ಇಂದು ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 380 ರೂ. ಹೆಚ್ಚಾಗಿದ್ದರೆ, ಪ್ರತಿ ಕೆಜಿ ಬೆಳ್ಳಿ ದರದಲ್ಲಿ 3,000 ಏರಿಕೆಯಾಗಿದೆ. ಇದು ಖರೀದಿದಾರರನ್ನು ತೀರ ಆತಂಕಕ್ಕೆ ದೂಡಿದೆ. ಬುಲಿಯನ್ ಮಾರುಕಟ್ಟೆಯಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 380 ರೂ. ಏರಿಕೆಯಾಗಿ, 1,43,780 ರೂ.ಗೆ ತಲುಪಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 350 ರೂ. ಏರಿಕೆಯಾಗಿ, 1,31,800 ರೂ.ಗೆ ತಲುಪಿದೆ. ಇನ್ನು 18 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 290 ರೂ. ಹೆಚ್ಚಾಗಿ, 1,07,840 ರೂ.ನಲ್ಲಿ ಮಾರಾಟವಾಗುತ್ತಿದೆ.