ಈ ಪ್ರಕರಣದಡಿ ಎಸಿಬಿ ಅಧಿಕಾರಿಗಳು ಆಕೆಯ ಆಸ್ತಿ ಮತ್ತು ಹಣಕಾಸು ವ್ಯವಹಾರದ ಬಗ್ಗೆ ಪರಿಶೀಲನೆ ನಡೆಸಿದಾಗ, ಆದಾಯಕ್ಕೂ ಮೀರಿದ ಬೃಹತ್ ಆಸ್ತಿ ಹೊಂದಿದ್ದಾರೆ ಎನ್ನುವುದು ತಿಳಿದುಬಂತು. ಸಿದ್ದಿಪೇಟೆ ಜಿಲ್ಲೆಯಲ್ಲಿ 2.17 ಎಕರೆ ಕೃಷಿ ಭೂಮಿ, ಮೂರು ಐಷಾರಾಮಿ ಫ್ಲ್ಯಾಟ್, ಹೈದರಾಬಾದ್ ವ್ಯಾಪ್ತಿ ಎರಡು ಫ್ಲ್ಯಾಟ್, 38 ಲಕ್ಷ ರೂ. ಬ್ಯಾಂಕ್ ಠೇವಣಿಗಳು ಪತ್ತೆಯಾಗಿವೆ. ಚಿನ್ನಾಭರಣ, ವಜ್ರ ಸೇರಿದಂತೆ 5.05 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಎಸಿಬಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ, (ಏಜೆನ್ಸೀಸ್).