ಈ ಕುರಿತು ಮಾತನಾಡಿದ ಸಿಜೆಪಿ ವಕ್ತಾರ ಸೌರವ್ ದಾಸ್, ಜೆನ್ ಜಿ, ಯುವ ಪ್ರತಿಭಟನಾಕಾರರು ಮತ್ತು ಮೃತರ ಕುಟುಂಬಗಳಿಗೆ ಕೇಂದ್ರವು ದ್ರೋಗ ಬಗೆದಿದೆ. ಜುಲೈ 25 ರಂದು ಪ್ರತಿಭಟನಾಕಾರರಿಗೆ ನೀಡಿದ ಭರವಸೆಗಳನ್ನು ಮೋದಿ ಸರ್ಕಾರ ಉಳಿಸಿಕೊಳ್ಳುತ್ತದೆ ಎಂದು ನಾವು ನಂಬುವುದಿಲ್ಲ. ಆದ್ದರಿಂದ, ಸೆ. 5ರಂದು ಇಂಡಿಯಾ ಗೇಟ್‌ನಿಂದ ದೆಹಲಿ ಪೊಲೀಸ್ ಪ್ರಧಾನ ಕಚೇರಿಯವರೆಗೆ ಶಾಂತಿಯುತ ಪ್ರತಿಭಟನೆಗೆ ಕರೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.