ಕೆನಡಾದ ಸರ್ರೆಯಲ್ಲಿರುವ ಕಪಿಲ್ ಶರ್ಮಾ ಅವರ ಕ್ಯಾಪ್ಸ್ ಕೆಫೆಯಲ್ಲಿ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಕೆನಡಾದ ಅಧಿಕಾರಿಗಳ ಮೋಸ್ಟ್ ವಾಂಟೆಡ್ ಗ್ಯಾಂಗ್ಸ್ಟರ್ ಬಂಧು ಮಾನ್ ಸಿಂಗ್ ಸೆಖೋನ್ನನ್ನು ದೆಹಲಿ ಅಪರಾಧ ವಿಭಾಗ ಬಂಧಿಸಿ, ವಿಚಾರಣೆ ನಡೆಸಿತು. ತನಿಖೆಯ ಸಮಯದಲ್ಲಿ, ತಾವು ಬೇಡಿಕೆಯಿಟ್ಟ ಹಣವನ್ನು ಕಪಿಲ್ ಕೊಡದಿದ್ದರೆ ಆತನನ್ನು ಕೊಲ್ಲುವುದು ಗೋಲ್ಡಿ ಡಿಲ್ಲೋನ್ ಗ್ಯಾಂಗ್ನ ಸಂಚಾಗಿತ್ತು ಎಂದು ಸೆಖೋನ್ ಹೇಳಿಕೊಂಡಿದ್ದಾಗಿ ವರದಿಯಾಗಿದೆ,(ಏಜೆನ್ಸೀಸ್).