ಚುನಾವಣಾ ಪ್ರಚಾರದಲ್ಲಿ ಡಿಎಂಕೆ ಮೈತ್ರಿಕೂಟವನ್ನು ಒಡೆದು ಜೋಡಿಸಿದ ಗ್ಲಾಸ್ ಮತ್ತು ಹರಿದು ಹೊಲಿದ ಬಟ್ಟೆ ಎಂದು ವಿಜಯ್ ಟೀಕಿಸಿದ್ದರು. ಇದನ್ನು ಉಲ್ಲೇಖಿಸಿರುವ ಮುರಸೋಲಿ, ಇಂದು ಅವರು ರಚಿಸಿರುವ ಮೈತ್ರಿಕೂಟವನ್ನು ನೋಡಿ, ಅದು ತೇಪೆ ಹಾಕಿದ ಹರಿದ ಬಟ್ಟೆಯಂತೆ ಕಾಣುತ್ತಿದೆ. ಅಲ್ಲಿ ನಿಂತಿರುವ ಐವರ ಮುಖಗಳು ಒಡೆದ ಗ್ಲಾಸ್‌ನಂತೆ ಕಾಣುತ್ತಿವೆ ಎಂದು ವ್ಯಂಗ್ಯವಾಡಿದೆ. ಈ ಐದು ಮುಖಗಳು ಎಂದರೆ ವಿಜಯ್, ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಬಿ. ಮಾಣಿಕ್ಕಂ ಠಾಗೋರ್, ವಿಸಿಕೆ ಅಧ್ಯಕ್ಷ ತೋಲ್ ತಿರುಮಾವಲವನ್, ಐಯುಎಂಎಲ್ ನಾಯಕ ಕೆ.ಎಂ. ಖಾದರ್ ಮೊಹಿದ್ದೀನ್ ಮತ್ತು ಎಂಡಿಎಂಕೆ ನಾಯಕ ವೈಕೋ.