ಚಾಲಕನ ನಿಯಂತ್ರಣ ತಪ್ಪಿದ ಕಾರು: ಬೆಟ್ಟದ ಮೇಲಿಂದ ಹಾರಿದ ವಾಹನ, ಭೀಕರ ಅಪಘಾತದ ದೃಶ್ಯ ಕ್ಯಾಮೆರಾದಲ್ಲಿ ಸೆರೆ...Car Accident

Car Accident ಸಾಂದರ್ಭಿಕ ಚಿತ್ರ
Car Accident ಸಾಂದರ್ಭಿಕ ಚಿತ್ರ
Published on
ಹಿಮಾಚಲ ಪ್ರದೇಶ: ವೇಗವಾಗಿ ಚಲಿಸುತ್ತಿದ್ದ ಕಾರು (Car Accident) ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಉರುಳಿ ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿ ಮಂಗಳವಾರ (ಏ.29) ನಡೆದಿದೆ.
ಭಾರವೈನ್-ಹೋಶಿಯಾರ್‌ಪುರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದ್ದು, ತೀಕ್ಷ್ಣವಾದ ತಿರುವುಗಳು ಮತ್ತು ಕಡಿದಾದ ಇಳಿಜಾರು ಇರುವುದರಿಂದಲೇ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ವಾಹನಕ್ಕೆ ಬೆಂಕಿ ಹತ್ತಿಕೊಳ್ಳುವ ಮುನ್ನ ಟೈರ್ ಸ್ಫೋಟಗೊಂಡಿದೆ. ಆದಾಗ್ಯೂ, ಮಾರುತಿ ಸ್ವಿಫ್ಟ್ ಚಾಲನೆಯಲ್ಲಿರುವಾಗ ಉಂಟಾದ ಟೈರ್ ವೈಫಲ್ಯವೇ ಈ ಅಗ್ನಿ ಅವಘಡಕ್ಕೆ ಪ್ರಮುಖ ಕಾರಣ ಎಂದು ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ತಲುಪುವ ಹೊತ್ತಿಗಾಗಲೇ ಕಾರು ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಒಂದು ಮೃತದೇಹ ವಾಹನದ ಹೊರಗೆ ಪತ್ತೆಯಾಗಿದ್ದರೆ, ಇನ್ನೊಂದು ಮೃತದೇಹ ಕಾರಿನಲ್ಲೇ ಸುಟ್ಟು ಭಸ್ಮವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಿಸಿಟಿವಿಯಲ್ಲಿ ಸೆರೆಯಾಗಿದ್ದೇನು?

ಘಟನೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಾರು ನಿಯಂತ್ರಣ ತಪ್ಪುವ ಮೊದಲು ಕಪ್ಪು ಬಣ್ಣದ ಕಾರು ನಿರ್ಮಾಣ ಹಂತದ ರಸ್ತೆಯಲ್ಲಿ ವೇಗವಾಗಿ ಬಂದ ಹಿನ್ನಲೆ ಕಂದಕಕ್ಕೆ ಉರುಳಿರುವುದನ್ನು ತೋರಿಸುತ್ತದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ. PB-10-K-7531 ನೋಂದಣಿ ಸಂಖ್ಯೆಯನ್ನು ಹೊಂದಿರುವ ಈ ಕಾರು ಪಂಜಾಬ್‌ನ ಲುಧಿಯಾನದಲ್ಲಿ ನೋಂದಣಿಯಾಗಿದೆ.
ಆದಾಗ್ಯೂ, ವಾಹನದಿಂದ ವಶಪಡಿಸಿಕೊಂಡ ಆಧಾರ್ ಕಾರ್ಡ್ ಲುಧಿಯಾನದ ತಾಜ್‌ಪುರ ರಸ್ತೆಯಲ್ಲಿರುವ ವಿಳಾಸವನ್ನು ತೋರಿಸಿದ್ದು, ಮೃತರ ಗುರುತುಗಳನ್ನು ಇನ್ನೂ ಅಧಿಕೃತವಾಗಿ ದೃಢೀಕರಿಸಲಾಗಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net