ತಮಿಳುನಾಡಿನಲ್ಲಿ ಬಾಲಕಾರ್ಮಿಕ ದಂಧೆಗೆ ಬೀಳುತ್ತಾ ಬ್ರೇಕ್! ಸಿಎಂ ವಿಜಯ್ ಹೊರಡಿಸಿದ ಆ ಹೊಸ ಆದೇಶವೇನು? CM Vijay on Child Rights

ತಮಿಳುನಾಡಿನಲ್ಲಿ ಬಾಲಕಾರ್ಮಿಕ ದಂಧೆಗೆ ಬೀಳುತ್ತಾ ಬ್ರೇಕ್! ಸಿಎಂ ವಿಜಯ್ ಹೊರಡಿಸಿದ ಆ ಹೊಸ ಆದೇಶವೇನು?
ತಮಿಳುನಾಡಿನಲ್ಲಿ ಬಾಲಕಾರ್ಮಿಕ ದಂಧೆಗೆ ಬೀಳುತ್ತಾ ಬ್ರೇಕ್! ಸಿಎಂ ವಿಜಯ್ ಹೊರಡಿಸಿದ ಆ ಹೊಸ ಆದೇಶವೇನು?
Published on
ಚೆನ್ನೈ: ಬಾಲಕಾರ್ಮಿಕ ಪದ್ಧತಿಯು ಸಮಾಜಕ್ಕೆ ಅಂಟಿರುವ ಬಹುದೊಡ್ಡ ಶಾಪ. ಮಕ್ಕಳ ಕೈಗೆ ಕೆಲಸ ಕೊಡುವ ಬದಲು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕು. ತಮಿಳುನಾಡಿನಲ್ಲಿ ಬಾಲಕಾರ್ಮಿಕ ಮುಕ್ತ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್(CM Vijay on Child Rights) ಕರೆ ನೀಡಿದ್ದಾರೆ.
ಜೂನ್ 12ರ ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಮುನ್ನಾದಿನವಾದ ಗುರುವಾರ (ಜೂನ್ 11) ಚೆನ್ನೈನಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಮತ್ತು ಅವರಿಗೆ ಸಂತೋಷದ ಬಾಲ್ಯವನ್ನು ಒದಗಿಸುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ.

ಮಕ್ಕಳ ಹಕ್ಕುಗಳ ರಕ್ಷಣೆ ಸರ್ಕಾರದ ಮುಖ್ಯ ಗುರಿ

ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಮಾತನಾಡಿ, ಯಾವುದೇ ಒಂದು ಮಗು ಕೂಡ ಶಿಕ್ಷಣದಿಂದ ವಂಚಿತವಾಗಿ ಕಾರ್ಮಿಕ ವಲಯಕ್ಕೆ ತಳ್ಳಲ್ಪಡಬಾರದು. ಪ್ರತಿಯೊಂದು ಮಗುವಿಗೂ ಉನ್ನತ ಮತ್ತು ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು. ಆಗ ಮಾತ್ರ ಒಂದು ಸಮೃದ್ಧ ಹಾಗೂ ಪ್ರಗತಿಪರ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದಿದ್ದಾರೆ. ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು, ಅವರಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವುದು ಹಾಗೂ ಅವರ ಬಾಲ್ಯವನ್ನು ಸಂಭ್ರಮಿಸುವಂತೆ ಮಾಡುವುದು ನಮ್ಮ ತಮಿಳುನಾಡು ಸರ್ಕಾರದ ಪ್ರಾಥಮಿಕ ಉದ್ದೇಶವಾಗಿದೆ ಎಂದರು.
ರಾಜ್ಯದಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಮತ್ತು ದುಡಿಮೆಗೆ ಬಿದ್ದಿರುವ ಮಕ್ಕಳನ್ನು ರಕ್ಷಿಸಿ ಮತ್ತೆ ಶಾಲೆಗೆ ಕರೆತರಲು ಸರ್ಕಾರವು ಹತ್ತಾರು ಜನಪರ ಹಾಗೂ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೆ ತರುತ್ತಿದೆ ಎಂದು ಸಿಎಂ ವಿಜಯ್​ ವಿವರಿಸಿದ್ದಾರೆ.

ಬಾಲಕಾರ್ಮಿಕ ಮುಕ್ತ ರಾಜ್ಯಕ್ಕೆ ಸರ್ಕಾರದ ಮಾಸ್ಟರ್ ಪ್ಲಾನ್

ತಮಿಳುನಾಡು ಸರ್ಕಾರವು ಬಾಲಕಾರ್ಮಿಕ ಪದ್ಧತಿಯನ್ನು ಬೇರುಸಹಿತ ಕಿತ್ತೊಗೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಲ್ಲದೆ, ಅಪಾಯಕಾರಿ ಕೆಲಸಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಬಡತನದ ಕಾರಣದಿಂದಾಗಿ ಮಕ್ಕಳು ಶಾಲೆ ಬಿಟ್ಟು ಕೆಲಸಕ್ಕೆ ಹೋಗುವುದನ್ನು ತಪ್ಪಿಸಲು ಸರ್ಕಾರಿ ಶಾಲೆಗಳಲ್ಲಿ ಉಚಿತ ಮಧ್ಯಾಹ್ನದ ಊಟ, ಪೌಷ್ಟಿಕ ಆಹಾರ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
ಕೇವಲ ಸರ್ಕಾರ ಮಾತ್ರವಲ್ಲದೆ ಸಾರ್ವಜನಿಕರು, ಸ್ವಯಂಸೇವಾ ಸಂಸ್ಥೆಗಳು ಮತ್ತು ಪೋಷಕರು ಜಂಟಿಯಾಗಿ ಕೈಜೋಡಿಸಿದರೆ ಮಾತ್ರ ಈ ಸಾಮಾಜಿಕ ಪಿಡುಗನ್ನು ದೇಶದಿಂದ ಓಡಿಸಲು ಸಾಧ್ಯ ಎಂದು ಸಿಎಂ ವಿಜಯ್ ಪ್ರತಿಪಾದಿಸಿದ್ದಾರೆ. ಅಲ್ಲದೆ, ಶಿಕ್ಷಣವೇ ಪ್ರತಿಯೊಂದು ಮಗುವಿನ ಅಸ್ತ್ರವಾಗಬೇಕು ಎಂದು ಅವರು ಈ ಸಂದರ್ಭದಲ್ಲಿ ಆಶಯ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net