7 ಸಮುದ್ರಗಳನ್ನು ದಾಟಿದ ಪ್ರೇಮ: ಜಾರ್ಖಂಡ್‌ನ ಹುಡುಗನನ್ನು ಮದುವೆಯಾದ ಚೀನಾ ಯುವತಿ! Marriage

 Marriage
Marriage
Published on
ನವದೆಹಲಿ: ( Marriage) ಪ್ರೀತಿಗೆ ಯಾವುದೇ ಮಿತಿಯಿಲ್ಲ, ಜಾರ್ಖಂಡ್‌ನ ಸಾಹಿಬ್‌ಗಂಜ್‌ನ ಯುವಕ ಮತ್ತು ಚೀನಾದ ಹೆಬೆಯ ಯುವತಿ ಇದನ್ನು ಸಾಬೀತುಪಡಿಸಿದ್ದಾರೆ.
ಚೀನಾದ ನಿವಾಸಿ ಕ್ಸಿಯಾವೊ ಕ್ಸಿಯಾವೊ ತನ್ನ ಭಾರತೀಯ ಪ್ರೇಮಿ ಚಂದನ್ ಸಿಂಗ್ ಅವರನ್ನು ಮದುವೆಯಾಗಲು ಏಳು ಸಮುದ್ರಗಳನ್ನು ದಾಟಿ ಭಾರತಕ್ಕೆ ಬಂದಿದ್ದಾಳೆ. ಡಿಸೆಂಬರ್ 6 ರಂದು ವಿವಾಹದ ಬಂಧದಲ್ಲಿ ಶಾಸ್ತ್ರೋಕ್ತವಾಗಿ ನೆರೆವೆರಿದೆ. ಅಂತರ್ಸಾಂಸ್ಕೃತಿಕ ವಿವಾಹವು ಸಾಹಿಬ್‌ಗಂಜ್‌ನ ವಿನಾಯಕ ಹೋಟೆಲ್‌ನಲ್ಲಿ ವೈದಿಕ ವಿಧಿವಿಧಾನಗಳನ್ನು ಅನುಸರಿಸಿ ಸಮಾರಂಭದೊಂದಿಗೆ ನಡೆಯಿತು.
ಅಂತರರಾಷ್ಟ್ರೀಯ ಪ್ರೇಮಕಥೆಯು ಚೀನಾ ಮತ್ತು ಲಂಡನ್‌ನ ಶೈಕ್ಷಣಿಕ ಕ್ಯಾಂಪಸ್‌ಗಳಲ್ಲಿ ಪ್ರಾರಂಭವಾಯಿತು. ಚಂದನ್ ಸಿಂಗ್ ಮತ್ತು ಕ್ಸಿಯಾವೊ ಕ್ಸಿಯಾವೊ ಓದುತ್ತಿರುವಾಗ ಭೇಟಿಯಾದರು. ಅವರ ಸ್ನೇಹ ಶೀಘ್ರದಲ್ಲೇ ಆಳವಾದ ಪ್ರೀತಿಯಾಗಿ ಅರಳಿತು ಮತ್ತು ಅವರು ತಮ್ಮ ಜೀವನವನ್ನು ಒಟ್ಟಿಗೆ ಕಳೆಯಲು ನಿರ್ಧರಿಸಿದರು.
ವಿನಾಯಕ ಹೋಟೆಲ್‌ನಲ್ಲಿ ನಡೆದ ಈ ಅದ್ಧೂರಿ ಸಮಾರಂಭದಲ್ಲಿ ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ಸ್ನೇಹಿತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ವೇದ ಮಂತ್ರಗಳ ಪಠಣದ ನಡುವೆ, ಭಾರತೀಯ ವೇಷಭೂಷಣಗಳನ್ನು ಧರಿಸಿದ್ದ ಕ್ಸಿಯಾವೋ ಕ್ಸಿಯಾವೋ, ಚಂದನ್ ಸಿಂಗ್ ಅವರೊಂದಿಗೆ ಸಪ್ತಪದಿ ತುಳಿದರು. ಇದು ಎರಡೂ ದೇಶಗಳ ಸಂಸ್ಕೃತಿಗಳ ಅದ್ಭುತ ಮತ್ತು ಸ್ಮರಣೀಯ ಸಮ್ಮಿಲನವಾಗಿದೆ.
ನಿಜವಾದ ಉದ್ದೇಶಗಳು ಮತ್ತು ಪ್ರೀತಿಯ ಮುಂದೆ ಸಾವಿರಾರು ಕಿಲೋಮೀಟರ್ ದೂರ ಮತ್ತು ಸಾಂಸ್ಕೃತಿಕ ಭಿನ್ನತೆಗಳು ಮುಖ್ಯವಲ್ಲ ಎಂಬುದಕ್ಕೆ ಈ ಮದುವೆ ಪುರಾವೆಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net