_1765852521370.webp?w=480&auto=format%2Ccompress&fit=max)
_1765852521370.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ನವದೆಹಲಿ: ಚಿನ್ನದ ಬೆಲೆ ಏರಿಕೆಯ ನಾಗಾಲೋಟ ಮುಂದುವರಿದಿದೆ. ಸೋಮವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಂಗಾರದ ಬೆಲೆ 4 ಸಾವಿರ ರೂಪಾಯಿ ಏರಿಕೆ ಆಗುವ ಮೂಲಕ ಪ್ರತಿ 10 ಗ್ರಾಂ. ಚಿನ್ನದ ದರ ಗರಿಷ್ಠ 1,37,600 ರೂ.ಗೆ ತಲುಪಿದೆ. ಸೋಮವಾರದ ಅಂತ್ಯಕ್ಕೆ ದೆಹಲಿ ಮಾರುಕಟ್ಟೆಯಲ್ಲಿ 99.9 ಶುದ್ಧತೆಯ ಚಿನ್ನದ ದರ 1,33,600 ರೂ. ತಲುಪಿತ್ತು. ಅ.17ರಂದು ಪ್ರತಿ ಗಾಂ ಚಿನ್ನದ ಬೆಲೆ 3.200 ರೂ. ಹೆಚ್ಚಳವಾಗಿ 10 ಗ್ರಾಂಗೆ 1,34,800 ರೂ. ಮುಟ್ಟಿತ್ತು. 1.50 ಲಕ್ಷ ರೂ. ಸನಿಹ: ಕ್ರಿಸ್ವುಸ್ ಹಾಗೂ ಹೊಸ ವರ್ಷದ ಹಿನ್ನೆಲೆಯಲ್ಲಿ ಭಾರತದಲ್ಲಿ ಚಿನ್ನಕ್ಕೆ ಭಾರಿ ಬೇಡಿಕೆ ಇದೆ. ಈಗಾಗಲೇ ದೇಶದ ಹಲವೆಡೆ ಖರೀದಿ ಭರಾಟೆ ತೀವ್ರಗೊಂಡಿದೆ.
ಚಿನ್ನ ಮತ್ತು ಬೆಳ್ಳಿ ದರ ತೀವ್ರವಾಗಿ ಏರಿಕೆಯಾಗುತ್ತಿರುವುದಕ್ಕೆ ಜಾಗತಿಕ ರಾಜಕೀಯ ಉದ್ವಿಗ್ನತೆಯ ಹೆಚ್ಚಳ ಮತ್ತು ಜಾಗತಿಕ ಬೆಳವಣಿಗೆ ಕುರಿತ ಅನಿಶ್ಚಿತತೆಯೇ ಕಾರಣವೆಂದು ಹಣಕಾಸು ಸಚಿವಾಲಯ ಪ್ರತಿಪಾದಿಸಿದೆ. ಹೀಗಾಗಿ ವರ್ಷಾಂತ್ಯದ ಹೊತ್ತಿಗೆ ಚಿನ್ನದ ದರ 1.50 ಲಕ್ಷ ರೂ. ಸನಿಹ ಬಂದರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ. ಶೇ.74.3 ಹೆಚ್ಚಳ: ಕಳೆದೊಂದು ವರ್ಷ ದಲ್ಲಿ ಚಿನ್ನದ ಬೆಲೆ ಶೇ.74.3ರಷ್ಟು ಏರಿಕೆ ಆಗಿದೆ
ಬೆಳ್ಳಿಯೂ ಭಾರ: 2024 ಡಿ.31ರಂದು ಬೆಳ್ಳಿ ಬೆಲೆ ಕೆಜಿಗೆ 89,700 ರೂ. ಗಳಿತ್ತು. ಇದೀಗ ಬೆಳ್ಳಿ ದರ 1,09,800 ರೂ. ಮುಟ್ಟಿದೆ. ಬಂಗಾರ ಮತ್ತು ಬೆಳ್ಳಿಯಂಥ ಅಮೂಲ್ಯ ಲೋಹಗಳ ದೇಶೀಯ ಧಾರಣೆಯನ್ನು ಅವುಗಳ ಪ್ರಸ್ತುತ ಅಂತಾ ರಾಷ್ಟಿŠೕಯ ದರಗಳು, ಡಾಲರ್ ವಿರುದ್ಧ ರೂಪಾಯಿ ವಿನಿ ಮಯ ಮೌಲ್ಯ ಮತ್ತು ಅನ್ವಯವಾಗುವಂಥ ತೆರಿಗೆ, ಸುಂಕ ನಿರ್ಣಯಿಸುತ್ತವೆ. ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದಾರೆ. ಅಮೂಲ್ಯ ಲೋಹಗಳ ಬೆಲೆಗಳನ್ನು ಮಾರುಕಟ್ಟೆ ಅಂಶಗಳು ನಿರ್ಣಯಿಸುತ್ತವೆ. ಅದರಲ್ಲಿ ಸರ್ಕಾರದ ಯಾವುದೇ ಪಾತ್ರ ಇರುವುದಿಲ್ಲ ಎಂದು ಚೌಧರಿ ಸ್ಪಷ್ಟಪಡಿಸಿದ್ದಾರೆ.