31 ವರ್ಷ ಹಳೆಯ ಕಾರೊಂದನ್ನು ಹುಡುಕಿಸಿದ್ದ ಸಿ.ಜೆ ರಾಯ್! ಕಾರಣವೇನು ಗೊತ್ತೆ? C J Roy
ಕಾನ್ಫಿಡೆಂಟ್ ಗ್ರೂಪ್ಸ್ನ ಚೇರ್ಮನ್ ಸಿ.ಜೆ ರಾಯ್
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕಾನ್ಫಿಡೆಂಟ್ ಗ್ರೂಪ್ಸ್ನ ಚೇರ್ಮನ್ ಸಿ.ಜೆ ರಾಯ್ ಆತ್ಮಹತ್ಯಗೆ ಶರಣು
31 ವರ್ಷಗಳ ಹಿಂದೆ ಮಾರಿದ್ದ ಕಾರನ್ನು ಮರು ಖರೀದಿ ಮಾಡಿದ್ದ ರಾಯ್
25 ವರ್ಷದ ಯುವಕನಾಗಿದ್ದಾಗ ರಾಯ್ ಬಳಿಯಿತ್ತು ಮಾರುತಿ 800
ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ಸ್ನ ಚೇರ್ಮನ್ ಸಿ.ಜೆ ರಾಯ್ (C J Roy) ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಿ.ಜೆ ರಾಯ್ ಅವರು ರೀಯಲ್ ಎಸ್ಟೇಟ್ ಕ್ಷೇತ್ರದಲ್ಲಿ ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿದ್ದವರಾಗಿದ್ದರು. ಸಾಕಷ್ಟು ಹಣದ ಜತೆಗೆ ಖ್ಯಾತಿಯನ್ನು ಗಳಿಸಿದ್ದ ರಾಯ್ ಇಂದು ತಮ್ಮ ಬಂಗಲೆಯಲ್ಲಿ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ರಾಯ್ ಅವರ ಮೇಲೆ ನಿರಂತರ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ನಡೆಯುತ್ತಿದ್ದ ಹಿನ್ನಲೆ ಆತ್ಮ,ಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ. ಪೊಲೀಸ್ ತನಿಖೆ ನಂತರ ಸತ್ಯಾಸತ್ಯತೆ ಬಹಿರಂಗವಾಗ ಬೇಕಿದೆ.
ಮಾರುತಿ 800 ಕಾರನ್ನು ಮರು ಖರೀದಿಸಿದ್ದ ರಾಯ್!
ಕಾನ್ಫಿಡೆಂಟ್ ಗ್ರೂಪ್ನ ಸಂಸ್ಥಾಪಕ, ಚೇರ್ಮನ್ ಆಗಿದ್ದ ಸಿ.ಜೆ ರಾಯ್ ಬಳಿ ಐಶಾರಾಮಿ ಕಾರುಗಳ ಸಂಖ್ಯೆಗೆ ಬರವೇ ಇರಲಿಲ್ಲ. ರಾಯ್ ಬಳಿ ಸುಮಾರು 12 ರೋಲ್ಸ್ ರಾಯ್, ಬುಗಾಟಿ, ಬೆಂಟ್ಲಿ , ಮರ್ಸಿಡಿಸ್ ಬೆಂಜ್ ಸೇರಿದಂತೆ ಹತ್ತು ಹಲವಾರು ದುಬಾರಿ ಕಾರುಗಳು ಗ್ಯಾರೆಜ್ನಲ್ಲಿ ನಿಂತಿವೆ.
ಇಷ್ಟೇಲ್ಲಾ ಕಾರುಗಳು ಇದ್ದರೂ ಕೂಡ ರಾಯ್ ಮಾರುತಿ 800 ಕಾರೊಂದನ್ನು ಮರು ಖರೀದಿ ಮಾಡುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡಿದ್ದರು. ಮಾರುತಿ 800 ಕಾರನ್ನು ಮರು ಖರೀದಿ ಮಾಡಿದ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದ ರಾಯ್ ನಾನು ಈಗ ಖರೀದಿ ಮಾಡಿರುವ ಕಾರು ನನ್ನ ಹೃದಯಕ್ಕೆ ಹತ್ತಿರವಾದ ಕಾರಾಗಿದ್ದು ಈ ಕಾರನ್ನು ಹುಡುಕಿಕೊಟ್ಟ ವ್ಯಕ್ತಿಗೆ 10 ಲಕ್ಷ ಬಹುಮಾನ ಕೊಟ್ಟಿದ್ದಾಗಿ ತಿಳಿಸಿದ್ದರು.
