ಬೆಂಗಳೂರು: ಮದುವೆ ಸೀಸನ್ ಸದ್ಯಕ್ಕಿಲ್ಲ ನಿಜ. ಹಾಗಂತ, ಶುಭಕಾರ್ಯಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ ಖರೀದಿಸುವ ಪ್ಲ್ಯಾನ್ ನಿಜಕ್ಕೂ ಕಷ್ಟಸಾಧ್ಯ. ಕಾರಣ, ಆ ಸಮಯಕ್ಕೆ ಮತ್ತೆ ಚಿನ್ನ-ಬೆಳ್ಳಿ ಬೆಲೆಗಳು ದಿಢೀರ್ ಏರಿಕೆಯಾಗಿರುತ್ತದೆ. ಹೀಗಾಗಿ, ಮುಂಚಿತವಾಗಿಯೇ ಕೊಳ್ಳುವುದು ಉತ್ತಮ. ಇಂದು ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದ್ದು, ಬೆಳ್ಳಿ ಹೆಚ್ಚಳ ಕಂಡಿದೆ. ಸಿಲ್ವರ್ ರೇಟ್ ಸತತ ಎರಡನೇ ದಿನವೂ ಏರಿಕೆಯಾಗಿದ್ದು, ಹೊಸ ದಾಖಲೆಯತ್ತ ಮುಖಮಾಡಿದೆ.