ಮರಳಿ ಮುಂಬೈಗೆ ಬಂದ ಕಲ್ಪನಾ ಹೊಲಿಗೆ ಕೆಲಸ ಕಲಿತರು. ಆರಂಭದಲ್ಲಿ ದಿನಕ್ಕೆ ಕೇವಲ 2 ರೂಪಾಯಿ ಸಂಪಾದನೆ ಮಾಡುತ್ತಿದ್ದ ಅವರು, ಸರ್ಕಾರಿ ಸಾಲದ ಯೋಜನೆಯಡಿ (Mahatma Jyotiba Phule Scheme) 50,000 ರೂಪಾಯಿ ಸಾಲ ಪಡೆದು ಪುಟ್ಟ ಪೀಠೋಪಕರಣ (Furniture) ಮಳಿಗೆ ಮತ್ತು ಟೈಲರಿಂಗ್ ಶಾಪ್ ಆರಂಭಿಸಿದರು. ನಂತರ ರಿಯಲ್ ಎಸ್ಟೇಟ್ ವಲಯಕ್ಕೆ ಕಾಲಿಟ್ಟು, ಕಾನೂನು ಸಂಕಷ್ಟದಲ್ಲಿದ್ದ ಜಮೀನುಗಳನ್ನು ಖರೀದಿಸಿ ವಿವಾದ ಬಗೆಹರಿಸಿ ಲಾಭ ಗಳಿಸುವಲ್ಲಿ ಯಶಸ್ವಿಯಾದರು.