ದೇಶದ ಪ್ರಮುಖ ನಗರಗಳಲ್ಲಿನ ಚಿನ್ನದ ಬೆಲೆಗಳು ಎಷ್ಟಾಗಿದೆ ಎಂದು ನೋಡುವುದಾದರೆ, ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಬೆಂಗಳೂರಿನಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,54,350 ರೂ.ಗಳಾಗಿದ್ದರೆ, 22 ಕ್ಯಾರೆಟ್ ಬೆಲೆ 1,41,500 ರೂ. ಆಗಿದೆ. ಮುಂಬೈ, ಕೋಲ್ಕತ ಮತ್ತು ಚೆನ್ನೈ ನಗರಗಳಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,54,200 ರೂ.ಗಳಿಗೆ ತಲುಪಿದ್ದರೆ, 22 ಕ್ಯಾರೆಟ್ ಬೆಲೆ 1,41,350 ರೂ. ಇದೆ. ಇನ್ನು ಹೈದರಾಬಾದ್, ವಿಜಯವಾಡ, ವಿಶಾಖಪಟ್ಟಣದಲ್ಲಿ 24 ಕ್ಯಾರೆಟ್ ಬೆಲೆ 1,54,200 ರೂ. ಆಗಿದ್ದರೆ, 22 ಕ್ಯಾರೆಟ್ ಬೆಲೆ 1,41,350 ರೂ.ನಲ್ಲೇ ಉಳಿದಿದೆ.