ಸಂಭ್ರಮಿಸಿ ಆದರೆ... ಧರ್ಮೇಂದ್ರ ಪ್ರಧಾನ್​ ರಾಜೀನಾಮೆ ಬಳಿಕ ಸಿಜೆಪಿ ಭರ್ಜರಿ ಪಾರ್ಟಿ; 'ಜಿರಳೆ'ಗಳಿಗೆ ಸೋನಮ್​ ವಾಂಗ್​ಚುಕ್​ ನೀಡಿದ ಕಿವಿಮಾತೇನು? Sonam Wangchuk on CJP Party

ಸಿಜೆಪಿ ಕಾರ್ಯಕರ್ತರಿಗೆ ಸೋನಮ್​ ವಾಂಗ್​​ಚುಕ್​ ಕಿವಿಮಾತು
ಸಿಜೆಪಿ ಕಾರ್ಯಕರ್ತರಿಗೆ ಸೋನಮ್​ ವಾಂಗ್​​ಚುಕ್​ ಕಿವಿಮಾತು
Published on

ಪ್ರಮುಖ ಮುಖ್ಯಾಂಶಗಳು

  • NEET ಅಕ್ರಮ ವಿರೋಧಿ ಹೋರಾಟಕ್ಕೆ ಜಯ
  • ಶಿಕ್ಷಣ ಸಚಿವರ ರಾಜೀನಾಮೆ ಬಳಿಕ ಕಾಕ್ರೋಚ್​ ಜನತಾ ಪಾರ್ಟಿಯಿಂದ ಸಂಭ್ರಮಾಚರಣೆ
  • ವಿಜಯವನ್ನು ಆನಂದಿಸಿ ಆದರೆ ನಮ್ರತೆಯನ್ನು ಮರೆಯಬೇಡಿ ಎಂದ ಸೋನಮ್​ ವಾಂಗ್​ಚುಕ್​
ನವದೆಹಲಿ: ಕಳೆದೊಂದು ತಿಂಗಳಿನಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾಕ್ರೋಚ್​ ಜನತಾ ಪಾರ್ಟಿ ನೀಟ್​ ಪರೀಕ್ಷೆಯಲ್ಲಿ ಉಂಟಾದ ಅಕ್ರಮವನ್ನು ವಿರೋಧಿಸಿ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಇದಕ್ಕೆ ಖ್ಯಾತ ಪರಿಸರವಾದಿ ಸೋನಮ್​ ವಾಂಗ್​​ಚುಕ್​​ ಕೂಡ ಬೆಂಬಲವನ್ನು ಸೂಚಿಸಿ, ಸರ್ಕಾರದ ಗಮನ ಸೆಳೆಯಲು 26 ದಿನಗಳ ಉಪವಾಸವನ್ನು ಕೈಗೊಂಡಿದ್ದರು.
ಈ ಹೋರಾಟದ ತೀವ್ರತೆಯನ್ನು ಅರಿತ ಕೇಂದ್ರ ಸರ್ಕಾರ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ ಅವರ ರಾಜೀನಾಮೆ ಪಡೆಯುವ ಜೊತೆಗೆ ಇನ್ಮುಂದೆ ಪರೀಕ್ಷಾ ಅಕ್ರಮದಲ್ಲಿ ತೊಡಗುವವರಿಗೆ ಕಠಿಣ ಶಿಕ್ಷೆಯನ್ನು ನೀಡುವ ಮಸೂದೆಯನ್ನು ಜಾರಿಗೆ ತಂದಿದೆ.
ಈಗ, ತಮ್ಮ ಹೋರಾಟ ಸಫಲವಾದ ಹಿನ್ನಲೆ ಕಾಕ್ರೋಚ್​ ಜನತಾ ಪಾರ್ಟಿ ಕಾರ್ಯಕರ್ತರು ಹೋಟೆಲ್​ವೊಂದರಲ್ಲಿ ಮಾಡಿರುವ ಸಂಭ್ರಮಾಚರಣೆಗೆ ಕೆಲ ದಿಕ್ಕುಗಳಿಂದ ವಿರೋಧ ವ್ಯಕ್ತವಾಗುತ್ತಿದ್ದು, ಸೋನಮ್​ ವಾಂಗ್​ಚುಕ್ (Sonam Wangchuk on CJP Party)​ ಕೂಡ ಸಿಜೆಪಿಗೆ ಕಿವಿಮಾತನ್ನು ಹೇಳಿದ್ದಾರೆ.

