ಸೆಪ್ಟೆಂಬರ್ 12 ಮತ್ತು 13 ರಂದು ನವದೆಹಲಿಯ ಭಾರತ್ ಮಂಟಪಂನಲ್ಲಿ ಭಾರತವು 18 ನೇ ಬ್ರಿಕ್ಸ್ ಶೃಂಗಸಭೆಯನ್ನು ಆಯೋಜಿಸಲಿದೆ. ಈ ಶೃಂಗಸಭೆಯು ಬ್ರಿಕ್ಸ್ನ ಸದಸ್ಯ ದೇಶಗಳು, ಪಾಲುದಾರ ದೇಶಗಳ ನಾಯಕರು ಮತ್ತು ಆಹ್ವಾನಿತರನ್ನು ಒಂದೆಡೆ ತರಲಿದೆ. ಮೊದಲ ದಿನ ಸದಸ್ಯರ ಮುಚ್ಚಿದ ಬಾಗಿಲ ಸಭೆ, ಭಾರತ್ ಇನ್ನೋವೇಟ್ಸ್ ಪ್ರದರ್ಶನ, ನಾಯಕರ ಫೋಟೋಶೂಟ್, ಜಂಟಿ ಸಸಿ ನೆಡುವ ಕಾರ್ಯಕ್ರಮ ಮತ್ತು ಪ್ರಧಾನಿ ನರೇಂದ್ರ ಮೋದಿ ಆಯೋಜಿಸುವ ವಿಶೇಷ ಔತಣಕೂಟ ಇರಲಿದೆ. ಎರಡನೇ ದಿನ ಪಾಲುದಾರ ದೇಶಗಳ ನಾಯಕರ ಆಗಮನದ ನಂತರ ಚೇತರಿಕೆ (resilience), ನಾವೀನ್ಯತೆ (innovation), ಸಹಕಾರ (cooperation) ಮತ್ತು ಸುಸ್ಥಿರತೆ (sustainability) ವಿಷಯಗಳ ಮೇಲೆ ಮುಕ್ತ ಸಭೆ ನಡೆಯಲಿದೆ(ಏಜೆನ್ಸೀಸ್).