2035 ಕ್ಕೆ ಕ್ರೈಸ್ತರನ್ನು ಹಿಂದಿಕ್ಕಿ ಜಗತ್ತಿನ ನಂಬರ್ 1 ಧರ್ಮವಾಗಲಿದೆ ಇಸ್ಲಾಂ! ಹಿಂದೂಗಳ ಸ್ಥಿತಿ ಏನಾಗಲಿದೆ ಗೊತ್ತಾ? ‘ಪ್ಯೂ ರಿಸರ್ಚ್’ ಸ್ಫೋಟಕ ವರದಿ|Pew Research

According to a report by the Pew Research Center, Islam is set to overtake Christianity to become the world's largest religion by 2035, driven by higher birth rates.
ಪ್ಯೂ ರಿಸರ್ಚ್ ಸೆಂಟರ್ (Pew Research Center) ವರದಿಯ ಪ್ರಕಾರ, ಹೆಚ್ಚಿನ ಜನನ ದರದಿಂದಾಗಿ 2035ರ ವೇಳೆಗೆ ಇಸ್ಲಾಂ ಧರ್ಮವು ಕ್ರೈಸ್ತ ಧರ್ಮವನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ಧರ್ಮವಾಗಲಿದೆ.
Published on: 

ವಾಷಿಂಗ್ಟನ್: ಪ್ರಖ್ಯಾತ ಸಂಶೋಧನಾ ಸಂಸ್ಥೆ ‘ಪ್ಯೂ ರಿಸರ್ಚ್ ಸೆಂಟರ್’ ಬಿಡುಗಡೆ ಮಾಡಿರುವ ಹೊಸ ವರದಿಯೊಂದು ಈಗ ಇಡೀ ವಿಶ್ವದ ಗಮನ ಸೆಳೆಯುತ್ತಿದೆ. ಈ ವರದಿಯ ಪ್ರಕಾರ, 2035ರ ವೇಳೆಗೆ ಇಸ್ಲಾಂ ಧರ್ಮವು ಕ್ರೈಸ್ತ ಧರ್ಮವನ್ನು ಹಿಂದಿಕ್ಕಿ ಜಗತ್ತಿನ ಅತಿದೊಡ್ಡ ಧರ್ಮವಾಗಿ ಹೊರಹೊಮ್ಮಲಿದೆ ಎಂದು ಹೇಳಲಾಗುತ್ತಿದೆ.

ಈ ಬದಲಾವಣೆಗೆ ಅಸಲಿ ಕಾರಣವೇನು?

ಜಗತ್ತಿನಲ್ಲಿ ಕ್ರೈಸ್ತ ಮತ್ತು ಮುಸ್ಲಿಂ ಎರಡೂ ಧರ್ಮಗಳ ಜನಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಮುಸ್ಲಿಮರ ಜನಸಂಖ್ಯೆ ಉಳಿದೆಲ್ಲಾ ಧರ್ಮಗಳಿಗಿಂತ ವೇಗವಾಗಿ ಬೆಳೆಯುತ್ತಿದೆ. ಇದಕ್ಕೆ ಮತಾಂತರದ, ಬದಲಾಗಿ ಮುಸ್ಲಿಂ ಸಮುದಾಯದಲ್ಲಿರುವ ಹೆಚ್ಚಿನ ಜನನ ದರವೇ ಮುಖ್ಯ ಕಾರಣ ಎಂದು ಪ್ಯೂ ಸಂಸ್ಥೆಯ ತಜ್ಞ ಕಾನ್ರಾಡ್ ಹ್ಯಾಕೆಟ್ ಸ್ಪಷ್ಟಪಡಿಸಿದ್ದಾರೆ.

ಅಂಕಿಅಂಶಗಳ ಪ್ರಕಾರ, 2020 ರಿಂದ 2025 ರ ನಡುವೆ ಮುಸ್ಲಿಂ ಮಹಿಳೆಯರಿಗೆ ಸರಾಸರಿ 3.1 ಮಕ್ಕಳಿದ್ದರೆ, ಕ್ರೈಸ್ತ ಮಹಿಳೆಯರಿಗೆ 2.5 ಮಕ್ಕಳಿದ್ದರು. ಉಳಿದ ಧರ್ಮದ ಮಹಿಳೆಯರಲ್ಲಿ ಈ ಪ್ರಮಾಣ ಕೇವಲ 1.6 ರಷ್ಟಿದೆ. ಇದೇ ಅವಧಿಯಲ್ಲಿ ಜಗತ್ತಿನಾದ್ಯಂತ ಮುಸ್ಲಿಂ ತಾಯಂದಿರಿಗೆ ಸುಮಾರು 25.2 ಕೋಟಿ ಮಕ್ಕಳು ಜನಿಸಿದ್ದರೆ, ಕ್ರೈಸ್ತ ತಾಯಂದಿರಿಗೆ 20.8 ಕೋಟಿ ಮಕ್ಕಳು ಜನಿಸಿವೆ.

