ಬಿಹಾರದಲ್ಲಿ 'ಜಾತಿ' ಪ್ರದರ್ಶನಕ್ಕೆ ಬ್ರೇಕ್: ವಾಹನದ ಮೇಲೆ ಸ್ಟಿಕ್ಕರ್ ಅಂಟಿಸಿದರೆ ಬೀಳುತ್ತೆ ಭಾರಿ ದಂಡ! Caste Stickers on Vehicles

ಬಿಹಾರದ ರಸ್ತೆಗಳಲ್ಲಿ ಜಾತಿ ಸೂಚಕ ಸ್ಟಿಕ್ಕರ್ ಇರುವ ವಾಹನಗಳು
ಬಿಹಾರದ ರಸ್ತೆಗಳಲ್ಲಿ ಜಾತಿ ಸೂಚಕ ಸ್ಟಿಕ್ಕರ್ ಇರುವ ವಾಹನಗಳು
Published on
ಬಿಹಾರ್​: ಕಾರುಗಳ ಮೇಲೆ ಜಾತಿ ಸೂಚಕ ಸ್ಟಿಕ್ಕರ್​ (Caste Stickers on Vehicles) ಗಳನ್ನು ಅಂಟಿಸುವುದನ್ನು ಬಿಹಾರದ ರಸ್ತೆ ಸಾರಿಗೆ ಇಲಾಖೆ ನಿರ್ಬಂಧಿಸುವುದಲ್ಲದೆ, ಈ ನಿಯಮವನ್ನು ಮೀರುವವರಿಗೆ 2,000 ರೂಪಾಯಿ ದಂಡ ವಿಧಿಸುವುದಾಗಿ ಆದೇಶಿಸಿದೆ.
ಈ ನಿಯಮವು ಈಗಾಗಲೇ ಜಾರಿಗೆ ಬಂದಿದ್ದು, ಜೂನ್​ ಮೊದಲ ವಾರದವರೆಗೆ ಸ್ಟಿಕ್ಕರ್​ಗಳನ್ನು ವಾಹನಗಳಿಂದ ತೆರೆಯಲು ಗಡವನ್ನು ನೀಡಲಾಗಿದ್ದು, ನಂತರ ಸ್ಟಿಕ್ಕರ್​ ಕಂಡುಬಂದ ವಾಹನಗಳ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲಾಗುವುದೆಂದು ತಿಳಿದು ಬಂದಿದೆ.
ಮೋಟರ್​ ವಾಹನಗಳ ಕಾಯಿದೆ 1988 ಪ್ರಕಾರ ಈ ನೂತನ ನಿಯಮವನ್ನು ಜಾರಿಗೆ ತರಲಾಗಿದ್ದು, ಮೊದಲ ಭಾರಿ ಉಲ್ಲಂಘನೆ ಮಾಡಿದರೆ 500 ರೂಪಾಯಿ ನಂತರ 2,000 ರೂಪಾಯಿಗಳನ್ನು ದಂಡವಾಗಿ ವಿಧಿಸಲಾಗುವುದೆಂದು ತಿಳಿಸಲಾಗಿದೆ.
ಈ ರೀತಿಯ ಜಾತಿ ಸೂಚಕ ಸ್ಟಿಕ್ಕರ್​ಗಳ ಬಳಕೆಯಿಂದ ಮೇಲು-ಕೀಳೆಂಬ ಭಾವ ಜನರಲ್ಲಿ ದೂರವಾಗುವುದಿಲ್ಲ, ಹಾಗೂ ಇದು ಜಾತಿ ಪದ್ದತಿಯನ್ನು ತೊಡೆದು ಹಾಕುವಲ್ಲಿ ತೊಂದರೆ ಉಂಟು ಮಾಡುತ್ತಿದೆ ಎನ್ನುವುದು ಸರ್ಕಾರದ ಸ್ಪಷ್ಟಿಕರಣವಾಗಿದೆ.
ಈ ಸ್ಟಿಕ್ಕರ್​ಗಳ ಗುರುತಿಸುವಿಕೆಗಾಗಿ ಕೃತಕ ಬುದ್ಧಿಮತ್ತೆ (AI) ಚಾಲಿತ ಕ್ಯಾಮರಾಗಳನ್ನು ಬಳಸಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಸುಮಾರು 1,000 ಕ್ಕೂ ಅಧಿಕ ಸ್ಥಳಗಳಲ್ಲಿ ಕ್ಯಾಮರಾಗಳನ್ನು ಅಳವಡಿಸುವ ಮೂಲಕ ಈ ನಿಯಮದ ಕಟ್ಟುನಿಟ್ಟಿನ ಪಾಲನೆಯಾಗುವಂತೆ ನೋಡಿಕೊಳ್ಳಲಾಗುವುದೆಂದು ತಿಳಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net