ನ್ಯಾ.ಯಶವಂತ್ ವರ್ಮಾ ಮನೆಯಲ್ಲಿ ನಗದು ಪತ್ತೆ ಪ್ರಕರಣ; ಸ್ಪೀಕರ್ ಬಿರ್ಲಾಗೆ ತನಿಖಾ ವರದಿ ಸಲ್ಲಿಸಿದ ವಿಚಾರಣಾ ಸಮಿತಿ | Justice Yashwant Verma

ಸ್ಪೀಕರ್ ಓಂ ಬಿರ್ಲಾ ಅವರಿಗೆ ವರದಿ ಸಲ್ಲಿಸಿರುವುದು.
ಸ್ಪೀಕರ್ ಓಂ ಬಿರ್ಲಾ ಅವರಿಗೆ ವರದಿ ಸಲ್ಲಿಸಿರುವುದು.
Published on
ನವದೆಹಲಿ: ಮನೆಯಲ್ಲಿ ಕೋಟ್ಯಂತರ ರೂಪಾಯಿ ನಗದು ನೋಟು ದೊರೆತ ಹಿನ್ನೆಲೆ ನ್ಯಾ. ಯಶವಂತ್ ವರ್ಮಾ ಅವರನ್ನು ಪದಚ್ಯತುಗೊಳಿಸಲು ಅವರ ವಿರುದ್ಧ ಆರೋಪಗಳ ತನಿಖೆ ನಡೆಸಲು ಸಂಸತ್ತು ರಚಿಸಿದ್ದ ತನಿಖಾ ಸಮಿತಿಯೂ ಸೋಮವಾರ(ಮೇ 18) ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ತನ್ನ ವರದಿ ಸಲ್ಲಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಲೋಕಸಭಾ ಸಚಿವಾಲಯ, ನ್ಯಾಯಾಧೀಶರ (ವಿಚಾರಣಾ)ಕಾಯ್ದೆ 1968ರ ನಿಬಂಧನೆಗಳ ಅಡಿಯಲ್ಲಿ ತನಿಖಾ ಸಮಿತಿಯೂ ಸೋಮವಾರ ವರದಿಯನ್ನು ಸಲ್ಲಿಸಿದೆ. ಮುಂದಿನ ಮಳೆಗಾಲದ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ತನಿಖಾ ವರದಿಯನ್ನು ಮಂಡಿಸಲಾಗುವುದು ಎಂದು ಹೇಳಿದೆ.
2025 ಮಾರ್ಚ್ 14ರಂದು ರಾತ್ರಿ ದೆಹಲಿಯ ನ್ಯಾ.ವರ್ಮಾ ಅವರ ನಿವಾಸದಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಬೆಂಕಿ ನಂದಿಸಿದ್ದ ಅಗ್ನಿಶಾಮಕದಳಕ್ಕೆ ಕೋಟ್ಯಂತರ ರೂಪಾಯಿಯ ಸುಟ್ಟ ನೋಟಿನ ಕಂತು ಪತ್ತೆಯಾಗುತ್ತಿದ್ದಂತೆ ಸಂಚಲನ ಉಂಟು ಮಾಡಿತ್ತು. ಹಣವನ್ನು ಭ್ರಷ್ಟಾಚಾರ ಮೂಲಕ ಗಳಿಸಲಾಗಿದೆ ಎಂದು ಆರೋಪಿಸಿ, ವರ್ಮಾ ಅವರನ್ನು ನ್ಯಾಯಮೂರ್ತಿ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಲಾಗಿತ್ತು.
2025 ಜುಲೈನಲ್ಲಿ 200ಕ್ಕೂ ಹೆಚ್ಚು ಲೋಕಸಭೆ ಸಂಸದರು ನ್ಯಾ.ವರ್ಮಾ ಅವರನ್ನು ಪದಚ್ಯುತಗೊಳಿಸಲು ಮಹಾಭೀಯೋಗ ನಡೆಸುವಂತೆ ಕೋರಿ ಸ್ಪೀಕರ್ ಓಂ ಬಿರ್ಮಾ ಅವರಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಹಿನ್ನೆಲೆ ಸ್ಪೀಕರ್ ಬಿರ್ಲಾ ಅವರು ಆಗಸ್ಟ್ 12, 2025 ರಂದು ಮೂವರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net