'ಚಿನ್ನ'ವಲ್ಲ ಈಗ ಬೆಳ್ಳಿ ಮೇಲಿನ ಆಸೆ ಕೂಡ ದೂರ! ದಿನ ಕಳೆದಂತೆ ದಾಖಲೆ ಬರೆಯುತ್ತಿದೆ ಸಿಲ್ವರ್​ ಬೆಲೆ; ಹೀಗಿದೆ ಇಂದಿನ

ಚಿನ್ನ-ಬೆಳ್ಳಿ ಬೆಲೆ
ಚಿನ್ನ-ಬೆಳ್ಳಿ ಬೆಲೆ
Published on

ಪ್ರಮುಖ ಮುಖ್ಯಾಂಶಗಳು

  • ಚಿನ್ನಕ್ಕೆ ಈಗ ಬೆಳ್ಳಿ ಪೈಪೋಟಿ
  • ದಾಖಲೆ ಮಟ್ಟಕ್ಕೆ ಏರಿದ ಗೋಲ್ಡ್​ ಬೆಲೆ
  • ನಿನ್ನೆ 10,000 ರೂ. ಇಂದು 1000 ಹೆಚ್ಚಳ
ನವದೆಹಲಿ: ಕ್ರಿಸ್‌ಮಸ್ ಹಬ್ಬದ ದಿನದಂದೇ ಚಿನ್ನ-ಬೆಳ್ಳಿ ಬೆಲೆಗಳು ಊಹೆಗೂ ಮೀರಿ ಏರಿಕೆಯಾಗಿದೆ. ಇಂದು ಒಂದೇ ದಿನ ಸಾರ್ವಕಾಲಿಕ ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿರುವ ಬೆಳ್ಳಿ, ಕನಿಷ್ಠ ಚಿನ್ನ ಅಲ್ಲದಿದ್ದರೂ ಬೆಳ್ಳಿಯಾದರೂ ಕೊಳ್ಳೋಣ ಎಂಬ ಆಸೆ ಇಟ್ಟುಕೊಂಡವರಿಗೆ ನಿರಾಸೆ ತಂದೊಡ್ಡಿದೆ.
ನಿನ್ನೆ (ಡಿ.24) ತೀವ್ರವಾಗಿ ಏರಿಕೆ ಕಂಡಿದ್ದ ಬೆಳ್ಳಿಯ ಬೆಲೆ ಇಂದು ಕೂಡ ಹೆಚ್ಚಾಗಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಗಳು ಗಗನಕ್ಕೇರುತ್ತಲೇ ಇವೆ. ಇಂದು 24 ಕ್ಯಾರೆಟ್​ 10 ಗ್ರಾಂ ಚಿನ್ನದ ಬೆಲೆ 320 ರೂ. ಏರಿಕೆಯಾಗಿದ್ದರೆ, ಬೆಳ್ಳಿ ಬೆಲೆ ಪ್ರತಿ ಕೆಜಿಗೆ 1,000 ರೂ. ಹೆಚ್ಚಾಗಿದೆ. ಇನ್ನು 22 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ 300 ರೂ. ಏರಿಕೆಯಾಗಿ, 1,27,650 ರೂ. ತಲುಪಿದೆ.

ನಿನ್ನೆ 10,000 ರೂ., ಇಂದು 1000 ರೂ. ಹೆಚ್ಚಳ

ಇಂದು ಕೂಡ ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದ್ದು, ನಿನ್ನೆ ಪ್ರತಿ ಕೆಜಿ ಬೆಳ್ಳಿ 10,000 ರೂ.ಗೆ ಏರಿತು. ಇದು ಗ್ರಾಹಕರನ್ನು ಅಕ್ಷರಶಃ ಕಂಗಾಲಾಗಿಸಿತು. ಚಿನ್ನವಂತು ಕೈಗೆಟುಕುತ್ತಿಲ್ಲ, ಕನಿಷ್ಠ ಬೆಳ್ಳಿ ಆದರೂ ಖರೀದಿಸೋಣ ಎಂದು ಲೆಕ್ಕಾಚಾರ ಹಾಕಿಕೊಂಡಿದ್ದ ಗ್ರಾಹಕರಿಗೆ ಇದೀಗ ಬೆಳ್ಳಿ ಆಸೆ ಕೂಡ ದೂರವಾಗಿದೆ. ಇಂದು ಕೆಜಿ ಬೆಳ್ಳಿಗೆ 1,000 ರೂ. ಹೆಚ್ಚಾಗಿದೆ.
ಅಲ್ಲಿಗೆ ಬುಲಿಯನ್ ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 2,34,000 ರೂ.ಗೆ ಮಾರಾಟವಾಗುತ್ತಿದೆ. ಹೈದರಾಬಾದ್ ಮತ್ತು ಚೆನ್ನೈ ಬುಲಿಯನ್ ಮಾರುಕಟ್ಟೆಗಳಲ್ಲಿ 2,45,000 ರೂ. ತಲುಪಿದೆ. ಇನ್ನು ದೆಹಲಿ, ಮುಂಬೈ, ಬೆಂಗಳೂರು ಮತ್ತು ಕೋಲ್ಕತ್ತಾದಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 2,34,000 ರೂ. ಆಗಿದೆ.
ಗಮನಿಸಿ: ಮೇಲೆ ತಿಳಿಸಲಾದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾವಣೆಗೆ ಒಳಪಟ್ಟಿರುತ್ತವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net