ಪರಿಸರದ ಜೊತೆಗೆ ಈ ಯೋಜನೆಗೆ ಭದ್ರತಾ ಆಯಾಮವೂ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ. ನದಿಯ ಮೇಲ್ಭಾಗದಲ್ಲಿ ಬೃಹತ್ ಅಣೆಕಟ್ಟು ನಿರ್ಮಾಣವಾದರೆ, ನೀರಿನ ಹರಿವಿನ ಮೇಲೆ ಚೀನಾಗೆ ಹೆಚ್ಚಿನ ನಿಯಂತ್ರಣ ಸಿಗಬಹುದು. ಭವಿಷ್ಯದಲ್ಲಿ ಉಭಯ ದೇಶಗಳ ನಡುವೆ ಯಾವುದೇ ವಿವಾದ ಉಂಟಾದರೆ, ನೀರಿನ ಹರಿವು ಒಂದು ಪ್ರಮುಖ ಅಂಶವಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ. ಇದೇ ಕಾರಣದಿಂದ ಭಾರತ ಈ ಯೋಜನೆಯನ್ನು ಕೇವಲ ಜಲವಿದ್ಯುತ್ ಯೋಜನೆ ಎಂದು ನೋಡದೇ, ಕಾರ್ಯತಂತ್ರದ ದೃಷ್ಟಿಯಿಂದಲೂ ಗಮನಿಸುತ್ತಿದೆ.