ಅಂಕಿಅಂಶಗಳು ಹೇಳುವುದೇನು?

2020ರಲ್ಲಿ ಜಗತ್ತಿನಲ್ಲಿ 227 ಕೋಟಿ ಕ್ರೈಸ್ತರು ಮತ್ತು 202 ಕೋಟಿ ಮುಸ್ಲಿಮರಿದ್ದರು. ಆದರೆ 2035 ರ ವೇಳೆಗೆ ಮುಸ್ಲಿಮರ ಸಂಖ್ಯೆ 2.57 ಶತಕೋಟಿಗೆ ಏರಲಿದ್ದು, ಕ್ರೈಸ್ತರ ಸಂಖ್ಯೆ 2.52 ಶತಕೋಟಿಯಷ್ಟಿರಲಿದೆ. ಇನ್ನು 2070 ರ ವೇಳೆಗೆ ಮುಸ್ಲಿಮರ ಜನಸಂಖ್ಯೆ ಬರೋಬ್ಬರಿ 3.6 ಶತಕೋಟಿ ದಾಟಲಿದ್ದು, ಕ್ರೈಸ್ತರ ಸಂಖ್ಯೆ 3 ಶತಕೋಟಿಗಿಂತ ಸ್ವಲ್ಪ ಕಡಿಮೆ ಇರಲಿದೆ ಎಂದು ವರದಿ ಅಂದಾಜಿಸಿದೆ.

ಇದೇ ವೇಗ ಮುಂದುವರಿದರೆ, 2070 ರ ವೇಳೆಗೆ ಸದ್ಯ ಅತಿ ಹೆಚ್ಚು ಮುಸ್ಲಿಮರನ್ನು ಹೊಂದಿರುವ ಇಂಡೋನೇಷ್ಯಾವನ್ನು ಹಿಂದಿಕ್ಕಿ ಪಾಕಿಸ್ತಾನ ಮೊದಲ ಸ್ಥಾನಕ್ಕೇರಲಿದೆ. ನಂತರದ ಸ್ಥಾನಗಳಲ್ಲಿ ಭಾರತ, ನೈಜೀರಿಯಾ ಮತ್ತು ಇಂಡೋನೇಷ್ಯಾ ಇರಲಿವೆ.

Also Read
"ಪ್ರತಿಯೊಬ್ಬ ಭಾರತೀಯನ ರಕ್ತದಲ್ಲೂ ರಾಮನಿದ್ದಾನೆ" ಎಂದ ಜಾವೇದ್ ಅಖ್ತರ್: ‘ಹಾಗಿದ್ದರೆ ಹೆಸರು ಬದಲಾಯಿಸಿಕೊಳ್ಳಿ’; ಮೌಲಾನಾ ಕಿಡಿ! Javed Akhtar
According to a report by the Pew Research Center, Islam is set to overtake Christianity to become the world's largest religion by 2035, driven by higher birth rates.

ಅಮೆರಿಕ ಮತ್ತು ಯುರೋಪ್‌ನಲ್ಲಿ ಕ್ರೈಸ್ತರ ಸಂಖ್ಯೆ ಇಳಿಕೆ!

ಮತ್ತೊಂದು ಅಚ್ಚರಿಯ ಸಂಗತಿಯೆಂದರೆ, ಕ್ರೈಸ್ತ ಬಹುಸಂಖ್ಯಾತ ರಾಷ್ಟ್ರಗಳಾದ ಅಮೆರಿಕ ಮತ್ತು ಕೆನಡಾದಲ್ಲಿ ಮುಂದಿನ ದಿನಗಳಲ್ಲಿ ಕ್ರೈಸ್ತರು ಅಲ್ಪಸಂಖ್ಯಾತರಾಗಲಿದ್ದಾರೆ. ಸದ್ಯ ಅಮೆರಿಕದಲ್ಲಿ 62% ಇರುವ ಕ್ರೈಸ್ತರು 2065 ರ ವೇಳೆಗೆ 50% ಕ್ಕಿಂತ ಕಡಿಮೆಯಾಗಲಿದ್ದಾರೆ. ಕೆನಡಾದಲ್ಲಿ 2030 ರ ಹೊತ್ತಿಗೆ ಈ ಪರಿಸ್ಥಿತಿ ಬರಲಿದೆ.

