ಸಿಜೆಐ ಅವರ ಆಹ್ವಾನಕ್ಕೆ ಸಿಡಿದೆದ್ದ ಒಂದಷ್ಟು ವಿದ್ಯಾರ್ಥಿಗಳು, ಯಾವುದೇ ಕಾರಣಕ್ಕೂ ಸೂರ್ಯಕಾಂತ್ ನಮ್ಮ ಕಾಲೇಜಿಗೆ ಅತಿಥಿಯಾಗಿ ಬರುವುದು ಬೇಡ ಎಂದು ತೀವ್ರ ವಿರೋಧ ವ್ಯಕ್ತಪಡಿಸಿದರು. ವಿದ್ಯಾರ್ಥಿ ಸಮೂಹದಿಂದ ಶಾಂತಿಯುತ ಪ್ರತಿಭಟನೆಯು ತಾರಕಕ್ಕೇರಿದ ಬೆನ್ನಲ್ಲೇ ಮಧ್ಯಪ್ರವೇಶಿಸಿದ ಭಾರತೀಯ ಬಾರ್ ಕೌನ್ಸಿಲ್, ಈ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಯಾವುದೇ ವಿದ್ಯಾರ್ಥಿಗೂ ಮುಂದಿನ ಆದೇಶದವರೆಗೆ ವಕೀಲರಾಗಿ ರಿಜಿಸ್ಟರ್ ಆಗಲು ಅವಕಾಶವಿಲ್ಲ ಎಂದು ತಿಳಿಸಿತು. ಇದಕ್ಕೀಗ, ಸ್ವತಃ ಸೂರ್ಯಕಾಂತ್ ಅವರೇ ಅಸಮಾಧಾನ ಹೊರಹಾಕಿದ್ದಾರೆ.