ಹಸುವಿನ ವಧೆ ಈದ್​ನ ಭಾಗವಲ್ಲ: ಗೋಹತ್ಯೆ ನಿರ್ಬಂಧದ ವಿರುದ್ಧದ ಅರ್ಜಿ ತಿರಸ್ಕರಿಸಿದ ಕಲ್ಕತ್ತಾ ಹೈಕೋರ್ಟ್! Calcutta High Court on Cattle Slaughter Ban

ಹಸುವಿನ ವಧೆ ಈದ್​ನ ಭಾಗವಲ್ಲ: ಕಲ್ಕತ್ತಾ ಹೈಕೋರ್ಟ್​
ಹಸುವಿನ ವಧೆ ಈದ್​ನ ಭಾಗವಲ್ಲ: ಕಲ್ಕತ್ತಾ ಹೈಕೋರ್ಟ್​
Published on
ಕಲ್ಕತ್ತಾ: ಈ ತಿಂಗಳ ಕೊನೆಯಲ್ಲಿ ಈದ್ ಆಚರಣೆಗೆ ಮುನ್ನ ಪಶ್ಚಿಮ ಬಂಗಾಳ ಸರ್ಕಾರವು ಜಾನುವಾರು (ಗೋ ಹತ್ಯೆ) ಹತ್ಯೆ (Calcutta High Court on Cattle Slaughter Ban) ಯ ಮೇಲಿನ ನಿರ್ಬಂಧಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಕಲ್ಕತ್ತಾ ಹೈಕೋರ್ಟ್ ವಜಾ ಮಾಡಿದೆ.
ಪಶ್ಚಿಮ ಬಂಗಾಳ ಪ್ರಾಣಿ ವಧೆ ನಿಯಂತ್ರಣ ಕಾಯ್ದೆ, 1950 ರ ಅಡಿಯಲ್ಲಿ ಧಾರ್ಮಿಕ ಆಧಾರದ ಮೇಲೆ ವಿನಾಯಿತಿ ನೀಡಬೇಕು ಎಂದು, ಈದ್ ಸಮಯದಲ್ಲಿ ಎಮ್ಮೆಗಳು ಮತ್ತು ಎತ್ತುಗಳಂತಹ ಪ್ರಾಣಿಗಳ ವಧೆಗೆ ಅನುಮತಿ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿತ್ತು. ಆದರೆ ಅಸ್ತಿತ್ವದಲ್ಲಿರುವ ಕಾನೂನಿನ ಅಡಿಯಲ್ಲಿ ಯಾವುದೇ ತಕ್ಷಣದ ಪರಿಹಾರ ಅಥವಾ ವಿಶೇಷ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದ ನ್ಯಾಯಾಲಯ ತಿಳಿಸಿದೆ.
ಇದೇ ಸಮಯದಲ್ಲಿ, ಮೇ 27 ಅಥವಾ 28 ರಂದು ಆಚರಿಸಲಾಗುವ ಈದ್‌ಗೆ ಯಾವುದೇ ತಾತ್ಕಾಲಿಕ ವಿನಾಯಿತಿ ಅಗತ್ಯವಿದೆಯೇ ಎಂದು ಪರಿಶೀಲಿಸಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದು, 24 ಗಂಟೆಗಳ ಒಳಗೆ ಈ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
ನಮ್ಮ ಸಂಪ್ರದಾಯ ಮುಂದುವರಿಯುತ್ತದೆ!
ಗುರುವಾರ (ಮೇ.21) ಸುದ್ದಿಗಾರರೊಂದಿಗೆ ಮಾತನಾಡಿದ ಹುಮಾಯೂನ್​ ಕಬೀರ್​, ಮುಸಲ್ಮಾನರು ಗೋಮಾಂಸ ಸೇವನೆಯನ್ನು ನಿಲ್ಲಿಸಲು ಸರ್ಕಾರ ಕ್ರಮ, ಕಾನೂನನ್ನು ರಚಿಸಬಹುದು, ಆದರೆ ಧಾರ್ಮಿಕ ಬಲಿಯನ್ನು ತಡೆಯಲು ಬಂದರೆ ನಾವು ಅದನ್ನು ಪಾಲನೆ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಇಸ್ಲಾಂನಲ್ಲಿ ಪ್ರಾಣಿ ಬಲಿ ಎನ್ನುವುದು ನಿನ್ನೆ-ಮೊನ್ನೆಯಿಂದ ಆರಂಭವಾಗಿರುವುದಲ್ಲ, ಸುಮಾರು 1400 ವರ್ಷಗಳಿಂದ ಇದು ನಡೆದುಕೊಂಡು ಬಂದಿದೆ. ಇದನ್ನು ಪ್ರಪಂಚದಲ್ಲಿರುವ ಎಲ್ಲಾ ಮುಸ್ಲಿಮರು ಆಚರಿಸುತ್ತಾರೆ, ಇದು ನಮ್ಮ ಸಂಪ್ರದಾಯದ ಭಾಗವಾಗಿದೆ ಎಂದು ಹುಮಾಯೂನ್​ ಹೇಳಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net