

ತೆರಿಗೆ ಪಾವತಿಯಲ್ಲಿ ಉತ್ತಮ ದಾಖಲೆ ಹೊಂದಿರುವ ವ್ಯಾಪಾರಿಗಳಿಗೆ ‘ವಿಶ್ವಾಸಾರ್ಹ ಡೀಲರ್’ ಮಾನ್ಯತೆ ನೀಡಿ, ಅವರ ಸರಕುಗಳ ಭೌತಿಕ ತಪಾಸಣೆಯನ್ನು ಕಡಿಮೆ ಮಾಡುವ ಆಲೋಚನೆಯೂ ಇದೆ. 50,000 ರೂ.ಗಿಂತ ಹೆಚ್ಚಿನ ಮೌಲ್ಯದ ಸರಕು ಸಾಗಣೆಗೆ ಇ-ವೇ ಬಿಲ್ ಕಡ್ಡಾಯವಾಗಿದ್ದು, ಹೊಸ ಬದಲಾವಣೆಗಳು ತಂತ್ರಜ್ಞಾನ ಆಧಾರಿತ ಪಾರದರ್ಶಕತೆಗೆ ಒತ್ತು ನೀಡಲಿವೆ ಎಂದು ಮೂಲಗಳು ತಿಳಿಸಿವೆ.
ಸ್ಟಾರ್ಟಪ್ಗಳ ಮಾನ್ಯತೆಯ ಮಾನದಂಡಗಳನ್ನು ಕೇಂದ್ರ ಸರ್ಕಾರ ಪರಿಷ್ಕರಿಸಿದೆ. ಸ್ಟಾರ್ಟ್ಅಪ್ ಎಂದು ಪರಿಗಣಿಸಲು ಇದ್ದ ವಾರ್ಷಿಕ ವಹಿವಾಟಿನ ಮಿತಿಯನ್ನು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆ 100 ಕೋಟಿ ರೂ.ನಿಂದ 200 ಕೋಟಿ ರೂ.ಗೆ ಏರಿಸಿದೆ. ಅತ್ಯಾಧುನಿಕ ತಂತ್ರಜ್ಞಾನಗಳ ಮೇಲೆ ಕೆಲಸ ಮಾಡುವ ಸಂಸ್ಥೆಗಳಿಗಾಗಿ ‘ಡೀಪ್ ಟೆಕ್ ಸ್ಟಾರ್ಟ್ಅಪ್’ ಎಂಬ ಹೊಸ ವಿಭಾಗವನ್ನು ಪರಿಚಯಿಸಲಾಗಿದೆ. ಇಂತಹ ಉದ್ಯಮಗಳ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಸಮಯ ಬೇಕಾಗುವುದರಿಂದ, ಅವುಗಳ ವಯೋಮಿತಿಯನ್ನು 10 ವರ್ಷದಿಂದ 20 ವರ್ಷಕ್ಕೆ ಮತ್ತು ವಹಿವಾಟಿನ ಮಿತಿಯನ್ನು 300 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.
ಸಹಕಾರ ಸಂಘಗಳಿಗೂ ಅವಕಾಶ: ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ನಾವೀನ್ಯತೆಯನ್ನು ಉತ್ತೇಜಿಸುವ ಉದ್ದೇಶದಿಂದ, ಸ್ಟಾರ್ಟ್ಅಪ್ ಮಾನ್ಯತೆ ಪಡೆಯಲು ಈಗ ಸಹಕಾರ ಸಂಘಗಳಿಗೂ ಸರ್ಕಾರ ಅವಕಾಶ ನೀಡಿದೆ.