ಬೆಳ್ಳಿ 2000 ರೂ. ಇಳಿಕೆ! ಚಿನ್ನ ಎಷ್ಟು? ದೇಶದ ಪ್ರಮುಖ ನಗರಗಳಲ್ಲಿ ಹೀಗಿದೆ ಇಂದಿನ ದರ | Gold Rates

ಚಿನ್ನ-ಬೆಳ್ಳಿ ದರಗಳಲ್ಲಿ ಕೊಂಚ ಇಳಿಕೆ
ಚಿನ್ನ-ಬೆಳ್ಳಿ ದರಗಳಲ್ಲಿ ಕೊಂಚ ಇಳಿಕೆ
Published on

ಪ್ರಮುಖ ಮುಖ್ಯಾಂಶಗಳು

  • ಚಿನ್ನ ಪ್ರಿಯರು ಕೊಂಚ ನಿರಾಳ
  • ಬೆಳ್ಳಿ-ಚಿನ್ನದ ಬೆಲೆಯಲ್ಲಿ ಇಳಿಕೆ
  • ಬೆಳ್ಳಿ ಪ್ರತಿ ಕೆಜಿಗೆ 2,000 ರೂ. ಕುಸಿತ
ನವದೆಹಲಿ: ಕಳೆದ ಕೆಲವು ತಿಂಗಳುಗಳಿಂದ ಚಿನ್ನ ಪ್ರಿಯರಿಗೆ ಕೇವಲ ಏರಿಕೆ ಸುದ್ದಿಗಳು ಬಿಟ್ಟರೆ ಇಳಿಕೆ ಅಥವಾ ಕುಸಿತದ ಸುದ್ದಿ ಹೆಚ್ಚಾಗಿ ಕೇಳಿದ್ದು ತೀರ ಕಡಿಮೆಯೇ. ಜೂನ್​-ಜುಲೈ ತಿಂಗಳಲ್ಲಿ ಮದುವೆ ಮತ್ತು ಶುಭ ಕಾರ್ಯಗಳ ಸೀಸನ್​ ಆರಂಭವಾಯಿತು. ಹೀಗಿರುವಾಗಲೇ, ಚಿನ್ನದ ಬೆಲೆಗಳು ದಿಢೀರ್ ದುಬಾರಿ ಆಯಿತು. ಅಂದು ಹೆಚ್ಚಳವಾಗಲು ಶುರುವಾದ ಗೋಲ್ಡ್​ ದರ, ಇಂದಿಗೂ ಅದರ ವೇಗವನ್ನು ಮುಂದುವರಿಸಿಕೊಂಡು ಹೋಗಿದೆ.
ಅದರಲ್ಲೂ, ಬೆಳ್ಳಿ ಬೆಲೆಗಳು ಚಿನ್ನಕ್ಕೆ ಭಾರೀ ಪೈಪೋಟಿ ಕೊಡುತ್ತಿವೆ. ಈಗಾಗಲೇ ಕೆಜಿಗೆ 2 ಲಕ್ಷ ರೂ. ದಾಟಿ ಹೋಗಿರುವ ಬೆಳ್ಳಿ, ಕುಸಿತದ ಹಾದಿಯತ್ತ ತಿರುಗಿಯೇ ನೋಡುತ್ತಿಲ್ಲ. ಇದು ಸದ್ಯ ಚಿನ್ನ-ಬೆಳ್ಳಿ ಗ್ರಾಹಕರಿಗೆ ದೊಡ್ಡ ತಲೆಬಿಸಿಯಾಗಿ ಕಾಡುತ್ತಿದೆ. ಕಾರಣ, ಅತ್ತ ಚಿನ್ನವು ಇಲ್ಲ, ಇತ್ತ ಬೆಳ್ಳಿಯೂ ಇಲ್ಲ ಎನ್ನುವಂತಾಗಿದೆ. ಆದರಿಂದು, ಕುಸಿತದತ್ತ ಗೋಲ್ಡ್​-ಸಿಲ್ವರ್​ ಮುಖಮಾಡಿರುವುದು ಖರೀದಿದಾರರಲ್ಲಿ ಕೊಂಚ ನಿರಾಳ ತಂದಿದೆ.
ಇಂದು (ಡಿ.19), 10 ಗ್ರಾಂ 24 ಕ್ಯಾರೆಟ್​ ಚಿನ್ನದ ಬೆಲೆಯಲ್ಲಿ 660 ರೂ. ಇಳಿಕೆಯಾದರೆ, ಬೆಳ್ಳಿ ಪ್ರತಿ ಕೆಜಿಗೆ 2,000 ರೂ. ಕುಸಿತ ಕಂಡಿದೆ. ಇಂದು ಬುಲಿಯನ್ ಮಾರುಕಟ್ಟೆಯಲ್ಲಿ, 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 600 ರೂ. ಇಳಿಕೆಯಾಗಿದ್ದು, 1,23,000 ರೂ. ಮಾರಾಟವಾಗುತ್ತಿದೆ. ಇನ್ನು ಬೆಳ್ಳಿ ಪ್ರತಿ ಕೆಜಿಗೆ 2,09,000 ರೂ. ದರದಲ್ಲಿ ಮಾರಾಟವಾಗುತ್ತಿದೆ.

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ

  • ಇಂದು ದೆಹಲಿಯಲ್ಲಿ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,34,330 ರೂ.ಗೆ ತಲುಪಿದೆ. ಅದೇ ರೀತಿ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,23,150 ರೂ. ಆಗಿದೆ.
  • ಮುಂಬೈ, ಬೆಂಗಳೂರಿನಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,34,180 ರೂ.ಗೆ ತಲುಪಿದೆ. ಅದೇ ರೀತಿ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,23,000 ರೂ.ಗೆ ಬಂದು ನಿಂತಿದೆ.
  • ಇನ್ನು ಹೈದರಾಬಾದ್​ ಸೇರಿದಂತೆ ತೆಲುಗು ರಾಜ್ಯಗಳಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,34,180 ರೂ.ಗೆ ತಲುಪಿದೆ. ಅದೇ ರೀತಿ, 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,23,000 ರೂ. ಆಗಿದೆ.

ಬೆಳ್ಳಿ 2000 ರೂ. ಕುಸಿತ

  • ದೆಹಲಿಯಲ್ಲಿ ಒಂದು ಕೆಜಿ ಬೆಳ್ಳಿ ಇಂದು 1,89,000 ರೂ.ಗೆ ತಲುಪಿದೆ.
  • ಮುಂಬೈ, ಬೆಂಗಳೂರಿನಲ್ಲಿ ಪ್ರಸ್ತುತ ಒಂದು ಕೆಜಿ ಬೆಳ್ಳಿಯ ಬೆಲೆ 1,89,000 ರೂ. ಇದೆ.
  • ಇನ್ನು ಚೆನ್ನೈ, ಹೈದರಾಬಾದ್‌, ತೆಲಂಗಾಣದಲ್ಲಿ 3000 ರೂ. ಇಳಿಕೆಯಾಗಿದ್ದು, ಪ್ರತಿ ಕೆಜಿ ಬೆಲೆ 1,98,900 ರೂ. ಆಗಿದೆ.
ಗಮನಿಸಿ: ಮೇಲೆ ತಿಳಿಸಲಾದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾವಣೆಗೆ ಒಳಪಟ್ಟಿರುತ್ತವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net