ಆರೋಪಿ ನಡೆಸಿದ್ದ ದಾಳಿಯಿಂದಾಗಿ ರಾಜ್‌ಕುಮಾರ್ ಮಿಶ್ರಾರ ಕರುಳಿನ ಮೇಲೆ ಗಂಭೀರಗಾಯವಾಗಿದೆ. ಸುಬ್ರತೋ ಸೇನ್ ಅವರ ಬೆನ್ನಿನ ಮೇಲೆ ಸಣ್ಣಪುಟ್ಟ ಗಾಯವಾಗಿ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ. ಈ ವೇಳೆ ಸ್ಥಳದಲ್ಲೇ ಇದ್ದ ಸೆಕ್ಯೂರಿಟಿ, ಕ್ಯಾಬಿನ್‌ನಲ್ಲಿ ಅವಿತುಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ. ಸದ್ಯ ಗಾಯಾಳುಗಳು ವೊಕಾರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.