ಫ್ಯಾಮಿಲಿ ಪಾಲಿಟಿಕ್ಸ್​ಗೆ ಬೈ..! ಸೇನೆಗೆ ಜೈ... ಸಿಂಗಾಪುರ್​ ಆರ್ಮಿ ತರಬೇತಿಗೆ ಅಣಿಯಾದ ಲಾಲು ಮೊಮ್ಮಗ..Lalu Prasad Yadav

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಮೊಮ್ಮಗ ಆದಿತ್ಯ ಯಾದವ್
  • ಆದಿತ್ಯ ಯಾದವ್ ಸಿಂಗಾಪುರದಲ್ಲಿ 2 ವರ್ಷಗಳ ಕಾಲ ಕಡ್ಡಾಯ ಬೇಸಿಕ್​ ಮಿಲಿಟರಿ ಟ್ರೈನಿಂಗ್ ಪ್ರಾರಂಭಿಸಿದ್ದಾರೆ
  • ಈ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಮಗನ ನಿರ್ಧಾರಕ್ಕೆ ಹೆಮ್ಮೆ ಪಟ್ಟ ತಾಯಿ
ಪಾಟ್ನಾ: ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ (Lalu Prasad Yadav) ಮೊಮ್ಮಗ ಆದಿತ್ಯ ಯಾದವ್ ಸಿಂಗಾಪುರದಲ್ಲಿ ಎರಡು ವರ್ಷಗಳ ಕಾಲ ಕಡ್ಡಾಯ ಬೇಸಿಕ್​ ಮಿಲಿಟರಿ ಟ್ರೈನಿಂಗ್​ (BMT) ಪ್ರಾರಂಭಿಸಿದ್ದು, ಲಾಲೂರ ಮಗಳು ಆದಿತ್ಯಾ ತಾಯಿ ರೋಹಿಣಿ ಆಚಾರ್ಯ, ಈ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಮಗನ ಈ ನಿರ್ಧಾರದ ಬಗ್ಗೆ ಹೆಮ್ಮೆ ಪಟ್ಟುಕೊಂಡಿದ್ದಾರೆ.

ಪೋಸ್ಟ್​ನಲ್ಲೇನಿದೆ?

ಇಂದು ನನ್ನ ಹೃದಯ ತುಂಬಿ ಬಂದಿದೆ. ಪದವಿ ಪೂರ್ವ ಶಿಕ್ಷಣ ಮುಗಿಸಿದ ಬಳಿಕ, ನಮ್ಮ ಹಿರಿಯ ಮಗ ಆದಿತ್ಯ(18) 2 ವರ್ಷಗಳ ಮೂಲಭೂತ ಮಿಲಿಟರಿ ತರಬೇತಿಗೆ ಅಣಿಯಾಗಿದ್ದಾನೆ. ಆದಿತ್ಯ ನೀನು ಧೈರ್ಯ ಶಾಲಿ ಮತ್ತು ಶಿಸ್ತುಬದ್ಧ. ಅದರಿಂದ ಏನನ್ನು ಮಾಡುತ್ತೀಯ ಎಂದು ಎಲ್ಲರಿಗೂ ತೋರಿಸು. ಯೋಧರು ಜೀವನದ ಕಠಿಣ ಯುದ್ಧಗಳಲ್ಲಿ ತಮ್ಮನ್ನು ತಾವು ಹೇಗೆ ರೂಪಿಸಿಕೊಂಡಿದ್ದಾರೆ ಎಂಬುದನ್ನು ಸದಾ ನೆನಪಿಟ್ಟುಕೋ. ನಮ್ಮೆಲ್ಲರ ಪ್ರೀತಿ ಮತ್ತು ಆಶಿರ್ವಾದ ಸದಾ ನಿನ್ನೊಂದಿಗೆ ಇರುತ್ತದೆ ಎಂದು ತಮ್ಮ ಎಕ್ಸ್​​ (X) ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಸಂಚಲನ ಮೂಡಿಸಿದ ಪೋಸ್ಟ್ 
ರೋಹಿಣಿ ಆಚಾರ್ಯ ಮಾಡಿದ ಪೋಸ್ಟ್​ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದಂತೆಯೇ ಅನೇಕ ಬಳಕೆದಾರರು ಆದಿತ್ಯ ಮಿಲಿಟರಿ ತರಬೇತಿಗಾಗಿ ಎಲ್ಲಿಗೆ ಹೋಗುತ್ತಿದ್ದಾರೆ ಎಂದು ಕಾಮೆಂಟ್​ಮಾಡಿದ್ದಾರೆ. ಇದಾದ ಬಳಿಕ ಈ ಪೋಸ್ಟ್ ವ್ಯಾಪಕ ಚರ್ಚೆಗೆ ನಾಂದಿ ಹಾಡಿದ್ದು, ಜನರು ಇದರ ಹಿನ್ನೆಲೆ ಮತ್ತು ದೇಶವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು.

