ಸಂಕ್ರಾಂತಿ ಹಬ್ಬಕ್ಕೆ ಇನ್ನಷ್ಟು ಹೆಚ್ಚಲಿದೆ ಚಿನ್ನ-ಬೆಳ್ಳಿ ದರ! ಹೀಗಿದೆ ದೇಶದ ಪ್ರಮುಖ ನಗರಗಳಲ್ಲಿ ಇಂದಿನ ದರ | Gold Rates

ಚಿನ್ನ-ಬೆಳ್ಳಿ ಬೆಲೆ
ಚಿನ್ನ-ಬೆಳ್ಳಿ ಬೆಲೆ
Published on

ಪ್ರಮುಖ ಮುಖ್ಯಾಂಶಗಳು

  • ಇಂದು ಸಹ ಚಿನ್ನ-ಬೆಳ್ಳಿ ಬೆಲೆಗಳು ಹೆಚ್ಚಾಗಿವೆ
  • ಸಂಕ್ರಾಂತಿ ಹಬ್ಬಕ್ಕೆ ಇನ್ನಷ್ಟು ಹೆಚ್ಚಲಿದೆ ದರಗಳು ಎಂದು ತಜ್ಞರು ಭವಿಷ್ಯ
  • 10 ಗ್ರಾಂ ಬೆಲೆ 820 ರೂ., ಬೆಳ್ಳಿ ಕೆಜಿಗೆ 3000 ರೂ. ಹೆಚ್ಚಳ
ನವದೆಹಲಿ: ಹೊಸ ವರ್ಷಕ್ಕೆ ಕೆಲವೇ ದಿನಗಳು ಬಾಕಿ. ವರ್ಷದ ಮೊದಲ ಹಬ್ಬ ಸಂಕ್ರಾಂತಿಗೆ ಇಂದಿಗೆ ಸರಿಯಾಗಿ ಒಂದು ತಿಂಗಳಿದೆ. ಹೀಗಿರುವಾಗ, ಚಿನ್ನ ಪ್ರಿಯರಿಗೆ ಗೊಂದಲ ಹಾಗೂ ತಲೆಬಿಸಿ ಹೆಚ್ಚಾಗಿದೆ. ಕಾರಣ, ದಿನದಿಂದ ದಿನಕ್ಕೆ ಆಕಾಶಕ್ಕೆ ಮುತ್ತಿಡುತ್ತಿರುವ ಚಿನ್ನ-ಬೆಳ್ಳಿಯ ಬೆಲೆಗಳು. ಗ್ರಾಹಕರಿಗೆ ಯಾವಾಗ ಏರಿಕೆ ಇಳಿಕೆಯತ್ತ ಮುಖ ಮಾಡುತ್ತದೋ ಎಂಬ ಯೋಚನೆ ಮೂಡಿದೆ. ಮುಂದಿನ ತಿಂಗಳು ಗೋಲ್ಡ್​-ಸಿಲ್ವರ್​ ಬೆಲೆ ಗಮನಾರ್ಹವಾಗಿ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ.
ಜಾಗತಿಕವಾಗಿ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಹೆಚ್ಚುತ್ತಿರುವಂತೆ, ಹೂಡಿಕೆದಾರರು ತಮ್ಮ ಹೂಡಿಕೆಗಳನ್ನು ಸುರಕ್ಷಿತ ಸ್ವತ್ತುಗಳ ಕಡೆಗೆ ಬದಲಾಯಿಸುತ್ತಿದ್ದಾರೆ. ಈ ಸಂದರ್ಭಗಳಲ್ಲಿ, ನಷ್ಟವನ್ನು ತಪ್ಪಿಸಲು ಗೋಲ್ಡ್​ ಸುರಕ್ಷಿತ ತಾಣವಾಗಿದೆ ಎಂಬುದು ಇಲ್ಲಿ ಸ್ಪಷ್ಟ. ಡಾಲರ್ ವಿರುದ್ಧ ರೂಪಾಯಿ ದುರ್ಬಲಗೊಳ್ಳುವುದರಿಂದ ಚಿನ್ನದ ಬೆಲೆಗಳು ಕ್ರಮೇಣವಾಗಿ ಏರಿಕೆಯಾಗುತ್ತಿವೆ. ಇದೆಲ್ಲದರ ಮಧ್ಯೆ, ಹೂಡಿಕೆದಾರರು ಗೋಲ್ಡ್​ ಮೇಲಿನ ಹೂಡಿಕೆಯನ್ನು ಕೈಬಿಡುವುದಿಲ್ಲ. ಹೀಗಾಗಿ, ಮುಂದಿನ ವರ್ಷ ಜನವರಿಯಲ್ಲಿ ಚಿನ್ನ-ಬೆಳ್ಳಿಯ ಬೆಲೆಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಜ್ಞರು ತಿಳಿಸಿದ್ದಾರೆ.
ಇಂದು (ಡಿ.15) ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 820 ರೂ. ಏರಿಕೆಯಾಗಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 750 ರೂ. ಹೆಚ್ಚಾಗಿದೆ. ಮತ್ತೊಂದೆಡೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರವೂ ತೀವ್ರವಾಗಿ ಏರಿಕೆಯಾಗಿದೆ. ಒಂದು ಔನ್ಸ್ ಚಿನ್ನದ ಬೆಲೆ 32 ಡಾಲರ್ ಏರಿದೆ. ಇದರೊಂದಿಗೆ, ಒಂದು ಔನ್ಸ್ ಚಿನ್ನ ಈಗ 4,325 ಡಾಲರ್​ನಲ್ಲಿ ವಹಿವಾಟು ನಡೆಸುತ್ತಿದೆ. ಬೆಳ್ಳಿ ದರವೂ ತೀವ್ರ ಏರಿಕೆ ಕಾಣುತ್ತಿದೆ. ಒಂದು ಕೆಜಿ ಬೆಳ್ಳಿ ಬೆಲೆ 3,000 ರೂ. ಹೆಚ್ಚಾಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ

