸ್ಥಾನಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ದರು ಎಂದು ತಿಳಿಸಿದರು.