ಫೈರಿಂಗ್ ವೇಳೆ ವೈದ್ಯೆ ಸಾವು ಪ್ರಕರಣ: ಬಿಜೆಪಿ ಶಾಸಕನಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್​ | BJP MLA

ಸಾಹೇಬ್​ ಗಂಜ್​ ಕ್ಷೇತ್ರದ ಬಿಜೆಪಿ ಶಾಸಕ ರಾಜ್​ಕುಮಾರ್ ಸಿಂಗ್
ಸಾಹೇಬ್​ ಗಂಜ್​ ಕ್ಷೇತ್ರದ ಬಿಜೆಪಿ ಶಾಸಕ ರಾಜ್​ಕುಮಾರ್ ಸಿಂಗ್
Published on
ನವದೆಹಲಿ: ಗುಂಡಿನ ದಾಳಿಯಲ್ಲಿ ಮಹಿಳಾ ವೈದ್ಯೆಯೊಬ್ಬರು ಆಕಸ್ಮಿಕವಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ಸಾಹೇಬ್​ ಗಂಜ್​ ಕ್ಷೇತ್ರದ ಬಿಜೆಪಿ ಶಾಸಕ(BJP MLA) ರಾಜ್​ಕುಮಾರ್ ಸಿಂಗ್ ಅವರನ್ನು ದೋಷಿ ಎಂದು ದೆಹಲಿಯ ರೋಸ್​ ಅವೆನ್ಯೂ ಕೋರ್ಟ್ ತೀರ್ಪು ನೀಡಿದೆ ಎಂದು ಶನಿವಾರ(ಜು. 04) ವರದಿಯಾಗಿದೆ.
2019ರ ಹೊಸ ವರ್ಷಾಚರಣೆ ವೇಳೆ ನಡೆದಿದೆ. ಸಂಭ್ರಮಾಚರಣೆ ವೇಳೆ ಸಿಡಿಸಿದ ಗುಂಡು ಪಕ್ಕದಲ್ಲಿದ್ದ ಡಾ. ಅರ್ಚನಾ ಗುಪ್ತಾ( (45) ಎಂಬುವರಿಗೆ ತಗುಲಿತ್ತು. ತೀವ್ರ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಪ್ರಕರಣದಲ್ಲಿ 4 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದ್ದು, ಜೊತೆಗೆ 25 ಲಕ್ಷ ರೂ. ದಂಡ ವಿಧಿಸಲಾಗಿದೆ.

ಘಟನೆ ಹಿನ್ನೆಲೆ ಏನು?

2018 ಡಿಸೆಂಬರ್ 31ರ ಮಧ್ಯರಾತ್ರಿ ರಾಜು ಕುಮಾರ್ ಸಿಂಗ್ ದೆಹಲಿಯ ಫತೇಪುರ್ ಬೆರಿ ಪ್ರದೇಶದಲ್ಲಿರುವ ತಮ್ಮ ತೋಟದ ಮನೆಯಲ್ಲಿ ಹೊಸ ವರ್ಷವನ್ನು ಆಚರಿಸುತ್ತಿದ್ದರು. ಈ ವೇಳೆ ಅವರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೆ ಗುಂಡು ಗಾಳಿಯಲ್ಲಿ ಹಾರದೇ ಅಲ್ಲಿದ್ದ ಡಾ. ಅರ್ಚನಾ ಗುಪ್ತಾ ಅವರ ತಲೆಗೆ ಗುಂಡು ತಗುಲಿತ್ತು.
ಘಟನೆ ಸಂಬಂಧ ದಾಖಲಾಗಿದ್ದ ಪ್ರಕರಣದ ತನಿಖೆಯ ವಿಚಾರಣೆ ನಡೆಸಿದ್ದ ಕೋರ್ಟ್, ರಾಜು ಕುಮಾರ್ ಸಿಂಗ್ ಅವರನ್ನು BNS-304(2) ಸೇರಿದಂತೆ ಶಸ್ತ್ರಾಸ್ತ್ರ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ತಪ್ಪಿತಸ್ಥರೆಂದು ಘೋಷಣೆ ಮಾಡಿತ್ತು. ಆದಾಗ್ಯೂ, ಶಿಕ್ಷೆಯನ್ನು ಅಂತಿಮಗೊಳಿಸುವಾಗ, ರಾಜು ಕುಮಾರ್ ಸಿಂಗ್ ಅವರ ವಕೀಲರು ಅವನಿಗೆ ಕೊಲ್ಲುವ ಉದ್ದೇಶವಿರಲಿಲ್ಲ ಎಂದು ವಾದಿಸಿದರು.
ಸಾರ್ವಜನಿಕ ಪ್ರತಿನಿಧಿಯಾಗಿ ಉತ್ತಮ ಖ್ಯಾತಿಯನ್ನು ಹೊಂದಿದ್ದು, ಶಿಕ್ಷೆಯನ್ನು ಕಡಿಮೆ ಮಾಡುವಂತೆಯೂ ಕೋರ್ಟ್​ಗೆ ಮನವಿ ಮಾಡಿದ್ದರು. ಆದಾಗ್ಯೂ, ಅಪರಾಧದ ಗಂಭೀರತೆಯನ್ನು ಪರಿಗಣಿಸಿ, ಕೋರ್ಟ್​ ನಾಲ್ಕು ವರ್ಷಗಳ ಜೈಲು ಶಿಕ್ಷೆ ಮತ್ತು 25 ಲಕ್ಷ ರೂ. ದಂಡವನ್ನು ವಿಧಿಸಿದೆ. ಈ ತೀರ್ಪಿನ ಪರಿಣಾಮವು ರಾಜು ಕುಮಾರ್ ಸಿಂಗ್ ಅವರ ಶಾಸಕ ಸ್ಥಾನ ಅನರ್ಹತೆಗೊಳ್ಳುವ ಸಾಧ್ಯತೆಯಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net