ಇದಕ್ಕೆ ಮುಖ್ಯ ಕಾರಣ ಅಲ್ಲಿ ಯಾವುದೇ ಧರ್ಮವನ್ನು ನಂಬದ ನಾಸ್ತಿಕರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವುದು. 2070 ರ ವೇಳೆಗೆ ಯುರೋಪ್‌ನ ಕ್ರೈಸ್ತ ಜನಸಂಖ್ಯೆ ಮೂರನೇ ಒಂದು ಭಾಗದಷ್ಟು ಕಡಿಮೆಯಾಗಲಿದ್ದು, ಅಲ್ಲಿ ಮುಸ್ಲಿಮರ ಪಾಲು 6% ರಿಂದ 13% ಕ್ಕೆ ಏರಲಿದೆ.

ಹಿಂದೂ ಮತ್ತು ಬೌದ್ಧ ಧರ್ಮಗಳ ಸ್ಥಿತಿ ಏನು?

ಮುಂದಿನ 50 ವರ್ಷಗಳಲ್ಲಿ ಹಿಂದೂಗಳು ಮತ್ತು ಯಹೂದಿಗಳ ಸಂಖ್ಯೆ ಹೆಚ್ಚಾದರೂ, ಜಾಗತಿಕ ಜನಸಂಖ್ಯೆಯಲ್ಲಿ ಅವರ ಶೇಕಡಾವಾರು ಪಾಲು ಕಡಿಮೆಯಾಗಲಿದೆ. ಇನ್ನು ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ಜನಸಂಖ್ಯೆ ಕುಸಿಯುತ್ತಿರುವುದರಿಂದ ಜಗತ್ತಿನಲ್ಲಿ ಬೌದ್ಧರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಲಿದೆ.

‘ಇದು ಸೋಲು-ಗೆಲುವಿನ ವಿಷಯವಲ್ಲ’

ಈ ವರದಿಯ ಬಗ್ಗೆ ಪ್ರತಿಕ್ರಿಯಿಸಿರುವ ಪ್ಯೂ ಸಂಸ್ಥೆಯ ನಿರ್ದೇಶಕ ಅಲನ್ ಕೂಪರ್‌ಮನ್, ಮುಸ್ಲಿಮರ ಜನಸಂಖ್ಯೆ ಹೆಚ್ಚಾಗುತ್ತಿದೆ ಎಂದರೆ ಅದು ಕ್ರೈಸ್ತರ ಸೋಲು ಎಂದು ಬಿಂಬಿಸುವುದು ತಪ್ಪು. ಎರಡೂ ಧರ್ಮಗಳು ಬೆಳೆಯುತ್ತಿವೆ. ಹೆಚ್ಚಿನ ಬೆಳವಣಿಗೆ ಆಫ್ರಿಕಾ ದೇಶಗಳಲ್ಲಿ ನಡೆಯುತ್ತಿದೆ ಎಂದಿದ್ದಾರೆ.

ಹಾರ್ವರ್ಡ್ ಸಂಶೋಧಕಿ ಗಿನಾ ಜುರ್ಲೋ ಮಾತನಾಡಿ, ಈ ಬದಲಾವಣೆಯ ನಡುವೆ ಕ್ರೈಸ್ತ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಪರಸ್ಪರ ತಿಳುವಳಿಕೆ ಮತ್ತು ಸೌಹಾರ್ದತೆ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ, ಮುಂದಿನ ದಶಕಗಳಲ್ಲಿ ಜಗತ್ತಿನ ಧಾರ್ಮಿಕ ನಕ್ಷೆಯೇ ಬದಲಾಗಲಿದ್ದು, ಏಷ್ಯಾ ಮತ್ತು ಆಫ್ರಿಕಾ ಖಂಡಗಳು ಜಾಗತಿಕ ಜನಸಂಖ್ಯೆಯ ಕೇಂದ್ರಬಿಂದುವಾಗಲಿವೆ, (ಏಜೆನ್ಸೀಸ್​).