ತರಕಾರಿ ಅಂಗಡೀಲಿ ಚಮಕ್ ಚಲ್ಲೋ ಹಾಡಿಗೆ ಸೊಂಟ ಬಳುಕಿಸಿದ ವೈಯಾರಿ; ಗ್ರಾಹಕರ ಸೆಳೆಯಲು ಚೆನ್ನೈ ವ್ಯಾಪಾರಿಯ ಹೊಸ ತಂತ್ರ!

Chennai shopkeeper hires dancer to attract customers
Chennai shopkeeper hires dancer to attract customers
Published on

ಪ್ರಮುಖ ಮುಖ್ಯಾಂಶಗಳು

  • ಗ್ರಾಹಕರನ್ನು ತನ್ನತ್ತ ಸೆಳೆಯಲು ಹೊಸ ಪ್ಲ್ಯಾನ್ ಮಾಡಿಕೊಂಡ ತರಕಾರಿ ಅಂಗಡಿ ಮಾಲೀಕ.
  • ಡ್ಯಾನ್ಸ್​ಗಾಗಿ ಯುವತಿಯನ್ನು ನೇಮಕ ಮಾಡಿಕೊಂಡು ಸ್ಟಾಕ್ ಮಾರಾಟ.
  • ವ್ಯಾಪಾರಿಯ ಈ ಬುದ್ಧಿವಂತಿಕೆ ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು.
ಕೆಲವೊಮ್ಮೆ ವ್ಯಾಪಾರವು ಸುಸೂತ್ರವಾಗಿ ನಡೆಯಲು ಮಿತಿ ಮೀರಿ ಯೋಚನೆ ಮಾಡಬೇಕಾಗುತ್ತದೆ. ಆಫರ್​ಗಳು, ರಿಯಾಯಿತಿ ದರಗಳು ಕೆಲಸ ಮಾಡದೇ ಇದ್ದಾಗ ಇದರಿಂದಾಚೆಗೆ ಚಿಂತಿಸಬೇಕು ಎಂದು ಎನಿಸುತ್ತದೆ. ಅದರಂತೆ ತಮಿಳುನಾಡಿನ ಚೆನ್ನೈನಲ್ಲಿ ಆಲೂಗಡ್ಡೆ ಮತ್ತು ಈರುಳ್ಳಿ ಮಾರಾಟಗಾರರು ಮಾಡಿಕೊಂಡ ಪ್ಲ್ಯಾನ್​ ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ.
ಕನ್ನಡದ ಸೂರ್ಯವಂಶ ಸಿನಿಮಾದಲ್ಲಿ ಬಸ್​​​​ನಲ್ಲಿ ಟಿಕೆಟ್​ ವ್ಯಾಪಾರವಾಗಲು ಒಬ್ಬ ಮಹಿಳಾ ಕಂಡಕ್ಟರ್​ಅನ್ನು ನೇಮಿಸಿಕೊಂಡಂತೆ, ಚೆನ್ನೈನಲ್ಲಿ ವ್ಯಾಪಾರಿಯೊಬ್ಬರು ತಮ್ಮ ಗೋದಾಮಿನಲ್ಲಿದ್ದ ಈರುಳ್ಳಿ ಮತ್ತು ಆಲೂಗಡ್ಡೆ ಮಾರಾಟ ಮಾಡಲು, ಹೆಚ್ಚು ಗ್ರಾಹಕರನ್ನು ಸೇರಿಸಲು ಒಬ್ಬ ಮಹಿಳಾ ಡ್ಯಾನ್ಸರ್​ ಅನ್ನು ನೇಮಕ ಮಾಡಿಕೊಂಡಿರುವ ವಿಚಾರ ಹಾಗೂ ಆಕೆ ನೃತ್ಯ ಮಾಡಿದ ವಿಡಿಯೋಗಳು ಸದ್ಯ ಇನ್​ಸ್ಟಾಗ್ರಾಮ್​, ಎಕ್ಸ್​ ಸೇರಿದಂತೆ ಆನ್​ಲೈನ್​ ಫ್ಲಾಟ್​ಫಾರ್ಮ್​ನಲ್ಲಿ ಸಾಕಷ್ಟು ಸದ್ದು ಮಾಡ್ತಿದೆ.

