ವೃತ್ತಿ ಮೊದಲು, ಮದುವೆ ಆಮೇಲೆ: 29ಕ್ಕೆ ಏರಿದ ಮದುವೆ ಸರಾಸರಿ ವಯಸ್ಸು! | marriage

marriage
marriage
Published on

ಪ್ರಮುಖ ಮುಖ್ಯಾಂಶಗಳು

  • ಭಾರತೀಯ ಸಮಾಜದಲ್ಲಿ ಮದುವೆ(marriage)ಎಂಬ ಸಂಪ್ರದಾಯವು ಹೊಸ ರೂಪ ಪಡೆಯುತ್ತಿದೆ.
  • ಭಾರತದಲ್ಲಿ ಮದುವೆಯಾಗುವ ಸರಾಸರಿ ವಯಸ್ಸು ಈಗ 29ಕ್ಕೆ ಏರಿಕೆಯಾಗಿದೆ.
  • ಮರುಮದುವೆಯಾಗುವವರ ಸಂಖ್ಯೆಯಲ್ಲಿ ಶೇಕಡಾ 43ರಷ್ಟು ಭಾರಿ ಏರಿಕೆ

ನವದೆಹಲಿ:ಭಾರತೀಯ ಸಮಾಜದಲ್ಲಿ ಮದುವೆ(marriage)ಎಂಬ ಸಂಪ್ರದಾಯವು ಹೊಸರೂಪ ಪಡೆಯುತ್ತಿದೆ. ಇತ್ತೀಚಿನ ವರದಿಯೊಂದರ ಪ್ರಕಾರ, ಭಾರತದಲ್ಲಿ ಮದುವೆಯಾಗುವ ಸರಾಸರಿ ವಯಸ್ಸು ಈಗ 29ಕ್ಕೆ ಏರಿಕೆಯಾಗಿದೆ.

ಹೌದು, ಇದಕ್ಕಿಂತಲೂ ಮುಖ್ಯವಾಗಿ, ಮರುಮದುವೆಯಾಗುವವರ ಸಂಖ್ಯೆಯಲ್ಲಿ ಶೇಕಡಾ 43ರಷ್ಟು ಭಾರಿ ಏರಿಕೆ ಕಂಡುಬಂದಿದ್ದು,ಇದು ಬದಲಾಗುತ್ತಿರುವ ಸಾಮಾಜಿಕ ಚಿಂತನೆಗೆ ಸಾಕ್ಷಿಯಾಗಿದೆ. ಮ್ಯಾಟ್ರಿಮೋನಿವೇದಿಕೆಯಾದ 'ಜೀವನ್ಸಾಥಿ' (Jeevansathi) ಬಿಡುಗಡೆ ಮಾಡಿರುವ ವರದಿಯಲ್ಲಿ ಆಘಾತಕಾರಿ ಮತ್ತುಆಸಕ್ತಿದಾಯಕ ಅಂಶಗಳು ಬೆಳಕಿಗೆ ಬಂದಿವೆ.

ವರದಿಯ ಅಂಶಗಳು

  1. ವಯಸ್ಸಿನ ಮಿತಿ ಏರಿಕೆ: ಕಳೆದ ಒಂದು ದಶಕದಲ್ಲಿ ಸಂಗಾತಿಯ ಹುಡುಕಾಟ ಆರಂಭಿಸುವ ಸರಾಸರಿ ವಯಸ್ಸು 27 ರಿಂದ 29 ಕ್ಕೆ ಏರಿದೆ. ಶೇ. 50ರಷ್ಟು ಯುವಜನತೆ ಈಗ 29ನೇ ವಯಸ್ಸಿನಲ್ಲಿ ಮದುವೆಯ ಆಲೋಚನೆ ಮಾಡುತ್ತಿದ್ದಾರೆ.
  2. ಮರುಮದುವೆಗೆ ಒಲವು: 2016ರಲ್ಲಿ ಮರುಮದುವೆಗಾಗಿ ಹುಡುಕಾಟ ನಡೆಸುವವರ ಪ್ರಮಾಣ ಶೇ. 11ರಷ್ಟಿತ್ತು. ಆದರೆ 2025 ಅಂತ್ಯದ ವೇಳೆಗೆ ಪ್ರಮಾಣ ಶೇ. 16ಕ್ಕೆ ತಲುಪಿದ್ದು, ಒಟ್ಟು ಶೇ. 43ರಷ್ಟು ಏರಿಕೆ ದಾಖಲಾಗಿದೆ.
  3. ಜಾತಿ ವ್ಯವಸ್ಥೆಯ ಸಡಿಲಿಕೆ: ವರದಿಯ ಪ್ರಕಾರ, 2016ರಲ್ಲಿ ಶೇ. 91ರಷ್ಟು ಜನರು ಮದುವೆಗೆ 'ಜಾತಿ' ಮುಖ್ಯ ಎಂದು ಭಾವಿಸಿದ್ದರು. ಆದರೆ ಈಗ ಪ್ರಮಾಣ ಶೇ. 54ಕ್ಕೆ ಕುಸಿದಿದೆ. ಮೆಟ್ರೋ ನಗರಗಳಲ್ಲಿ ಇದು ಶೇ. 49ಕ್ಕೆ ಇಳಿಕೆಯಾಗಿದೆ.
  4. ವೃತ್ತಿಜೀವನಕ್ಕೆ ಆದ್ಯತೆ: ಆರ್ಥಿಕ ಸ್ವತಂತ್ರ, ವೃತ್ತಿಜೀವನದ ಬೆಳವಣಿಗೆ ಮತ್ತು ವೈಯಕ್ತಿಕ ಸಿದ್ಧತೆಗೆ ಯುವಜನತೆ ಮೊದಲ ಆದ್ಯತೆ ನೀಡುತ್ತಿದ್ದಾರೆ. "ಸರಿಯಾದ ವ್ಯಕ್ತಿ ಸಿಗುವುದು ವಯಸ್ಸಿಗಿಂತ ಮುಖ್ಯ" ಎಂದು ಶೇ. 90ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.

