ಈ ಬಿಕ್ಕಟ್ಟಿನ ಕುರಿತು ಪ್ರತಿಕ್ರಿಯಿಸಿರುವ ಓಪನ್ ಎಐ, ನಮ್ಮ ಸಿಸ್ಟಂನಲ್ಲಿ ಉಂಟಾಗಿರುವ ತಾಂತ್ರಿಕ ದೋಷದ ಬಗ್ಗೆ ನಮಗೆ ಅರಿವಿದೆ. ನಮ್ಮ ಎಂಜಿನಿಯರ್‌ಗಳ ತಂಡವು ಸಮಸ್ಯೆಯನ್ನು ಪತ್ತೆಹಚ್ಚಲು ಮತ್ತು ಸಾಧ್ಯವಾದಷ್ಟು ಬೇಗ ಸೇವೆಯನ್ನು ಮರುಸ್ಥಾಪಿಸಲು ಹಗಲಿರುಳು ಶ್ರಮಿಸುತ್ತಿದೆ ಎಂದು ತಿಳಿಸಿದೆ. ಸೈಬರ್ ದಾಳಿಯ ಸಾಧ್ಯತೆಯ ಬಗ್ಗೆಯೂ ತಜ್ಞರು ಸಂಶಯ ವ್ಯಕ್ತಪಡಿಸಿದ್ದಾರಾದರೂ, ಸಂಸ್ಥೆಯು ಇದುವರೆಗೂ ಯಾವುದೇ ಅಧಿಕೃತ ಕಾರಣವನ್ನು ನೀಡಿಲ್ಲ.