ಚೆಕ್ ಬೌನ್ಸ ಪ್ರಕರಣ: ತಿಹಾರ್ ಜೈಲು ಸೇರಿದ ಖ್ಯಾತ ಹಾಸ್ಯ ನಟ ರಾಜ್‌ಪಾಲ್ ಯಾದವ್ | Rajpal Yadav
ಹಾಸ್ಯ ನಟ ರಾಜ್‌ಪಾಲ್ ಯಾದವ್
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಚೆಕ್ ಬೌನ್ಸ ಪ್ರಕರಣದಲ್ಲಿ ಹಾಸ್ಯ ನಟ ರಾಜಪಾಲ್ ಯಾದವ್ ಜೈಲುಪಾಲು
ತಿಹಾರ್ ಜೈಲಿಗೆ ಶರಣಾದ ರಾಜ್‌ಪಾಲ್ ಯಾದವ್
ದೆಹಲಿ ಹೈಕೋರ್ಟ್ ಆದೇಶದ ಬೆನ್ನಲೆ ಜೈಲು ಸೇರಿದ ಹಾಸ್ಯ ನಟ
ನವದೆಹಲಿ: ಚೆಕ್ ಬೌನ್ಸ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಾಲಿವುಡ್ ಖ್ಯಾತ ಹಾಸ್ಯ ನಟ ರಾಜ್‌ಪಾಲ್ ಯಾದವ್ (Rajpal Yadav) ದೆಹಲಿ ಹೈಕೋರ್ಟ್‌ನ ನಿರ್ದೇಶನದ ಅನ್ವಯ ಗುರುವಾರ (ಫೆ.5) ತಿಹಾರ್ ಜೈಲಿಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ.
ಫೆಬ್ರವರಿ 4 ರಂದು ರಾಜ್‌ಪಾಲ್ ಯಾದವ್ ಸಂಬಂಧಪಟ್ಟ ಜೈಲು ಸೂಪರಿಂಟೆಂಡೆಂಟ್ ಮುಂದೆ ಹಾಜರಾಗಬೇಕೆಂದು ದೆಹಲಿ ಹೈಕೋರ್ಟ್ ನಿರ್ದೇಶಿಸಿತ್ತು.
ಶರಣಾದ ನಂತರ, ರಾಜ್‌ಪಾಲ್ ಯಾದವ್ ಮತ್ತೊಮ್ಮೆ ದೆಹಲಿ ಹೈಕೋರ್ಟ್ ಮುಂದೆ ವೈಯಕ್ತಿಕವಾಗಿ ಹಾಜರಾಗಿ 25 ಲಕ್ಷ ರೂ.ಗಳ ಚೆಕ್ ತಂದಿರುವುದಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು ಮತ್ತು ಉಳಿದ ಮೊತ್ತವನ್ನು ಸಹ ಪಾವತಿಸಲಾಗುವುದು ಎಂದು ಭರವಸೆ ನೀಡುತ್ತಾ, ಈ ಆಧಾರದ ಮೇಲೆ ಪರಿಹಾರ ನೀಡಬೇಕೆಂದು ವಿನಂತಿಸಿದರು.
ಆದರೆ ಯಾವುದೇ ವಿಷಯವನ್ನು ಪರಿಗಣನೆಗೆ ಮಾಡುವ ಮೊದಲು ಜೈಲಿಗೆ ಶರಣಾಗುವುದು ಕಡ್ಡಾಯ ಎಂದು ನ್ಯಾಯಾಲಯ ಪುನರುಚ್ಚರಿಸಿತು. ಶರಣಾದ ನಂತರವೇ ನ್ಯಾಯಾಲಯ ಪರಿಹಾರವನ್ನು ವಿಸ್ತರಿಸಬಹುದೇ ಎಂದು ಪರಿಶೀಲಿಸುತ್ತದೆ ಎಂದು ನ್ಯಾಯಪೀಠ ಹೇಳಿದೆ.
