21 ಆಗೋವರೆಗೂ ಬೇಡ ಮದುವೆ ಎಂದಿದ್ದೇ ಕಸಿಯಿತು ತಂದೆ ಪ್ರಾಣ! ಪಾಪಿ ಪುತ್ರನಿಗಿಲ್ಲ ಪಶ್ಚಾತಾಪ | Murder Case

ಶುಕ್ರವಾರ ಸೆಕ್ಟರ್ 22ರಲ್ಲಿರುವ ತಮ್ಮ ಸರ್ಕಾರಿ ನಿವಾಸದಲ್ಲಿ ತಲೆಗೆ ಗುಂಡೇಟು ಬಿದ್ದ ಸ್ಥಿತಿಯಲ್ಲಿ ಮೃತಪಟ್ಟಿರುವುದು ದೃಢವಾಗಿದೆ. ಈ ಪ್ರಕರಣ ಬೆನ್ನತ್ತಿದ ಖಾಕಿ ಪಡೆಗೆ 18 ವರ್ಷದ ಮಗನಿಂದಲೇ ನಿತಿನ್​ ಸಾವಿಗೀಡಾಗಿದ್ದಾರೆ ಎಂಬ ಸಂಗತಿ ಬಯಲಾಗಿದೆ.
Murder Case
21 ಆಗೋವರೆಗೂ ಬೇಡ ಮದುವೆ ಎಂದಿದ್ದೇ ಕಸಿಯಿತು ತಂದೆ ಪ್ರಾಣ! ಪಾಪಿ ಪುತ್ರನಿಗಿಲ್ಲ ಪಶ್ಚಾತಾಪ
Published on: 

ಚಂಡೀಗಢ: 21 ವರ್ಷ ವಯಸ್ಸು ದಾಟುವವರೆಗೆ ಯಾವುದೇ ಕಾರಣಕ್ಕೂ ಮದುವೆ ಬೇಡ ಅಂತ ಹೇಳಿದ ತಂದೆಯನ್ನೇ ಗುಂಡಿಟ್ಟು ಕೊಂದ ಪಾಪಿ ಪುತ್ರನಿಗೆ ಕಡೆಗೂ ಜಾಮೀನು ಸಿಕ್ಕಿದ ಘಟನೆ ನಗರದಲ್ಲಿ ವರದಿಯಾಗಿದೆ.

ಮೃತ ವ್ಯಕ್ತಿಯನ್ನು ಚಂಡೀಗಢ ಪೊಲೀಸ್‌ ಠಾಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಕೆಲಸ ನಿರ್ವಹಿಸುತ್ತಿದ್ದ ನಿತಿನ್​ ಸಿಂಗ್ ಎಂದು ಗುರುತಿಸಲಾಗಿದೆ. ಪೊಲೀಸ್ ಪ್ರಧಾನ ಕಚೇರಿಯ ಲೆಕ್ಕಪತ್ರ ವಿಭಾಗದಲ್ಲಿ ಕೆಲಸ ಮಾಡಿಕೊಂಡಿದ್ದ ನಿತಿನ್ ಸಿಂಗ್, ಶುಕ್ರವಾರ ಸೆಕ್ಟರ್ 22ರಲ್ಲಿರುವ ತಮ್ಮ ಸರ್ಕಾರಿ ನಿವಾಸದಲ್ಲಿ ತಲೆಗೆ ಗುಂಡೇಟು ಬಿದ್ದ ಸ್ಥಿತಿಯಲ್ಲಿ ಮೃತಪಟ್ಟಿರುವುದು ದೃಢವಾಗಿದೆ. ಈ ಪ್ರಕರಣ ಬೆನ್ನತ್ತಿದ ಖಾಕಿ ಪಡೆಗೆ 18 ವರ್ಷದ ಮಗನಿಂದಲೇ ನಿತಿನ್​ ಸಾವಿಗೀಡಾಗಿದ್ದಾರೆ ಎಂಬ ಸಂಗತಿ ಬಯಲಾಗಿದೆ.

