ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಚೆನಾಬ್(Chenab River Dam Dispute) ನದಿಯ ಮೇಲೆ ಭಾರತವು 5,129 ಕೋಟಿ ರೂಪಾಯಿ ವೆಚ್ಚದ ಸವಾಲ್‌ಕೋಟ್ ಜಲವಿದ್ಯುತ್ ಯೋಜನೆಯನ್ನು ಆರಂಭಿಸಿರುವುದು ನೆರೆಯ ಪಾಕಿಸ್ತಾನದ ನಿದ್ದೆಗೆಡಿಸಿದೆ. ಭಾರತದ ಈ ಕ್ರಮವನ್ನು ನೀರನ್ನು ಬತ್ತಿಸುವ ನೀತಿ ಎಂದು ಕರೆದಿರುವ ಪಾಕಿಸ್ತಾನ, ಇದನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಶ್ನಿಸುವುದಾಗಿ ಎಚ್ಚರಿಸಿದೆ.