ಸ್ವಿಮ್ಮಿಂಗ್​ಪೂಲ್​ನಲ್ಲಿ ಯುವಕನ ಚಡ್ಡಿಯೊಳಗೆ ನುಗ್ಗಿದ ಹಾವು! ಮುಂದೆ ನಡೆದಿದ್ದೇ ರೋಚಕ! ವಿಡಿಯೋ ವೈರಲ್​... Swimming

ಸ್ವಿಮ್ಮಿಂಗ್​ಪೂಲ್​ನಲ್ಲಿ ಯುವಕನ ಚಡ್ಡಿಯೊಳಗೆ ನುಗ್ಗಿದ ಹಾವು! ಮುಂದೆ ನಡೆದಿದ್ದೇ ರೋಚಕ! ವಿಡಿಯೋ ವೈರಲ್​... Swimming
ಸ್ವಿಮ್ಮಿಂಗ್​ಪೂಲ್​ನಲ್ಲಿ ಯುವಕನ ಚಡ್ಡಿಯೊಳಗೆ ನುಗ್ಗಿದ ಹಾವು! ಮುಂದೆ ನಡೆದಿದ್ದೇ ರೋಚಕ! ವಿಡಿಯೋ ವೈರಲ್​... Swimming
Published on

ಪ್ರಮುಖ ಮುಖ್ಯಾಂಶಗಳು

  • ಈಜುಕೊಳದಲ್ಲಿ ಯುವಕನ ಚಡ್ಡಿಯೊಳಗೆ ನುಗ್ಗಿದ ಹಾವು
  • ಹಾವನ್ನು ಚಾಣಾಕ್ಷತನದಿಂದ ಹೊರತೆಗೆದು ಗೆಳೆಯನ ಪ್ರಾಣ ಉಳಿಸಿದ ಸ್ನೇಹಿತರು
  • ಈಜುಕೊಳ ಸ್ವಚ್ಛವಾಗಿಲ್ಲದಿದ್ದರೆ ಏನಾಗುತ್ತೆ? ಯುವಕನ ಪ್ಯಾಂಟ್‌ ಒಳಗೆ ಹಾವು ನುಗ್ಗಿದ ಘಟನೆಯೇ ಸಾಕ್ಷಿ!
  • ಸ್ವಿಮ್ಮಿಂಗ್ ಪೂಲ್‌ಗೆ ಇಳಿಯುವ ಮುನ್ನ ಜಾಗ್ರತೆ! ವೈರಲ್ ವಿಡಿಯೋ ನೀಡುತ್ತಿದೆ ದೊಡ್ಡ ಎಚ್ಚರಿಕೆ.
Swimming : ಬೇಸಿಗೆಯ ಬೇಗೆಯಿಂದ ತಪ್ಪಿಸಿಕೊಳ್ಳಲು ಸ್ನೇಹಿತರೊಂದಿಗೆ ಈಜುಕೊಳಕ್ಕೆ ಹಾರಿ ಸ್ಮಿಮ್ಮಿಂಗ್​ ಮಾಡುತ್ತಿದ್ದ ಯುವಕನೊಬ್ಬನ ಚಡ್ಡಿಯೊಳಗೆ ಜೀವಂತ ಹಾವು ಪ್ರತ್ಯಕ್ಷವಾದ ಆತಂಕಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಎಲ್ಲರಂತೆ ಜಲಕ್ರೀಡೆಯಲ್ಲಿ ಮುಳುಗಿದ್ದ ಯುವಕನ ಚಡ್ಡಿಯೊಳಗೆ ಎಲ್ಲಿಂದಲೋ ಬಂದ ಹಾವೊಂದು ದಿಢೀರನೆ ನುಗ್ಗಿದ್ದು, ಒಂದು ಕ್ಷಣ ಅಲ್ಲಿ ನೆರೆದಿದ್ದವರ ಉಸಿರೇ ನಿಂತಂತಾಗಿತ್ತು. ಪ್ರಾಣಭಯದ ನಡುವೆಯೂ ಯುವಕ ಧೈರ್ಯಗೆಡದೆ ನಿಂತರೆ, ಉಳಿದವರು ಆ ಹಾವನ್ನು ಜಾಗರೂಕತೆಯಿಂದ ಹೊರತೆಗೆಯುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಹುಬ್ಬೇರಿಸಿದೆ.
ತನ್ನ ಪ್ಯಾಂಟ್‌ನೊಳಗೆ ಏನೋ ಚಲಿಸುತ್ತಿರುವುದನ್ನು ಗಮನಿಸಿದ ಆ ಯುವಕ, ಅದು ಹಾವು ಎಂದು ತಿಳಿಯುತ್ತಿದ್ದಂತೆ ಪ್ರಾಣಭಯದಿಂದ ನಡುಗಿಹೋದನು. ಏನು ಮಾಡಬೇಕೆಂದು ತೋಚದೆ ಕಿರುಚಾಡುತ್ತಾ ತನ್ನ ಸ್ನೇಹಿತರನ್ನು ಸಹಾಯಕ್ಕೆ ಕರೆದನು. ತುಂಬಾ ಗಾಬರಿಯಾದರೆ ಹಾವು ಕಚ್ಚಬಹುದು ಅನ್ನೋದನ್ನು ಅರಿತ ಸ್ನೇಹಿತರು, ಯಾವುದೇ ಭಯವಿಲ್ಲದೆ ಅತ್ಯಂತ ಚುರುಕಾಗಿ ಹಾವು ಇದ್ದ ಜಾಗವನ್ನು ಚಡ್ಡಿಯ ಹೊರಗಿನಿಂದಲೇ ಗಟ್ಟಿಯಾಗಿ ಹಿಡಿದುಕೊಂಡು, ಹಾವು ಇನ್ನಷ್ಟು ಮೇಲಕ್ಕೆ ಚಲಿಸದಂತೆ ತಡೆದರು.