ಸ್ಟಾಕ್ ಖಾಲಿ

ಮಾರ್ಕೆಟಿಂಗ್​ ಮಾಡಲು ಉದ್ಯಮಿಗಳು ಸದಾ ಹೊಸತಾಗಿ ಯೋಚಿಸುತ್ತಿರುತ್ತಾರೆ. ಹಾಡುಗಳನ್ನು ಹಾಕುವ ಮುಖೇನ, ರಿಯಾಯಿತಿ ನೀಡುವ ಮೂಲಕ, ಬೈ ಒನ್ ಗೆಟ್​ ಟು ಅಥವಾ ಒನ್ ಆಫರ್​, ಕಡಿಮೆ ದರದಲ್ಲಿ ವಸ್ತು ಮಾರಾಟ ಸೇರಿದಂತೆ ನಾನಾ ಟ್ರಿಕ್ಸ್​ ನಾವು ನಿತ್ಯ ಕಾಣುತ್ತಲೇ ಇರುತ್ತೇವೆ.
ಅದರಂತೆ ಚೆನ್ನೈನಲ್ಲಿರುವ ಅಂಗಡಿ ಮಾಲೀಕ, ಪ್ರತಿ ಬಾರಿ ಮೂಲೆ ಗುಂಪಾಗುತ್ತಿದ್ದ ಈರುಳ್ಳಿ ಮತ್ತು ಆಲೂಗಡ್ಡೆ ತರಕಾರಿ ಮೂಟೆಯನ್ನು ಖಾಲಿ ಮಾಡಲು, ಗ್ರಾಹಕರನ್ನು ಒಟ್ಟುಗೂಡಿಸಲು ಡ್ಯಾನ್ಸರ್​ ಅನ್ನು ನೇಮಕ ಮಾಡಿಕೊಂಡಿದ್ದಾರೆ. ಆಕೆ ಮನ ಬಿಚ್ಚಿ ಕುಣಿದು ಜನರನ್ನು ಸೇರಿಸಿದ್ದಾರೆ. ಆಕೆ ಹಿಂದಿ ಹಾಡಿಗೆ ಮುಕ್ತವಾಗಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋಗಳನ್ನು ಹಲವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಮಾಲೀಕನ ಬುದ್ಧಿವಂತಿಕೆ ಬಗ್ಗೆ ಕೆಲವರು ಕೊಂಡಾಡುತ್ತಿದ್ದರೆ, ಇನ್ನೂ ಕೆಲವರು ಮಹಿಳೆಯನ್ನು ಬಳಕೆ ಮಾಡಿಕೊಂಡಿದ್ದು ತಪ್ಪ ಎಂದು ವಾದ ಮಾಡುತ್ತಿದ್ದಾರೆ.

ಚಮ್ಮಕ್ ಚಲ್ಲೋ ಹಾಡಿಗೆ ಸಖತ್​ ಡ್ಯಾನ್ಸ್​

ಗ್ರಾಹಕರನ್ನು ತನ್ನ ಅಂಗಡಿಗೆ ಸೆಳೆಯಲು ನರ್ತಕಿ ರಾ ಒನ್​ ಸಿನಿಮಾದ ಸೂಪರ್​ ಹಿಟ್​ ಹಾಡಾದ ಚಮ್ಮಕ್ ಚಲ್ಲೋ ಹಾಡಿಗೆ ಮುಕ್ತವಾಗಿ ಕುಣಿದಿದ್ದಾರೆ. ವಿಡಿಯೋದಲ್ಲಿ ಆಕೆ ಕುಣಿಯುತ್ತಿರುವುದು ಅಂಗಡಿ ಸಿಬ್ಬಂದಿ ಹಾಗೂ ಹೊರಗೆ ಜನರು ನೋಡುತ್ತಾ ನಿಂತಿರುವುದು ವಿಡಿಯೋದಲ್ಲಿ ಇದೆ.
ಒಟ್ಟಾರೆಯಾಗಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ ಮಾಲೀಕನ ಪ್ಲ್ಯಾನ್​ ಸಕ್ಸಸ್​ ಆಗಿದೆ. ಸಾಕಷ್ಟು ಜನರು ಆಕೆ ಡ್ಯಾನ್ಸ್​ ಮಾಡುತ್ತಲೇ ಅಂಗಡಿಗೆ ಪ್ರವೇಶಿಸಿದ್ದಾರೆ. ಅವನ ಸಂಪೂರ್ಣ ಸ್ಟಾಕ್ ಈಗ ಮಾರಾಟವಾಗುತ್ತಿದೆ. ಕೆಲವೊಮ್ಮೆ, ಮಾರ್ಕೆಟಿಂಗ್ ನಿಜವಾಗಿಯೂ ಅನಿರೀಕ್ಷಿತ ರೀತಿಯಲ್ಲಿ ಕೆಲಸ ಎಂದು ನೆಟ್ಟಿಗರೊಬ್ಬರು ಪೋಸ್ಟ್ ಮಾಡಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net