ನವದೆಹಲಿ: ಕಳೆದ ವರ್ಷ ದೀಪಾವಳಿ ಹಬ್ಬಕ್ಕೂ ಮುನ್ನ ಕೊಂಚ ಇಳಿಕೆಯಾಗಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು, ಹೊಸ ವರ್ಷದ ಮೊದಲ ಹಬ್ಬದಲ್ಲಿ ಸಾರ್ವಕಾಲಿಕ ದಾಖಲೆಯ ಗರಿಷ್ಠ ಮಟ್ಟವನ್ನು ಮೀರಿ ಹೊಸ ದಾಖಲೆ ನಿರ್ಮಿಸುವತ್ತ ಸಾಗುತ್ತಿವೆ. ಇಂದು ಸಹ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಏರಿಕೆಯಾಗಿದ್ದು, 24 ಕ್ಯಾರೆಟ್ 10 ಗ್ರಾಂ ಗೋಲ್ಡ್ ಬೆಲೆ 380 ರೂ. ಹೆಚ್ಚಾಗಿದೆ. ಅದೇ ಬೆಳ್ಳಿ ಕೆಜಿಗೆ 5,000 ರೂ. ಏರಿದೆ.