15 ಹಳ್ಳಿಗಳಲ್ಲಿ ಮನೆಯ ಹೆಣ್ಣುಮಕ್ಕಳು & ಸೊಸೆಯಂದಿರು ಸ್ಮಾರ್ಟ್‌ಫೋನ್ ಬಳಸುವುದನ್ನು ನಿಷೇಧಿಸಿದ ಜಾತಿ ಸಂಘ | Ban smartphones
ಚೌಧರಿ ಸಮುದಾಯದ ಸಭೆಯ ಚಿತ್ರ
Published on:
Copied
Follow Us
ಜೈಪುರ: ಇಂದಿನ ಆಧುನಿಕ ಇಂಟರ್ನೆಟ್ ಕಾಲದಲ್ಲಿ ಮೊಬೈಲ್ ಇಲ್ಲದೇ ಯಾರು ಇರಲಾಗಲ್ಲ. ಅಂತದ್ರಲ್ಲಿ ಜಾತಿ ಸಂಘವೊಂದು 15 ಹಳ್ಳಿಗಳಲ್ಲಿ ಮನೆಯ ಮಹಿಳೆಯರು ಮತ್ತು ಸೊಸೆಯರು ಸ್ಮಾರ್ಟ್ ಫೋನ್(Ban smartphones) ಬಳಸುವುದನ್ನು ನಿಷೇಧಿಸಿ ವಿವಾದಾತ್ಮಕ ಆದೇಶ ಹೊರಡಿಸಿದ್ದು, ಜನವರಿ 26ರಿಂದ ಈ ಆದೇಶ ಜಾರಿಗೆ ಬರಲಿದೆ ಎಂದು ಹೇಳಿದೆ. ಎಲ್ಲಿ ಅಂತಿರಾ ಹಾಗಾದ್ರೆ ಈ ಸ್ಟೋರಿ ಪೂರ್ತಿ ಓದಿ.
ರಾಜಸ್ಥಾನದ ಜಲೋರ್ ಜಿಲ್ಲೆಯ ಘಾಜಿಪುರದಲ್ಲಿ ಸುಂಧಮತ ಪಟ್ಟಿಯ ಚೌಧರಿ ಸಮುದಾಯದ ಸಭೆಯಲ್ಲಿ ಅಧ್ಯಕ್ಷ ಸುಜನರಾಮ್ ಚೌಧರಿ ನೇತೃತ್ವದಲ್ಲಿ ಸಮುದಾಯದ ಹೆಣ್ಣುಮಕ್ಕಳು ಸ್ಮಾರ್ಟ್‌ಫೋನ್ ಬಳಕೆಗೆ ನಿರ್ಬಂಧ ಹೇರುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈ ಆದೇಶದಲ್ಲಿ ಮಹಿಳೆಯರು ಮದುವೆ, ಸಾರ್ವಜನಿಕ ಸಭೆ ಅಥವಾ ನೆರೆಹೊರೆಯವರನ್ನು ಭೇಟಿ ಮಾಡುವಾಗ ಕ್ಯಾಮೆರಾ ಹೊಂದಿರುವ ಮೊಬೈಲ್ ಫೋನ್‌ಗಳನ್ನು ಕೊಂಡೊಯ್ಯುವಂತಿಲ್ಲ. ಧ್ವನಿ ಕರೆಗಳಿಗೆ ಮೂಲ ಕೀಪ್ಯಾಡ್ ಫೋನ್‌ಗಳನ್ನು ಬಳಸಲು ಅನುಮತಿಸಲಾಗಿದೆ.
ಜಾಲೋರ್ ಜಿಲ್ಲೆಯ ಪಟ್ಟಿ ವ್ಯಾಪ್ತಿಯಲ್ಲಿರುವ ಗಾಜಿಪುರ, ಕೋಡಿ, ಸಿದ್ರೋಡಿ, ಅಲ್ರಿ ಪಾವ್ಲಿ, ಕಲ್ರಾ, ಮನೋಜಿಯಾ ವಾಸ್, ರೋಪ್ಸಿ, ಖಾನದೇವಲ್, ಸವಿಧರ್, ರಾಜಿಕಾವಾಸ್, ದತ್ಲವಾಸ್, ರಾಜಪುರ, ಭಿನ್‌ಮಲ್‌ನ ಹತ್ಮಿ ಕಿ ಧನಿ ಮತ್ತು ಖಾನ್‌ಪುರ ಸೇರಿದಂತೆ ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿಯಾಗಲಿದೆ ಎನ್ನಲಾಗಿದೆ.
ಸಭೆಯ ನಡಾವಳಿ ಪ್ರಕಾರ, 15 ಹಳ್ಳಿಗಳಾದ್ಯಂತ ಹೆಣ್ಣುಮಕ್ಕಳು ಮತ್ತು ಸೊಸೆಯಂದಿರು ತಮ್ಮ ಫೋನ್ ಬಳಕೆಯನ್ನು ಕೀಪ್ಯಾಡ್ ಮೊಬೈಲ್‌ಗಳಿಗೆ ಮಾತ್ರ ಸೀಮಿತಗೊಳಿಸಬೇಕು. ಶಿಕ್ಷಣ ಪಡೆಯುತ್ತಿರುವ ಹುಡುಗಿಯರು ಶೈಕ್ಷಣಿಕ ಉದ್ದೇಶಗಳಿಗಾಗಿ ಮನೆಯಲ್ಲಿ ಕಟ್ಟುನಿಟ್ಟಾಗಿ ಸ್ಮಾರ್ಟ್‌ಫೋನ್‌ಗಳನ್ನು ಬಳಸಬೇಕು. ಆದರೆ ಸಾಮಾಜಿಕ ಕಾರ್ಯಕ್ರಮಗಳು, ಮದುವೆಗಳು ಅಥವಾ ನೆರೆಹೊರೆಯ ಭೇಟಿಗಳಿಗೆ ಅವುಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.
ಸ್ಮಾರ್ಟ್ಪೋನ್ ನಿಷೇಧಕ್ಕೆ ಕಾರಣ
ಮಹಿಳೆಯರು ಸ್ಮಾರ್ಟ್‌ಫೋನ್ ಬಳಸುವುದನ್ನು ನಿಷೇಧಕ್ಕೆ ಸಮುದಾಯ ಸಂಘ ಕಾರಣ ಕೊಟ್ಟಿದ್ದು, ಮಹಿಳೆಯರು ಅತಿಯಾಗಿ ಸ್ಮಾರ್ಟ್‌ಫೋನ್ ಬಳಸುವುದರಿಂದ ಅವರೊಂದಿಗೆ ವಾಸಿಸುವ ಮಕ್ಕಳು ದೀರ್ಘಕಾಲದವರೆಗೆ ಸ್ಮಾರ್ಟ್‌ಫೋನ್ ನೋಡಬೇಕಾಗುತ್ತದೆ. ಇದು ಅವರ ದೃಷ್ಟಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಈ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ನಿಷೇಧಿಸಲಾಗಿದೆ ಎಂದು ಹೇಳಿದೆ (ಏಜೆನ್ಸೀಸ್).