ಬುಧವಾರ ವಿಧಾನಸಭೆಯಲ್ಲಿ ಟಿವಿಕೆ ಸರ್ಕಾರವು ವಿಶ್ವಾಸಮತ ಯಾಚನೆಯಲ್ಲಿ ಗೆದ್ದಿದ್ದರೂ, ಮೈತ್ರಿಕೂಟದ ಒಳಗಡೆಯೇ ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಇಂತಹ ನೇಮಕಾತಿಗಳು ಸರ್ಕಾರದ ವಿಶ್ವಾಸಾರ್ಹತೆಯನ್ನು ಹಾಳುಮಾಡುತ್ತವೆ ಎಂದು ಕೆಲವು ಮಿತ್ರಪಕ್ಷಗಳು ಆಕ್ಷೇಪಿಸಿವೆ. ಆದರೆ ಟಿವಿಕೆ ಸಚಿವ ನಿರ್ಮಲ್ ಕುಮಾರ್ ಈ ನೇಮಕಾತಿಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದು, ವೆಟ್ರಿವೇಲ್ರನ್ನು ಮಾಧ್ಯಮ ವಕ್ತಾರರಾಗಿ ನೇಮಿಸಲಾಗಿತ್ತು ಮತ್ತು ಜ್ಯೋತಿಷ್ಯ ಅವರ ವೈಯಕ್ತಿಕ ಜೀವನ ಎಂದು ಹೇಳಿದ್ದಾರೆ. ವಿಜಯ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆರಳೆಣಿಕೆ ದಿನಗಳಲ್ಲಿ ಈ ಬೆಳವಣಿಗೆಗಳು ನಡೆದಿರುವುದು ಸಿಎಂ ವಿಜಯ್ಗೆ ಮೊದಲ ಹಿನ್ನಡೆಯಾಗಿ ಪರಿಣಮಿಸಿದ್ದು, ವಿರೋಧ ಪಕ್ಷಗಳಿಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಪ್ರಬಲ ಅಸ್ತ್ರವನ್ನು ನೀಡಿದೆ(ಏಜೆನ್ಸೀಸ್).