ಬದಲಾಗುತ್ತಿದೆಸಮಾಜದ ಮನಸ್ಥಿತಿ

ಹಿಂದೆ ವಿಚ್ಛೇದನ ಅಥವಾ ಮರುಮದುವೆಯನ್ನು ಸಮಾಜದಲ್ಲಿಕೆಟ್ಟ ದೃಷ್ಟಿಯಿಂದ ನೋಡಲಾಗುತ್ತಿತ್ತು. ಆದರೆ ಈಗಿನ ವರದಿಗಳಪ್ರಕಾರ, ಮದುವೆಯಲ್ಲಿ ಹೊಂದಾಣಿಕೆ ಇಲ್ಲದಿದ್ದರೆ ಎರಡನೇ ಅವಕಾಶ ಪಡೆಯುವುದು ತಪ್ಪಲ್ಲ ಎಂಬ ಭಾವನೆ ಮೂಡುತ್ತಿದೆ.ಕುತೂಹಲಕಾರಿ ವಿಷಯವೆಂದರೆ, ಮರುಮದುವೆಯಾಗಲಿರುವ ಡಿವೋರ್ಸಿ ಪ್ರೊಫೈಲ್ಗಳಿಗೆ ಎಂದೂ ಮದುವೆಯಾಗದ (Never married) ಶೇ. 15ರಷ್ಟು ಜನರು ಆಸಕ್ತಿ ತೋರುತ್ತಿದ್ದಾರೆ.

ಸ್ವಾವಲಂಬಿನಿರ್ಧಾರಗಳು

ಈಗ ಶೇ. 77ರಷ್ಟು ಜನರು ತಮ್ಮ ಮ್ಯಾಟ್ರಿಮೋನಿಪ್ರೊಫೈಲ್ಗಳನ್ನು ತಾವೇ ನಿರ್ವಹಿಸುತ್ತಿದ್ದಾರೆ. ಅಂದರೆ, ಮದುವೆಯವಿಷಯದಲ್ಲಿ ಪೋಷಕರ ಹಸ್ತಕ್ಷೇಪಕ್ಕಿಂತ ಯುವಜನತೆಯ ಸ್ವಂತ ನಿರ್ಧಾರಗಳು ಹೆಚ್ಚಾಗುತ್ತಿವೆ. ಆದರೂ, ಶೇ. 69ರಷ್ಟು ಜನರು ಪೋಷಕರ ಮಾರ್ಗದರ್ಶನಮದುವೆಯ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ ಎಂದು ನಂಬಿದ್ದಾರೆ.

ಆರ್ಥಿಕಸಮಾನತೆ

ಹಣಕಾಸಿನವಿಚಾರದಲ್ಲೂ ಬದಲಾವಣೆ ಗಾಳಿ ಬೀಸುತ್ತಿದೆ. ಕೇವಲಶೇ. 8ರಷ್ಟು ಜನರು ಮಾತ್ರ ಕುಟುಂಬಕ್ಕೆಗಂಡನೇ ಸಂಪಾದನೆ ಮಾಡಬೇಕು ಎಂದು ಬಯಸುತ್ತಾರೆ. ಶೇ.87ರಷ್ಟು ಪುರುಷರು ತಮಗಿಂತ ಹೆಚ್ಚು ಸಂಪಾದಿಸುವ ಮಹಿಳೆಯನ್ನು ಮದುವೆಯಾಗಲು ಸಿದ್ಧರಿದ್ದಾರೆ,(ಏಜೆನ್ಸೀಸ್‌).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net