ಪ್ರಸ್ತುತ ಚೆನ್ನೈನಲ್ಲಿರುವ ಚಾರು ಪಾಂಡೆ, ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾ (ಸಿಎಜಿ) ಕಚೇರಿಯಲ್ಲಿ ಸಹಾಯಕ ಲೆಕ್ಕಪರಿಶೋಧನಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಕೆ SSC CGL, CHSL, MTS, GD, CPO, IBPS PO, ಕ್ಲರ್ಕ್, SBI PO, ಕ್ಲರ್ಕ್ ಮುಂತಾದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. ಇದರೊಟ್ಟಿಗೆ, ರೈಲ್ವೆ ನೇಮಕಾತಿ ಪರೀಕ್ಷೆ, ದೆಹಲಿ ಪೊಲೀಸ್, ಛತ್ತೀಸ್‌ಗಢ ಸಬ್-ಇನ್ಸ್‌ಪೆಕ್ಟರ್ ಮತ್ತು ಸಾರಿಗೆ ಸಬ್-ಇನ್ಸ್‌ಪೆಕ್ಟರ್ ಹುದ್ದೆಗಳಲ್ಲಿಯೂ ಅರ್ಹತೆ ಪಡೆದಿರುವುದು ನಿಜಕ್ಕೂ ಗಮನಾರ್ಹ.