ನಟನಿಗೆ ನೀಡಿರುವ ಶಿಕ್ಷೆಯು ವಿವಾದವನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಲಾಗುವುದು ಮತ್ತು ದೂರುದಾರ ಕಂಪನಿಗೆ ಪಾವತಿಗಳನ್ನು ಮಾಡಲಾಗುವುದು ಎಂಬ ಭರವಸೆಗಳನ್ನು ಈ ಮೊದಲು ನೀಡಿ ವಿಫಲವಾದ ಹಿನ್ನಲೆ ಜೈಲು ಶರಣಾಗತಿಯನ್ನು ನೀಡಿದ್ದಾಗಿ ನ್ಯಾಯಾಲಯ ಹೇಳಿತು. ಈ ಪ್ರಕರಣವನ್ನು ಸುಲಭವಾಗಿ ಇತ್ಯರ್ಥ ಮಾಡಿಕೊಳ್ಳಲು ಹಲವಾರು ಅವಕಾಶಗಳ ಹೊರತಾಗಿಯೂ ನಟ ದೂರುದಾರರ ಭರವಸೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದಿದ್ದನನ್ನು ನ್ಯಾಯಾಲಯ ಗಮನಿಸಿದೆ ಎಂದು ಹೇಳಿತು.
ಇದಕ್ಕೂ ಮೊದಲು, ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ, ರಾಜ್‌ಪಾಲ್ ಯಾದವ್‌ಗೆ ವಿಷಯವನ್ನು ಇತ್ಯರ್ಥಪಡಿಸಲು ಸಮಯ ನೀಡಿ, ವಿಚಾರಣಾ ನ್ಯಾಯಾಲಯ ಜೂನ್ 2024 ರಲ್ಲಿ ನೀಡಿದ್ದ ಶಿಕ್ಷೆಯನ್ನು ತಡೆಹಿಡಿದಿತ್ತು.
ಹಲವಾರು ಅವಕಾಶಗಳನ್ನು ನಟನಿಗೆ ನೀಡಿದ್ದರೂ ಸಹ ದೂರುದಾರರಿಗೆ ಕೊಡಬೇಕಿದ್ದ ಹಲವಾರು ಕೋಟಿ ರೂಪಾಯಿಗಳ ಮೊತ್ತದ ಪಾವತಿಗಳನ್ನು ಮಾಡಲಾಗಿಲ್ಲ. ಡಿಮ್ಯಾಂಡ್ ಡ್ರಾಫ್ಟ್‌ಗಳು ಮತ್ತು ಕಂತುಗಳ ಮೂಲಕ ಪಾವತಿ ಮಾಡುವುದಾಗಿ ಹೇಳಿದ ನಟ ಅದನ್ನು ಸರಿಯಾಗಿ ಪಾಲನೆ ಮಾಡಿಲ್ಲ ಎಂದು ಹೇಳಿದೆ.
ಪುನರಾವರ್ತಿತ ಉಲ್ಲಂಘನೆ ಮತ್ತು ನಟ ತನ್ನ ತಪ್ಪನ್ನು ಒಪ್ಪಿಕೊಂಡ ಹಿನ್ನಲೆ ಹೈಕೋರ್ಟ್ ರಾಜ್ಪಾಲ್ಗೆ ಇನ್ನು ಹೆಚ್ಚಿನ ಸಮಯವಕಾಶವನ್ನು ನೀಡಲು ನಿರಾಕರಿಸಿತು. ರಿಜಿಸ್ಟ್ರಾರ್ ಜನರಲ್‌ನಲ್ಲಿ ಈಗಾಗಲೇ ಠೇವಣಿ ಇಟ್ಟಿರುವ ಮೊತ್ತವನ್ನು ದೂರುದಾರ ಕಂಪನಿಗೆ ಬಿಡುಗಡೆ ಮಾಡಲು ಆದೇಶಿಸಿತು ಮತ್ತು ವಿಚಾರಣಾ ನ್ಯಾಯಾಲಯವು ನೀಡಿದ ಶಿಕ್ಷೆಯನ್ನು ಅನುಭವಿಸಲು ರಾಜ್‌ಪಾಲ್ ಯಾದವ್‌ಗೆ ಶರಣಾಗುವಂತೆ ನಿರ್ದೇಶಿಸಿತು,(ಏಜನ್ಸೀಸ್).