ನವೆಂಬರ್ 21ರಂದು ಬೆಳಗ್ಗೆ 10.15ಕ್ಕೆ 300 ಪೌರಕಾರ್ಮಿಕರಿಗೆ ನಾರಾಯಣಪೂಜೆ ಸಲ್ಲಿಸುವ ಮೂಲಕ ಶತಮಾನೋತ್ಸವ ಸಮಾರಂಭಕ್ಕೆ ಚಾಲನೆ ನೀಡಲಾಗುತ್ತದೆ. ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬೆಳಗ್ಗೆ 11.50ಕ್ಕೆ ಶತಮಾನೋತ್ಸವ ಸ್ಮರಣ ಸಂಚಿಕೆ, "ಮೈಸೂರಿನಲ್ಲಿ ಸ್ವಾಮಿ ವಿವೇಕಾನಂದರು' ಗ್ರಂಥ, ಆಶ್ರಮದ ಇತಿಹಾಸ, ಪರಿಷತ ಗ್ರಂಥದ ಬಿಡುಗಡೆ ಮಾಡಲಾಗುತ್ತದೆ. ಮಧ್ಯಾಹ್ನ 3.30ಕ್ಕೆ ಶತಮಾನೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಶೇಷ ಅಂಚೆ ಕವರ್, ಪಿಕ್ಚರ್ ಪೋಸ್ಟ್ ಕಾರ್ಡ್, "ಶ್ರೀರಾಮಕೃಷ್ಣ ಆಶ್ರಮ&100 ವರ್ಷಗಳು' ವಿಡಿಯೋ ಬಿಡುಗಡೆಗೊಳಿಸಲಾಗುತ್ತದೆ. ರಾಮಕೃಷ್ಣಮಠ, ರಾಮಕೃಷ್ಣ ಮಿಷನ್, ಬೇಲೂರು ಮಠದ ಅಧ್ಯಕ್ಷ ಸ್ವಾಮಿ ಗೌತಮಾನಂದಜಿ ಮಹಾರಾಜ್ ಸಾನ್ನಿಧ್ಯ ವಹಿಸುವರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಊಟಿ ರಾಮಕೃಷ್ಣಮಠದ ಸ್ವಾಮಿ ರಾವೇಶಾನಂದಜಿ, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಇನ್ನಿತರರು ಪಾಲ್ಗೊಳ್ಳುವರು.