ತಂದೆಯ ಮಾತಿನಿಂದ ಕುಪಿತ

ಪ್ರಾಥಮಿಕ ತನಿಖೆಯ ವರದಿ ಪ್ರಕಾರ, ನಿತಿನ್ ಅವರ ಪುತ್ರ ಅರ್ಮಾನ್, ತಾನು ಪ್ರೀತಿಸಿದ ಹುಡುಗಿ ಜತೆ ಮದುವೆ ಮಾಡಿಕೊಡುವಂತೆ ತಂದೆಗೆ ಪೀಡಿಸಿದ್ದಾನೆ. ಇದಕ್ಕೆ ನಿರಾಕರಿಸಿದ ಕಾರಣಕ್ಕೆ ಅಪ್ಪನೊಂದಿಗೆ ಜಗಳವಾಡಿದ್ದಾನೆ. 21 ವಯಸ್ಸು ಆಗುವವರೆಗೂ ನಿನಗೆ ಮದುವೆ ಬೇಡ ಎಂಬ ತಂದೆಯ ಮಾತಿನಿಂದ ಕುಪಿತಗೊಂಡ ಅರ್ಮಾನ್​, ಅಲ್ಲೇ ಇದ್ದ ತಂದೆಯ ಪಿಸ್ತೂಲ್​ನಿಂದ ಶೂಟ್​ ಮಾಡಿದ್ದಾನೆ ಎನ್ನಲಾಗಿದೆ. ​

ತಂದೆಯನ್ನು ಹತ್ಯೆಗೈದ ಬಳಿಕ ತಾಯಿಯ ಕುತ್ತಿಗೆ ಹಿಡಿದು ಎಳೆದಾಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದು, ಆಕೆ ತಪ್ಪಿಸಿಕೊಂಡು ಮನೆಯ ಮೇಲೆ ಓಡಿಹೋಗಿ ಅಕ್ಕ-ಪಕ್ಕದ ಮನೆಯವರಿಗೆ ನಡೆದ ಕೊಲೆ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ವಿವರಿಸಲಾಗಿದೆ.

Also Read
ಈ ವಾರ ಇಬ್ಬರು ಎಲಿಮಿನೇಟ್​! ತಾಂಡವ್​ ರಾಮ್​ ದೊಡ್ಮನೆಗೆ ವಾಪಾಸ್​ ಬೆನ್ನಲ್ಲೇ ಹೊಸ ವೈಲ್ಡ್​ಕಾರ್ಡ್​ ಎಂಟ್ರಿಗಳು? | BBK13
Murder Case

ಇದಕ್ಕೂ ಮೊದಲು ಇಬ್ಬರ ಸಾವು!

ಇನ್ನು, ತಂದೆಯನ್ನೇ ಕೊಲೆಗೈದ ಬಗ್ಗೆ ಆತ ಪೊಲೀಸರ ಮುಂದೆ ಪಶ್ಚಾತ್ತಾಪ ವ್ಯಕ್ತಪಡಿಸಲಿಲ್ಲ ಎಂದು ಕುಮಾರ್ ತಿಳಿಸಿದ್ದಾರೆ. ಈತನ ಹಿನ್ನೆಲೆ ಚೆಕ್​ ಮಾಡಿದ ಖಾಕಿಗೆ ಆತ ಈ ಮೊದಲೇ ಇಬ್ಬರ ಸಾವಿಗೆ ಕಾರಣನಾಗಿದ್ದು, ಜಾಮೀನಿನ ಮೇಲೆ ಹೊರಬಂದಿದ್ದ ಎಂಬುದು ಗೊತ್ತಾಗಿದೆ. ಈ ವರ್ಷದ ಆರಂಭದಲ್ಲಿ ಬೈಕ್ ಮೇಲೆ ಕಾರು ಹರಿಸಿ ಇಬ್ಬರು ಸಹೋದರರ ಸಾವಿಗೆ ಕಾರಣವಾದ ಕೇಸ್​ನಲ್ಲಿ ಅರ್ಮಾನ್ ಬೇಲ್​ ಪಡೆದು ಹೊರಗಿದ್ದ ಎಂದು ವರದಿಗಳು ಉಲ್ಲೇಖಿಸಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net