ನಂತರ ಆತನಿಗೆ ಒಂದು ಟವಲ್ ನೀಡಿ ಮೈ ಮುಚ್ಚಿಕೊಳ್ಳುವಂತೆ ಮಾಡಿದ ಸ್ನೇಹಿತರು, ಅತ್ಯಂತ ಜಾಗರೂಕತೆಯಿಂದ ಆತನಿಂದ ಚಡ್ಡಿಯನ್ನು ಕಳಚಿ, ಸ್ವಿಮ್ಮಿಂಗ್​ಪೂಲ್​ನಿಂದ ಹೊರಕ್ಕೆ ಎಸೆಯಲಾಯಿತು. ಬಳಿಕ ಆ ಹಾವನ್ನು ಒಂದು ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಂದರು. ಅದೃಷ್ಟವಶಾತ್, ಆ ಹಾವು ನೀರಿನಲ್ಲಿ ಓಡಾಡುವ ಸಾಮಾನ್ಯ ಹಾವಾಗಿದ್ದರಿಂದ ಯುವಕನಿಗೆ ಹಾವಿನಿಂದ ಯಾವುದೇ ತೊಂದರೆಯಾಗಲಿಲ್ಲ. ಸ್ನೇಹಿತರ ಸಮಯಪ್ರಜ್ಞೆಯಿಂದ ಯುವಕ ಯಾವುದೇ ಅಪಾಯವಿಲ್ಲದೆ ಪಾರಾಗುತ್ತಿದ್ದಂತೆ, ಅಲ್ಲಿ ನೆರೆದಿದ್ದವರೆಲ್ಲರೂ ನಿಟ್ಟುಸಿರು ಬಿಟ್ಟರು.
ಸ್ನೇಹಿತರ ಈ ರೋಚಕ ಸಾಹಸದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದೆ. ಇಂತಹ ಆಪತ್ಕಾಲದಲ್ಲಿ ಸ್ನೇಹಿತರು ತೋರಿದ ಸಮಯಪ್ರಜ್ಞೆ ಮತ್ತು ಧೈರ್ಯದ ನಿರ್ಧಾರದಿಂದಲೇ ಆ ಯುವಕ ದೊಡ್ಡ ಗಂಡಾಂತರದಿಂದ ಪಾರಾಗಿದ್ದಾನೆ ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ. ಸಂಕಷ್ಟದ ಸಮಯದಲ್ಲಿ ಜೊತೆಗಿರುವ ನಿಜವಾದ ಸ್ನೇಹಿತರು ಹೇಗಿರಬೇಕು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ.
ಅದೇ ಸಮಯದಲ್ಲಿ, ಈ ಘಟನೆಯು ಈಜುಕೊಳಗಳ ನಿರ್ವಹಣೆಯ ಬಗ್ಗೆ ದೊಡ್ಡ ಎಚ್ಚರಿಕೆಯನ್ನು ನೀಡಿದೆ. ಈಜುಕೊಳಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಇಂತಹ ಜಲಚರಗಳು ಒಳಗೆ ಬರುವ ಅಪಾಯವಿರುತ್ತದೆ ಎಂಬುದನ್ನು ಇದು ನೆನಪಿಸಿದೆ. ಆದ್ದರಿಂದ, ಸಾರ್ವಜನಿಕರು ನೀರಿಗೆ ಇಳಿಯುವ ಮುನ್ನ ಸುತ್ತಮುತ್ತಲಿನ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸಿ, ಜಾಗರೂಕರಾಗಿರಬೇಕು ಎಂಬ ಸಂದೇಶವನ್ನು ಈ ವಿಡಿಯೋ ಸಾರುತ್ತಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net