ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಕ್ಯಾಬಿನ್ ಸಿಬ್ಬಂದಿ ಮೇಲೆ ಅತ್ಯಾಚಾರ ಆರೋಪ: ಹೈದರಾಬಾದ್‌ನಲ್ಲಿ ಕಾಮುಕ ಚಾಲಕನ ಬಂಧನ!..Hyderabad Airport Driver

Hyderabad Airport Rape Case
Hyderabad Airport Rape Case
Published on

ಪ್ರಮುಖ ಮುಖ್ಯಾಂಶಗಳು

  • ವಿಮಾನ ನಿಲ್ದಾಣಕ್ಕೆ ಕರ್ತವ್ಯಕ್ಕಾಗಿ ತೆರಳುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ ಆರೋಪ
  • 23 ವರ್ಷದ ಕ್ಯಾಬ್ ಚಾಲಕ ರಂಗಾರೆಡ್ಡಿ ಜಿಲ್ಲೆಯ ನಿವಾಸಿ ಎರ್ರಾಪೋಗು ಪ್ರಶಾಂತ್ ಕುಮಾರ್ ಅರೆಸ್ಟ್
  • ಹಿಂದೆಯಿಂದ ಬಂದು ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಆರೋಪ
Cabin crew raped in office cab on way to Hyderabad airport: ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರ್ತವ್ಯಕ್ಕಾಗಿ ತೆರಳುತ್ತಿದ್ದ ಮಹಿಳೆ ಮೇಲೆ 23 ವರ್ಷದ ಕ್ಯಾಬ್ ಚಾಲಕ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
ಆರೋಪಿಯನ್ನು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ನಿವಾಸಿ ಎರ್ರಾಪೋಗು ಪ್ರಶಾಂತ್ ಕುಮಾರ್ ಎಂದು ಗುರುತಿಸಲಾಗಿದೆ. ಪರಾರಿಯಾದ ಈತನನ್ನು ಪತ್ತೆಹಚ್ಚಿ ಜುಲೈ 21 ರಂದು ಬಂಧಿಸಲಾಯಿತು.

ಪೊಲೀಸರು ಹೇಳಿದ್ದಿಷ್ಟು

ಜುಲೈ 20ರಂದು ಮದ್ಯಾಹ್ನ 2.40ಕ್ಕೆ 37 ವರ್ಷದ ಕ್ಯಾಬಿನ್ ಸಿಬ್ಬಂದಿ ಮಹಿಳೆಯು ಶಂಶಾಬಾದ್‌ನಿಂದ ವಿಮಾನ ನಿಲ್ದಾಣಕ್ಕೆ ತೆರಳಲು ವಿಮಾನಯಾನ ಸಂಸ್ಥೆ ಕ್ಯಾಬ್​ ಬುಕ್​ ಮಾಡಿದ್ದರು. ಅದರಂತೆ ಕ್ಯಾಬ್​​ ಹತ್ತಿಕೊಂಡ ಬೆನ್ನಲ್ಲೇ ಶೌಚಾಲಯಕ್ಕೆ ತೆರಳಬೇಕು ಎಂದು ಚಾಲಕ ನಿಗದಿತ ಮಾರ್ಗದಲ್ಲಿ ಹೋಗುವ ಬದಲು, ವಿಮಾನ ನಿಲ್ದಾಣದ ಸಮೀಪವಿರುವ ನಿರ್ಮಾಣ ಹಂತದ ಪ್ರದೇಶದ ಹತ್ತಿರ ಕರೆದೊಯ್ದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಕಾರಿನಿಂದ ಶೌಚಾಲಯಕ್ಕೆ ಹೋಗಬೇಕು ಎಂದು ಇಳಿದು ಹೋಗಿಎರಡರಿಂದ ಮೂರು ನಿಮಿಷಗಳಲ್ಲಿ ಹಿಂತಿರುಗಿ, ಬಂದಿದ್ದಾನೆ. ಆನಂತರ ಹಿಂದಿನ ಬಾಗಿಲಿನಿಂದ ಪ್ರವೇಶಿಸಿ ಕಾರಿನೊಳಗೆ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಶಂಷಾಬಾದ್ ಎಸಿಪಿ ವಿ ಶ್ರೀಕಾಂತ್ ಗೌಡ್ ತಿಳಿಸಿದ್ದಾರೆ.
ಇದನ್ನೂ ಓದಿ:

ಮಹಿಳೆ ಕಿರುಚಿಕೊಳ್ಳುತ್ತಲೇ ಚಾಲಕ ಪರಾರಿ

ಕಾರುಚಾಲಕನಿಂದ ತಪ್ಪಿಸಿಕೊಂಡ, ಆತನನ್ನು ದೂಡಿ ಹೋದ ಮಹಿಳೆಯು ಜೋರಾಗಿ ಸಹಾಯಕ್ಕಾಗಿ ಕಿರುಚಿಕೊಂಡಿದ್ದಾರೆ. ಇದನ್ನು ನೋಡಿದ ಕ್ಯಾಬ್ ಚಾಲಕ ಭಯದಿಂದಾಗಿ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ. ನಂತರ ಮಹಿಳೆ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಹೊರಠಾಣೆಯನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ ಎಂದು ಎಸಿಪಿ ಹೇಳಿದರು.
ಸಂತ್ರಸ್ತ ಮಹಿಳೆ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್)ನ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಅತ್ಯಾಚಾರ ಮತ್ತು ಹಲ್ಲೆ ಆರೋಪಗಳನ್ನು ಒಳಗೊಂಡಂತೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ ಎನ್ನಲಾಗಿದೆ. ಚಾಲಕ ಪ್ರಶಾಂತ್ ಕುಮಾರ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ವೈದ್ಯಕೀಯ ಪರೀಕ್ಷೆಗೆ ಒಳಗಾದ ನಂತರ, ಆತನನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು, ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net