ವಿಜಯದ ಜೊತೆಗೆ ನಮ್ರತೆಯನ್ನು ಬೆಳೆಸಿಕೊಳ್ಳಿ!

ಈ ಹೋರಾಟದಲ್ಲಿ ಸತತ 26 ದಿನಗಳ ವರೆಗೆ ಉಪವಾಸವಿದ್ದು, ಕೇಂದ್ರ ಸರ್ಕಾರ ಈ ಪ್ರತಿಭಟನೆಯತ್ತ ತಿರುಗಿ ನೋಡುವಂತೆ ಮಾಡಿದ ಸೋನಮ್​ ವಾಂಗ್​ಚುಕ್​​, ಧರ್ಮೇಂದ್ರ ಪ್ರಧಾನ್​​ ರಾಜೀನಾಮೆ ನೀಡಿದ ಕಾರಣ ದೆಹಲಿಯಲ್ಲಿ ಹೋಟೆಲ್​ವೊಂದರಲ್ಲಿ ಪಾರ್ಟಿ ಮಾಡಿದ್ದಾರೆ.
ಈ ಸಂಭ್ರಮಾಚರಣೆ ಕುರಿತು, ಸೋನಮ್​​ ವಾಂಗ್​​ಚಕ್​ರಲ್ಲಿ ಕೇಳಿದಾಗ, ಯಾವುದೇ ಸಂಭ್ರಮಾಚರಣೆ ಆಗಲಿ ಅದರಲ್ಲಿ ನಮ್ರತೆ ಇರಬೇಕು ಹಾಗೆಯೇ ಎಲ್ಲರನ್ನು ಪ್ರೀತಿಯಿಂದ ಕಾಣುವ ಗುಣವಿರಬೇಕೆಂದು ಸೋನಮ್​ ವಾಂಗ್​ಚುಕ್​ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ನಾವು ಅತಿಥಿ ಸತ್ಕಾರ ಮಾಡಿದ್ದೇವೆ!
ತಮ್ಮ ಪಾರ್ಟಿ ಬಗ್ಗೆ ಸಾಮಾಜಿಕ ಜಾಲತಾಣರಗಳಲ್ಲಿ ಚರ್ಚೆ ನಡೆಯುತ್ತಿರುವುದನ್ನು ಗಮನಿಸಿದ ಸಿಜೆಪಿ ವಕ್ತಾರ ಸೌರವ್​​ ದಾಸ್​, ನಾವು ಪಾರ್ಟಿಯನ್ನು ಯಾವುದೇ ಪಂಚತಾರಾ ಹೋಟೆಲ್​​ನಲ್ಲಿ ನಡೆಸಿಲ್ಲ. ಇಲ್ಲಿರುವ ಬಹುತೇಕರು ಭಾರತದ ಇತರೆ ಭಾಗದಿಂದ ಬಂದವರಾಗಿದ್ದರು. 37 ದಿನಗಳ ಹೋರಾಟದ ನಂತರ ಅವರು ತಮ್ಮ ಊರಿಗೆ ಮರಳಲು ಮುಂದಾದಾಗ ನಾವು ಅವರಿಗೆ ಸತ್ಕರಿಸಿದ್ದೆವೆ ಅಷ್ಟೇ ಎಂದು ದಾಸ್​ ತಿಳಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net