ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ನರೇಂದ್ರ ಮೋದಿಯವರು ಭಾಷಣ ಮಾಡುವಾಗ ಅವರ ಕಣ್ಣುಗಳನ್ನು ನೇರವಾಗಿ ನೋಡಿ, ಅವರ ಕಣ್ಣಲ್ಲಿ ಸೋಲಿನ ಭಯ ಎದ್ದುಕಾಣುತ್ತಿದೆ. ನೀವು ಸಿಂಹದಂತೆ ಹೋರಾಡಿ, ಮೋದಿಗೆ ಹೆದರುವ ಅಗತ್ಯವಿಲ್ಲ ಎಂದು ಹುರಿದುಂಬಿಸಿದ್ದಾರೆ. ಬಜೆಟ್ ಅಧಿವೇಶನದಲ್ಲಿ ಉತ್ತರಿಸಲಾಗದೆ ಪ್ರಧಾನಿ ಸಂಸತ್ತಿನಿಂದ ಓಡಿಹೋಗಿದ್ದಾರೆ ಎಂದು ವಿಪಕ್ಷ ನಾಯಕ ಲೇವಡಿ ಮಾಡಿದ್ದಾರೆ,(ಏಜೆನ್ಸೀಸ್).