ಕ್ರೀಡಾಂಗಣದಲ್ಲಿ ಅವ್ಯವಸ್ಥೆ; 10 ನಿಮಿಷದಲ್ಲೇ ತೆರಳಿದ ಮೆಸ್ಸಿ; ಅಭಿಮಾನಿಗಳಿಂದ ಮೈದಾನಕ್ಕೆ ಬಾಟಲಿ ತೂರಿ ಆಕ್ರೋಶ | Messi

ಲಯೋನಲ್ ಮೆಸ್ಸಿ
ಲಯೋನಲ್ ಮೆಸ್ಸಿ
Published on
ಕೋಲ್ಕತ್ತಾ: GOAT ಇಂಡಿಯಾ ಟೂರ್ ಅಂಗವಾಗಿ ಮೂರು ದಿನಗಳ ಪ್ರವಾಸದ ಅಂಗವಾಗಿ ಭಾರತಕ್ಕೆ ಆಗಮಿಸಿರುವ ಫುಟ್ಬಾಲ್ ದಂತಕತೆ ಲಯೋನಲ್ ಮೆಸ್ಸಿ(Lionel Messi) ಅವರ ಕೋಲ್ಕತ್ತಾದ ಕಾರ್ಯಕ್ರಮವು ಅವ್ಯವಸ್ಥೆಯಿಂದ ಕೂಡಿದ ಹಿನ್ನೆಲೆ ಅಭಿಮಾನಿಗಳಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಮೈದಾನಕ್ಕೆ ಬಾಟಲಿಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿವೇಕಾನಂದ ಯುವಭಾರತಿ ಸಾಲ್ಟ್ ಲೇಕ್ ಕ್ರೀಡಾಂಗಣದೊಳಗೆ ಮೆಸ್ಸಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಜನಸಂದಣಿಯ ಕಳಪೆ ನಿರ್ವಹಣೆ, ವೀಕ್ಷಣೆ ಪ್ರದೇಶಗಳು ಸೀಮಿತ ಜೊತೆ ಮೆಸ್ಸಿ ಬೆಳಿಗ್ಗೆ 11:15 ಕ್ಕೆ ಸ್ಥಳಕ್ಕೆ ಬಂದು, ಪ್ರತಿಮೆ ಅನಾವರಣ ಮಾಡಿ, ಹತ್ತೇ ನಿಮಿಷದಲ್ಲಿ ಕ್ರೀಡಾಂಗಣದಿಂದ ಬೇಗನೇ ತೆರಳಿದ್ದು, ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. 
ಮೆಸ್ಸಿ ನೋಡಲು ಅಭಿಮಾನಿಗಳು 5,000 ರೂ.ಗಳಿಂದ 45,000 ರೂ.ಗಳವರೆಗಿನ ಟಿಕೆಟ್‌ ಖರೀದಿಸಿ ತಮ್ಮ ಶ್ರೇಷ್ಠ ಫುಟ್ಬಾಲ್ ಆಟಗಾರನನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದರು, ಆದರೆ ಅವರು ಕ್ರೀಡಾಂಗಣದಿಂದ ಬಹುಬೇಗನೇ ತೆರಳಿದ್ದು ಅಭಿಮಾನಿಗಳಿಂದ ಟೀಕೆಗೆ ಗುರಿಯಾಗಿದೆ. 
ಎಎನ್​ಐ ಜೊತೆ ಮಾತನಾಡಿರುವ ಅಭಿಮಾನಿಯೊಬ್ಬರು,ಮೆಸ್ಸಿಯ ಭೇಟಿಯಲ್ಲಿ ಸೆಲೆಬ್ರಿಟಿಗಳ ಸಂವಹನವೇ ಹೆಚ್ಚಾಗಿತಗ್ತು, ಸಾಮಾನ್ಯ ಅಭಿಮಾನಿಗಳನ್ನು ಬದಿಗಿಟ್ಟಿದ್ದಾರೆ. ಅನೇಕರು ಈ ಕಾರ್ಯಕ್ರಮಕ್ಕಾಗಿ ತಿಂಗಳುಗಟ್ಟಲೆ ಕಾಯುತ್ತಿದ್ದೆವು. ಆದರೆ ಸಂಘಟಕರು ಕಾರ್ಯಕ್ರಮವನ್ನು ದುರುಪಯೋಗ ಮಾಡಿಕೊಂಡು, ನಮಗೆ ವಂಚನೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net