ಅಷ್ಟಕ್ಕೂ ರಾಯ್ ಮರು ಖರೀದಿಸಿದ ಮಾರುತಿ 800 ಕಾರು ಮೂಲತಃ ರಾಯ್ ಅವರ ಮೊದಲ ಕಾರಾಗಿತ್ತಂತೆ. ಆ ಕಾರನ್ನು ರಾಯ್ 1994 ರಲ್ಲಿ ಅಂದರೆ ಸುಮಾರು 31 ವರ್ಷಗಳ ಹಿಂದೆ ರಾಯ್ ಅವರು 25 ವರ್ಷದ ಚಿರ ಯುವಕನಿದ್ದಾಗ ಈ ಕಾರನ್ನು ಬಹಳ ಇಷ್ಟಪಟ್ಟು ಖರೀದಿ ಮಾಡಿದ್ದರಂತೆ.
ಆದರೆ ಕಾಲಾಂತರದಲ್ಲಿ ಹಣದ ಅತ್ಯಂತ ಅವಶ್ಯಕತೆ ಇದ್ದಾಗ ಒಲ್ಲದ ಮನಸ್ಸಿನಿಂದ ಈ ಕಾರನ್ನು ಮಾರಬೇಕಾಗಿ ಬಂತು ಎಂದು ರಾಯ್ ಬರೆದುಕೊಂಡಿದ್ದರು. 1994 ರಲ್ಲಿ ಮಾರುತಿ 800 ಕಾರು ಭಾರತದಲ್ಲಿ ಸೂಪರ್ ಸ್ಟಾರ್ ಕಾರಾಗಿತ್ತು. ಆ ಸಮಯದಲ್ಲಿ ಈ ಕಾರಿಗೆ ನಾನು 1.10 ಲಕ್ಷ ಹಣವನ್ನು ಕೊಟ್ಟು ಖರೀದಿಮಾಡಿದ್ದೆ. ಅದೇ ಸಮಯದಲ್ಲಿ ಸರ್ಜಾಪುರದಲ್ಲಿ ಇದೇ ಹಣದಲ್ಲಿ 2 ಎಕರೆ ಜಾಗ ದೊರೆಯುತ್ತಿತ್ತು, ಆದ್ದರಿಂದ ಕಾರನ್ನು ಮಾರಬೇಕಾಯಿತು. ಈಗ ಸಮಯ ಕೂಡಿಬಂದಿದೆ ಕಾರು ಮತ್ತೆ ನನ್ನನ್ನು ಸೇರಿದೆ ಎಂದು ಸಿ.ಜೆ. ರಾಯ್ ಬರೆದುಕೊಂಡಿದ್ದರು.
ಉದ್ಯಮಿ ಸಿ.ಜೆ ರಾಯ್ ರಿಯಾಲಿಟಿ ಶೋಗಳಿಗೆ ಸ್ಪಾಂನ್ಸರ್ಶಿಪ್ ನೀಡುವ ಮೂಲಕ ಮನರಂಜನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಸರಿಗಮಪ ಸಿಸನ್ 15 ರ ವಿಜೇತ ಕೀರ್ತನ್ ಹೊಳ್ಳ ಮತ್ತು ರನ್ನರ್ ಅಪ್ ಆಗಿದ್ದ ಬಿಗ್ಬಾಸ್ ಸಿಸನ್ 11 ರ ವಿನ್ನರ್ ಖ್ಯಾತಿಯ ಹನುಮಂತ್ ಲಮಾಣಿಗೆ 35ಲಕ್ಷ ರೂ ಮೌಲ್ಯದ ಪ್ಲಾಟ್ನ್ನು ರಾಯ್ ಉಡುಗೊರೆಯಾಗಿ ನೀಡಿದ್ದರು. ಇದಷ್ಟೇ ಅಲ್ಲದೆ ಉತ್ತಮ ಅಂಕ ಪಡೆದ 201 ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆಂದು 1 ಕೋಟಿ ಹಣವನ್ನು ಮೀಸಲಿಟ್ಟಿದ್ದರು ಇತ್ತೀಚಿಗೆ ತಮಿಳಿನ ಐಡೆಂಟಿಟಿ ಎಂಬ ಸಿನಿಮಾಕ್ಕೆ ಬಂಡವಾಳವನ್ನು ಹೂಡಿದ್ದರು,(ಏಜನ್ಸೀಸ್).