ಲಾಲು ಯಾದವ್ ಅವರ ಮೊಮ್ಮಗ ಆದಿತ್ಯ ಯಾರು?

ಆದಿತ್ಯ ಬಿಹಾರದ ಮಾಜಿ ಮುಖ್ಯಮಂತ್ರಿಗಳಾದ ಲಾಲು ಪ್ರಸಾದ್ ಯಾದವ್ ಮತ್ತು ರಾಬ್ರಿ ದೇವಿ ಅವರ ಒಂಬತ್ತು ಮಕ್ಕಳಲ್ಲಿ ಎರಡನೇ ಮಗಳಾದ ರೋಹಿಣಿ ಆಚಾರ್ಯರ ಹಿರಿಯ ಮಗ. ಅವರ ತಂದೆ  ಮಾಜಿ ಆದಾಯ ತೆರಿಗೆ ಆಯುಕ್ತ-ಶ್ರೇಣಿಯ ಅಧಿಕಾರಿ ರಾವ್ ರಣವಿಜಯ್ ಸಿಂಗ್ ಆಗಿದ್ದಾರೆ.
ಆದಿತ್ಯ ಸಿಂಗಾಪುರದ ರಾಷ್ಟ್ರೀಯ ಸೇವೆ (NS) ಚೌಕಟ್ಟಿನ ಅಡಿಯಲ್ಲಿ ಮಿಲಿಟರಿ ತರಬೇತಿ (BMT) ಅನ್ನು ಪ್ರಾರಂಭಿಸಿದ್ದಾರೆ. ಇದು ಶಿಸ್ತು, ದೈಹಿಕ ಸದೃಢತೆ, ಸ್ಥಿತಿಸ್ಥಾಪಕತ್ವ ತಂಡದ ಕೆಲಸ ಮತ್ತು ನಾಯಕತ್ವ ಕೌಶಲ್ಯಗಳನ್ನು ಬೆಳೆಸಲು BMT ಯನ್ನು ವಿನ್ಯಾಸಗೊಳಿಸಲಾಗಿದೆ. ಇಲ್ಲಿ ತರಬೇತುದಾರರಿಗೆ ಕಠಿಣ ದೈಹಿಕ ಸ್ಥಿತಿ, ಡ್ರಿಲ್ ಮತ್ತು ಶಸ್ತ್ರಾಸ್ತ್ರ ನಿರ್ವಹಣೆಯ ಮೂಲಭೂತ ಅಂಶಗಳನ್ನು ಹೇಳಿಕೊಡಲಾಗುತ್ತದೆ.
BMT ಸಮಯದಲ್ಲಿ ಕಾರ್ಯಕ್ಷಮತೆಯ ಆಧಾರದ ಮೇಲೆ, ತರಬೇತುದಾರರನ್ನು ಸಿಂಗಾಪುರ್ ಸಶಸ್ತ್ರ ಪಡೆಗಳಲ್ಲಿ ನಿರ್ದಿಷ್ಟ ಪಾತ್ರಗಳಿಗೆ ನಿಯೋಜಿಸಲಾಗುತ್ತದೆ. ಇದರಲ್ಲಿ  ಸೈನ್ಯ, ನೌಕಾಪಡೆ ಮತ್ತು ವಾಯುಪಡೆ ಹಾಗೂ ಯುದ್ಧೇತರ ಮತ್ತು ಬೆಂಬಲನ್ನು ನೀಡಲಾಗುತ್ತದೆ. 2 ವರ್ಷಗಳ ಪೂರ್ಣಾವಧಿಯನ್ನು ಮುಗಿಸಿದ ನಂತರ, ಅವರ ಶ್ರೇಣಿ ಮತ್ತು ಅವರಿಗೆ ತಕ್ಕಂತೆ  40 ಅಥವಾ 50 ವರ್ಷ ವಯಸ್ಸಿನವರೆಗೆ ಮೀಸಲು ಬಾಧ್ಯತೆಗಳನ್ನು ನೀಡಲಾಗುತ್ತದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net