  • ಇಂದು ದೆಹಲಿಯಲ್ಲಿ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,34,880 ರೂ.ಗೆ ತಲುಪಿದೆ. ಅದೇ ರೀತಿ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,23,650 ರೂ. ಆಗಿದೆ.
  • ಮುಂಬೈ, ಬೆಂಗಳೂರಿನಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,34,730 ರೂ.ಗೆ ತಲುಪಿದೆ. ಅದೇ ರೀತಿ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,23,500 ರೂ.ಗೆ ಬಂದು ನಿಂತಿದೆ.
  • ಇನ್ನು ಹೈದರಾಬಾದ್​ ಸೇರಿದಂತೆ ತೆಲುಗು ರಾಜ್ಯಗಳಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,34,730 ರೂ.ಗೆ ತಲುಪಿದೆ. ಅದೇ ರೀತಿ, 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,23,500 ರೂ. ಆಗಿದೆ.

ಬೆಳ್ಳಿ 3000 ರೂ. ಹೆಚ್ಚಳ

  • ದೆಹಲಿಯಲ್ಲಿ ಒಂದು ಕೆಜಿ ಬೆಳ್ಳಿ ಇಂದು 2,09,000 ರೂ.ಗೆ ತಲುಪಿದೆ.
  • ಮುಂಬೈ, ಬೆಂಗಳೂರಿನಲ್ಲಿ ಪ್ರಸ್ತುತ ಒಂದು ಕೆಜಿ ಬೆಳ್ಳಿಯ ಬೆಲೆ 2,09,000 ರೂ. ಇದೆ.
  • ಇನ್ನು ಚೆನ್ನೈ, ಹೈದರಾಬಾದ್‌, ತೆಲಂಗಾಣದಲ್ಲಿ 3000 ರೂ. ಇಳಿಕೆಯಾಗಿದ್ದು, ಪ್ರತಿ ಕೆಜಿ ಬೆಲೆ 2,13,000 ರೂ. ಆಗಿದೆ.
ಗಮನಿಸಿ: ಮೇಲೆ ತಿಳಿಸಲಾದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾವಣೆಗೆ ಒಳಪಟ್ಟಿರುತ್ತವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net